ಮಡಿಕೇರಿ, ಏ. ೨೦: ಪಾರಾಣೆ ಸನಿಹದ ಬಾವಲಿ ಗ್ರಾಮದ ಶ್ರೀ ಪುತ್ತುಮಾಡು ಅಯ್ಯಪ್ಪ ಅಮ್ಮೆಚಾಮುಂಡಿ ದೇವರ ಉತ್ಸವ ತಾ. ೨೨ ಹಾಗೂ ೨೩ ರಂದು ನಡೆಯಲಿದೆ. ತಾ. ೨೨ ರಂದು ಕಲಶಪೂಜೆ, ಎತ್ತುಪೋರಾಟ, ಹರಕೆ, ತಾ. ೨೩ ರಂದು ದೊಡ್ಡಹಬ್ಬ, ದೇವರ ಅವಭೃತಸ್ತಾನ ಮತ್ತಿತರ ಕೈಂಕರ್ಯಗಳು ಜರುಗಲಿವೆ ಎಂದು ತಕ್ಕಮುಖ್ಯಸ್ಥರು, ಆಡಳಿತ ಮಂಡಳಿಯವರು ತಿಳಿಸಿದ್ದಾರೆ.