ಚೆಟ್ಟಳ್ಳಿ, ಏ. ೨೦: ಪೊನ್ನಂಪೇಟೆಯ ಕೂಕಂಡ ಕುಟುಂಬದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಕೂಕಂಡ ಕುಟುಂಬದ ಪಟ್ಟೆದಾರರಾದ ಕೂಕಂಡ ರಾಜ ಕಾವೇರಪ್ಪ, ಹಿರಿಯರಾದ ಬಿದ್ದಂಡ ಗೌರು ಸುಬ್ಬಯ್ಯ ಹಾಗೂ ಕೂಕಂಡ ಗಂಗಮ್ಮ ಕುಶಾಲಪ್ಪ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಪತ್ರಿಕಾ ಕ್ಷೇತ್ರ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತಿರುವ ಪುತ್ತರಿರ ಕರುಣ್ ಕಾಳಯ್ಯ ಅವರಿಗೆ ಕೂಕಂಡ ರಾಜ ಕಾವೇರಪ್ಪ, ಕೂಕಂಡ ಗಂಗಮ್ಮ ಕುಶಾಲಪ್ಪ ಹಾಗೂ ಬಿದ್ದಂಡ ಗೌರು ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು. ಕಾವೇರಪ್ಪ ಸ್ವಾಗತಿಸಿ, ಡಾನ್ ಬೋಪಣ್ಣ ವಂದಿಸಿ, ಸೋನಿಕಾ ಬೋಪಣ್ಣ ನಿರೂಪಿಸಿದರು.