ಮಡಿಕೇರಿ, ಏ. ೧೯: ಕೊಡಗು ಜಿಲ್ಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೊಸ ಮುಖಗಳಿಗೆ ಅವಕಾಶ ನೀಡಬಹುದೆಂಬ ನಿರೀಕ್ಷೆ ಇತ್ತು. ಆದರೆ ಬಿಜೆಪಿ ಹೈಕಮಾಂಡ್ ಮತ್ತೆ ಹಾಲಿ ಶಾಸಕರಿಗೆ ಮಣೆ ಹಾಕಿದೆ.

ರಾಜ್ಯದ ಬಹುತೇಕ ಕಡೆಗಳಲ್ಲಿ ಬಿಜೆಪಿ ಹಾಲಿ ಶಾಸಕರಿಗೆ ಕೊಕ್ ನೀಡಿ, ಹೊಸ ಮುಖಗಳಿಗೆ ಮಣೆ ಹಾಕಲಾಗಿದ್ದು, ಅದೇ ಮಾದರಿಯಲ್ಲಿ ಕೊಡಗು ಜಿಲ್ಲೆಯ ಎರಡು ಕ್ಷೇತ್ರದಲ್ಲಿ ಬದಲಾವಣೆಯಾಗಬಹುದೆಂಬ ನಿರೀಕ್ಷೆಗಳು ಬಿಜೆಪಿ ಪಾಳಯದಲ್ಲಿ ಬಿಗಿಯಾಗಿ ಕೇಳಿ ಬಂದಿತ್ತು.

ಆದರೆ ಹೊಸ ಮುಖಗಳಿಗೆ ಈ ಬಾರಿ ಅವಕಾಶ ನೀಡಿದಲ್ಲಿ, ಬಿಜೆಪಿಗೆ ಕಷ್ಟಕರವಾಗಲಿದೆ ಎಂಬ ಮಾಹಿತಿ ಬಿಜೆಪಿ ಆಂತರಿಕ ಸಮೀಕ್ಷೆಯಲ್ಲಿ ತಿಳಿದು ಬಂದ ಹಿನ್ನೆಲೆಯಲ್ಲಿ ಮತ್ತೆ ವೀರಾಜಪೇಟೆಯಲ್ಲಿ ಕೆ.ಜಿ. ಬೋಪಯ್ಯ ಹಾಗೂ ಮಡಿಕೇರಿ ಕ್ಷೇತ್ರದಲ್ಲಿ ಅಪ್ಪಚ್ಚು ರಂಜನ್ ಅವರಿಗೆ ಮತ್ತೊಮ್ಮೆ ಬಿಜೆಪಿ ಅವಕಾಶ ನೀಡಿದೆ.

ಆರನೇ ಬಾರಿಗೆ ಚುನಾವಣೆ ಸ್ಪರ್ಧಿಸುತ್ತಿರುವ ಕೆ.ಜಿ.ಬಿ.

ಕೆ.ಜಿ. ಬೋಪಯ್ಯ ಅವರು ಇದೀಗ ಆರನೇ ಬಾರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ತಮ್ಮ ಕಳೆದ ಐದು ಚುನಾವಣೆಯಲ್ಲಿ ಒಂದು ಬಾರಿ ಮಾತ್ರ ಸೋಲು ಕಂಡಿರುವ ಕೆ.ಜಿ. ಬೋಪಯ್ಯ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. ಕಳೆದ ಮೂರು ಅವಧಿಯಿಂದ ವೀರಾಜಪೇಟೆ ಕ್ಷೇತ್ರದಿಂದ ಗೆದ್ದು ಬರುತ್ತಿದ್ದಾರೆ. ವೀರಾಜಪೇಟೆ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.

೧೯೯೯ ರಲ್ಲಿ ಮೊದಲ ಬಾರಿಗೆ ಮಡಿಕೇರಿ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಕೆ.ಜಿ. ಬೋಪಯ್ಯ ಅವರು, ಮೊದಲ ಎಲೆಕ್ಷನ್‌ನಲ್ಲಿ ಸೋಲು ಕಂಡಿದ್ದರು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಎಂ.ಎA. ನಾಣಯ್ಯ ವಿರುದ್ಧ ೧೭,೩೭೮ ಮತಗಳ ಅಂತರದಿAದ ಸೋತಿದ್ದರು.

೨೦೦೪ ರಲ್ಲಿ ಕೆ.ಜಿ.ಬಿ., ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಮಾದಪ್ಪ ವಿರುದ್ಧ ೮೦೦೦ ಮತಗಳ ಅಂತರದಿAದ ಮೊದಲ ಗೆಲುವು ಸಾಧಿಸಿದ್ದರು.

೨೦೦೮ ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಗೊAಡ ಬಳಿಕ ಕೆ.ಜಿ.ಬಿ. ವೀರಾಜಪೇಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ೨೦೦೪ ವರೆಗೆ ವೀರಾಜಪೇಟೆ ಕ್ಷೇತ್ರವು ಮೀಸಲು ಕ್ಷೇತ್ರವಾಗಿತ್ತು.

ಕ್ಷೇತ್ರ ಪುನರ್‌ವಿಂಗಡಣೆಗೊAಡ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ವೀರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀಣಾ ಅಚ್ಚಯ್ಯ ಅವರ ವಿರುದ್ಧ ೧೫,೦೭೩ ಮತಗಳ ಅಂತರದಿAದ ಗೆಲುವು ಸಾಧಿಸಿದ್ದರು. ೨೦೧೩ ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿದ್ದಾಟಂಡ ಪ್ರದೀಪ್ ವಿರುದ್ಧ ೩,೪೧೪ ಮತಗಳ ಅಂತರದಿAದ ಗೆದ್ದಿದ್ದರು.

೨೦೧೮ ರಲ್ಲಿಯೂ ಬೋಪಯ್ಯ ಕಾಂಗ್ರೆಸ್ ಅಭ್ಯರ್ಥಿ ಅರುಣ್ ಮಾಚಯ್ಯ ವಿರುದ್ಧ ೧೩,೩೫೩ ಮತಗಳ ಅಂತರದಿAದ ಗೆದ್ದಿದ್ದರು. ಪ್ರತೀ ಚುನಾವಣೆಯಲ್ಲಿ ಹೊಸ ಮುಖಗಳನ್ನು ಎದುರಿಸುತ್ತಿರುವ ಕೆ.ಜಿ. ಬೋಪಯ್ಯ ಈ ಬಾರಿಯ ಚುನಾವಣೆಯಲ್ಲಿ ವೀರಾಜಪೇಟೆ ಕ್ಷೇತ್ರದಲ್ಲಿ ಹೈಕೋರ್ಟ್ ಹಿರಿಯ ವಕೀಲ ಹಾಗೂ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಅವರನ್ನು ಎದುರಿಸಲಿದ್ದಾರೆ.

ಏಳನೇ ಬಾರಿಗೆ ಕಣಕ್ಕಿಳಿದ ಅಪ್ಪಚ್ಚು ರಂಜನ್

ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರು ಏಳನೇ ಬಾರಿಗೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.

೧೯೯೪ ರಲ್ಲಿ ಮೊದಲ ಬಾರಿಗೆ ಸೋಮವಾರಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಪ್ಪಚ್ಚು ರಂಜನ್ ಕಾಂಗ್ರೆಸ್ ಅಭ್ಯರ್ಥಿ ಬಿ.ಎ. ಜೀವಿಜಯ ಅವರ ವಿರುದ್ಧ ೧,೯೨೮ ಮತಗಳ ಅಂತರದಿAದ ಮೊದಲ ಚುನಾವಣೆಯಲ್ಲೇ ಗೆಲುವು ಕಂಡಿದ್ದರು. ೧೯೯೯ ರಲ್ಲಿ ಬಿ.ಎ. ಜೀವಿಜಯ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೈ ತಪ್ಪಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ಕೆ.ಪಿ ಚಂದ್ರಕಲಾ ಸ್ಪರ್ಧಿಸಿದ್ದರು.

ಪಕ್ಷೇತರ ಅಭ್ಯರ್ಥಿ ಜೀವಿಜಯ ಅವರ ವಿರುದ್ಧ ಅಪ್ಪಚ್ಚು ರಂಜನ್ ೩೫೭೩ ಮತಗಳ ಅಂತರದಿAದ ಗೆದ್ದಿದ್ದರು. ೨೦೦೪ ರಲ್ಲಿ ನಡೆದ ಚುನಾವಣೆಯಲ್ಲಿ ಅಪ್ಪಚ್ಚುರಂಜನ್ ಅವರಿಗೆ ಮೊದಲ ಸೋಲಾಯಿತು.

ಕಾಂಗ್ರೆಸ್ ಅಭ್ಯರ್ಥಿ ಬಿ.ಎ. ಜೀವಿಜಯ ಅವರ ವಿರುದ್ಧ ೨೭೬೭ ಮತಗಳ ಅಂತರದಿAದ ಅಪ್ಪಚ್ಚುರಂಜನ್ ಸೋಲು ಕಂಡಿದ್ದರು. ೨೦೦೮ ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯಾದ ಬಳಿಕ ಸೋಮವಾರಪೇಟೆ ಕ್ಷೇತ್ರವೂ ಮಡಿಕೇರಿ ಕ್ಷೇತ್ರದೊಂದಿಗೆ ವಿಲೀನಗೊಂಡಿತ್ತು.

೨೦೦೮ ರಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿಯಾದ ಅಪ್ಪಚ್ಚು ರಂಜನ್ ಕಾಂಗ್ರೆಸ್ ಅಭ್ಯರ್ಥಿ ಬಿ.ಎ. ಜೀವಿಜಯ ಅವರ ವಿರುದ್ಧ ೬೫೮೫ ಮತಗಳ ಅಂತರದಿAದ ಗೆಲುವು ಸಾಧಿಸಿದ್ದರು. ೨೦೧೩ ರಲ್ಲಿ ಬಿ.ಎ. ಜೀವಿಜಯ ಅವರು ಜೆಡಿಎಸ್ ಅಭ್ಯರ್ಥಿಯಾಗಿದ್ದರು.

ಅಪ್ಪಚ್ಚುರಂಜನ್ ಅವರು ೪೬೨೯ ಮತಗಳ ಅಂತರದಿAದ ಗೆಲುವು ಕಂಡಿದ್ದರು. ೨೦೧೮ ರಲ್ಲಿ ಅಪ್ಪಚ್ಚು ರಂಜನ್ ಅವರು ಬಿ.ಎ. ಜೀವಿಜಯ ಅವರ ವಿರುದ್ಧ ೧೬,೦೧೫ ಮತಗಳ ಅಂತರದಿAದ ದೊಡ್ಡ ಅಂತರದಲ್ಲಿ ಗೆಲುವು ಕಂಡಿದ್ದರು. ೧೯೯೪ ರಿಂದ ೨೦೧೮ ವರೆಗೆ ಅಪ್ಪಚ್ಚು ರಂಜನ್ ಅವರಿಗೆ ನೇರ ಪೈಪೋಟಿ ನೀಡುತ್ತಿದ್ದ ಬಿ.ಎ. ಜೀವಿಜಯ ಅವರು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ.

ಅಪ್ಪಚ್ಚು ರಂಜನ್ ಅವರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಮಂಥರ್ ಗೌಡ ಹಾಗೂ ಜೆಡಿಎಸ್ ಪಕ್ಷದ ಅಭ್ಯರ್ಥಿ ನಾಪಂಡ ಮುತ್ತಪ್ಪ ಇಬ್ಬರಲ್ಲಿ ಯಾರು ಪೈಪೋಟಿ ನೀಡಿ ಗೆಲುವು ಸಾಧಿಸಲಿದ್ದಾರೆ ಎಂಬುದು ಕಾದು ನೋಡಬೇಕಾಗಿದೆ. - ಕೆ.ಎಂ. ಇಸ್ಮಾಯಿಲ್ ಕಂಡಕರೆ