ಮಡಿಕೇರಿ, ಏ. ೧೯: ಇಲ್ಲಿಗೆ ಸಮೀಪದ ಮೂರ್ನಾಡು ಬಳಿಯ ಕಾಂತೂರುವಿನ ಐಕಾನಿಕ್ ಬ್ರರ‍್ಸ್ ತಂಡದ ವತಿಯಿಂದ ಏರ್ಪಡಿಸ ಲಾಗಿದ್ದ ಪ್ರಥಮ ವರ್ಷದ ಕೊಡಗು ಗೌಡ ವಾಲಿಬಾಲ್ ಹಾಗೂ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕಡ್ಲೇರ ಹಾಗೂ ಪಾರೆಮನೆ ತಂಡಗಳು ಪ್ರಶಸ್ತಿ ಯನ್ನು ತಮ್ಮ ಮುಡಿಗೇರಿಸಿಕೊಂಡಿವೆ.

ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಡ್ಲೇರ ತಂಡ ಪ್ರಥಮ ಸ್ಥಾನ ಪಡೆದರೆ, ಪಡ್ಡಂಬೈಲ್ ತಂಡ ದ್ವಿತೀಯ ಸ್ಥಾನ ಗಳಿಸಿತು. ಬಾಳಾಡಿ ಮೂರನೇ ಹಾಗೂ ಕೂಡಕಂಡಿ ತಂಡ ನಾಲ್ಕನೇ ಬಹುಮಾನ ಪಡೆದುಕೊಂಡರೆ, ಶಿಸ್ತುಬದ್ಧ ತಂಡವಾಗಿ ಚೆರಿಯಮನೆ ತಂಡ ಹೊರಹೊಮ್ಮಿತು. ಉತ್ತಮ ಆಟಗಾರ ಪ್ರಶಸ್ತಿಯನ್ನು ಪಡ್ಡಂಬೈಲ್ ಶರತ್, ಬೆಸ್ಟ್ ಡಿಫೆಂಡರ್ ಆಗಿ ಕಡ್ಲೇರ ದವನ್, ಬೆಸ್ಟ್ ಸ್ಟೆöÊಕರ್ ಆಗಿ ಕಡ್ಲೇರ ಪ್ರವೀಣ್ ಬಹುಮಾನ ಪಡೆದುಕೊಂಡರು.

ಮಹಿಳೆಯರ ಪ್ರಥಮ ವರ್ಷದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪಾರೇರ ತಂಡ ಪ್ರಥಮ ಬಹುಮಾನ ಪಡೆದುಕೊಂಡರೆ, ಪಟ್ಟೆಮನೆ ತಂಡ ದ್ವಿತೀಯ ಸ್ಥಾನ ಗಳಿಸಿತು. ಶಿಸ್ತು ಬದ್ಧ ತಂಡವಾಗಿ ಉಳುವಾರನ ತಂಡ ಹೊರಹೊಮ್ಮಿತ್ತು. ಪಾರೇರ ಸುಮಿ ವಸಂತ್ ಉತ್ತಮ ಆಟಗಾರ್ತಿ ಬಹುಮಾನ ಪಡೆದರೆ, ಉತ್ತಮ ಧಾಳಿಗಾರ್ತಿಯಾಗಿ ಕಟ್ಟೆಮನೆ ಮಿಲನ, ಉತ್ತಮ ಹಿಡಿತಗಾರ್ತಿ ಯಾಗಿ ಕಟ್ಟೆಮನೆ ನಮಿತ ಬಹುಮಾನ ಪಡೆದುಕೊಂಡರು.

ಸಮಾರAಭ: ಐಕಾನಿಕ್ ಬ್ರರ‍್ಸ್ನ ಅಧ್ಯಕ್ಷ ಕಲ್ಲುಮುಟ್ಲು ವಿನೋದ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ನಿವೃತ್ತ ವಲಯ ಅರಣ್ಯಾಧಿಕಾರಿ ಕಲ್ಲುಮುಟ್ಲು ಲೋಕನಾಥ್, ಅಬಕಾರಿ ಇಲಾಖೆ ನಿವೃತ್ತ ಅಧಿಕಾರಿ ಉಳುವಾರನ ಎಸ್. ರಮೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನ ಉದ್ಘಾಟಿಸಿ ದರು. ಮುಖ್ಯ ಅತಿಥಿಗಳಾಗಿ ಜಾಗದಾನಿ ಉಳುವಾರನ ಎಸ್. ಅಶೋಕ್ ಕುಮಾರ್, ನಿವೃತ್ತ ಡಿಎಫ್‌ಓ ಕೂಡಕಂಡಿ ಬೆಳ್ಯಪ್ಪ, ಗೌಡ ಸಾಂಸ್ಕೃತಿಕ ರಾಯಭಾರಿಗಳಾದ ಬೊಳ್ತಜ್ಜಿರ ಸಿದ್ಧಾರ್ಥ, ಕಲ್ಲುಮುಟ್ಲು ಗಣೇಶ್, ನಿವೃತ್ತ ಎಎಸ್‌ಐ ಉಳುವಾರನ ರವಿ, ಮಾಜಿ ಸೈನಿಕ ಬೊಳ್ತಜ್ಜಿರ ಸತೀಶ್, ಶಿಕ್ಷಕ ಉಳುವಾರನ ವೇದಪ್ರಸಾದ್ ಇದ್ದರು.

ಸಮಾರೋಪ ಸಮಾರಂಭದಲ್ಲಿ ತಾ.ಪಂ. ಮಾಜಿ ಸದಸ್ಯ ಕೊಡಪಾಲು ಗಣಪತಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ದಂಬೆಕೋಡಿ ಆನಂದ, ಪೊಲೀಸ್ ಮುಖ್ಯಪೇದೆ ಉಳುವಾರನ ಬೀನ, ನಿವೃತ್ತ ಎಸಿಎಫ್ ಚೀಯಪ್ಪನ ಮೋಟಯ್ಯ, ಚೀಯಪ್ಪನ ಜಲಜಾಕ್ಷಿ, ಎಚ್‌ಎಎಲ್ ನಿವೃತ್ತ ವ್ಯವಸ್ಥಾಪಕ ಕಲ್ಲುಮುಟ್ಲು ಕುಶಾಲಪ್ಪ, ಎಎಸ್‌ಐ ಬೊಳ್ತಜ್ಜಿರ ಸತೀಶ್, ಉಳುವಾರನ ಗೋಪಾಲಕೃಷ್ಣ, ಬೆಳೆಗಾರ ಮಠದಮನೆ ಧನಂಜಯ, ಹಿಂದೂ ಸಂಘಟನೆ ಅಧ್ಯಕ್ಷ ಕಲ್ಲುಮುಟ್ಲು ಅನುದೀಪ್ ಇದ್ದರು.