ಮಡಿಕೇರಿ, ಏ. ೧೯: ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಪ್ರಕರಣಕ್ಕೆ ಸಂಬAಧಿಸಿದAತೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಗಳು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಅವರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದೆ.

ತಾ. ೧೮ ರಂದು ನಾಮನಿರ್ದೇಶನ ಮಾಡಲು ಹಾಜರಾದ ಸಂದರ್ಭದಲ್ಲಿ ಚುನಾವಣಾ ಮೆರವಣಿಗೆಯಲ್ಲಿ ಮಕ್ಕಳನ್ನು ಬಳಸಿಕೊಂಡಿರುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಚುನಾವಣೆಯಲ್ಲಿ ಬಾಲಕಾರ್ಮಿಕರನ್ನಾಗಿ ಬಳಸುವುದನ್ನು ನಿಷೇಧಿಸುವಂತೆ ರಿಟ್ ಅರ್ಜಿ ಸಂಖ್ಯೆ (ಸಿ) ೯೭೬೭/ ೨೦೦೯ ರಲ್ಲಿ ದಾಖಲಿಸಿದಂತೆ ಅಚಿಡಿe ಚಿಟಿಜ Pಡಿoಣeಛಿಣioಟಿ oಜಿ ಅhiಟಜಡಿeಟಿ ಚಿಛಿಣ ೨೦೦೦ ದಂತೆ ರಾಜಕೀಯ ಪಕ್ಷಗಳು ೧೪ ರಿಂದ ೧೮ನೇ ವಯಸ್ಸಿನೊಳಗೆ ಒಳಪಟ್ಟವರನ್ನು ಚುನಾವಣಾ ಪ್ರಚಾರಕ್ಕೆ ಬಳಸುವುದನ್ನು ನಿಷೇಧಿಸಿ ಆದೇಶಿಸಿದನ್ವಯ ಚುನಾವಣಾ ಆಯೋಗದ ಆದೇಶದ ದಿನಾಂಕ: ೨೧.೦೨.೨೦೧೭ ರಂತೆ ಮಕ್ಕಳನ್ನು ಚುನಾವಣಾ ಚಟುವಟಿಕೆಗಳಲ್ಲಿ ಉಪಯೋಗಿಸಿಕೊಳ್ಳುವುದನ್ನು ನಿರ್ಬಂಧಿಸಿದೆ.

ಆದರೆ ನೀವುಗಳು ಚುನಾವಣಾ ಮೆರವಣಿಗೆಯಲ್ಲಿ ಮಕ್ಕಳನ್ನು ಬಳಸಿಕೊಂಡಿರುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆ. ನಿಮ್ಮ ಮೇಲೆ ಏಕೆ ನಿಯಮಾನುಸಾರ ಕ್ರಮಕೈಗೊಳ್ಳಬಾರದು ಎಂಬ ಬಗ್ಗೆ ೨೪ ಗಂಟೆಯೊಳಗಾಗಿ ನಿಮ್ಮ ಲಿಖಿತ ಸಮಜಾಯಿಷಿಕೆಯನ್ನು ಸಲ್ಲಿಸತಕ್ಕದ್ದು, ತಪ್ಪಿದ್ದಲ್ಲಿ ನಿಯಾಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿ ಶಬಾನಾ ಎಂ. ಶೇಖ್ ಪೊನ್ನಣ್ಣ ಅವರಿಗೆ ನೋಟೀಸ್ ಮಾಡಿದ್ದಾರೆ.