ಸೃಷ್ಟಿಯಲ್ಲಿ ಸೂರ್ಯ ತೇಜೋವಂತನಾದುದರಿAದ ತೇಜಸ್ಸನ್ನು ವರ್ಚಸನ್ನು, ಶಕ್ತಿಯನ್ನು ಪಡೆಯಲು ಸೂರ್ಯೋಪಾಸನೆ ಉತ್ತಮ ಮಾಧ್ಯಮ ಕ್ರೀಡಾಪಟುಗಳಿಗಂತೂ ಏಕಾಗ್ರತೆ, ಪಾದರಸದಂತೆ ಚಲನೆಗೆ ಬಲಿಷ್ಠ ಮಾಂಸಖAಡಗಳನ್ನು ಪಡೆಯಲು, ದೈಹಿಕ ಕ್ಷಮತೆಗೆ ಒಟ್ಟಿನಲ್ಲಿ ಸಾಧನೆಗಳ ಶಿಖರವೇರಲು ಸೂರ್ಯ ನಮಸ್ಕಾರವನ್ನು ಮಾಡುವುದು ಬಹುಮುಖ್ಯ ವಾಗುವುದು. ದೇಹಕ್ಕೆ ಅವಶ್ಯವಾದ ವಿಟಮಿನ್ಗಳು ಸೂರ್ಯನ ಬೆಳಕಿನಿಂದ ದೊರೆಯುವುದು ಬೆಳಗ್ಗೆಯೇ ದೇಗ ಉಲ್ಲಾಸಿತವಾಗಲು ಸೂರ್ಯ ಕಿರಣಗಳು ಸಹಕಾರಿ ಎನ್ನಿಸುವುವು. ಸೂರ್ಯ ನಮಸ್ಕಾರವನ್ನು ಉಪಾಸನಾ ವ್ಯಾಯಾಮ ಎಂದು ಕರೆಯಲಾಗಿದೆ. ವೇದ ಪುರಾಣಗಳಲ್ಲಿ ‘‘ಆರೋಗ್ಯಂ ಭಾಸ್ಕರಾದಿ ಚ್ಛೇತ್’’ ಅಂದರೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ದೇಹಾರೋಗ್ಯಕ್ಕೆ, ಇಂದ್ರಿಯ ನಿಗ್ರಹಕ್ಕೆ ಮಾನಸಿಕ ಸಂಯಮ ಮತ್ತು ಏಕಾಗ್ರತೆಗೆ, ಸ್ಮರಣಶಕ್ತಿಗೆ ಬುದ್ಧಿವಿಕಾಸಕ್ಕೆ ಸೂರ್ಯ ನಮಸ್ಕಾರ ಸುಂದರ ಸೋಪಾನ, ದೇಹದಾರ್ಢ್ಯ ಮತ್ತು ದೀರ್ಘಾಯುಸ್ಸಿಗೆ ಉತ್ತಮ ಸಾಧನ. ಸೂರ್ಯ ನಮಸ್ಕಾರವನ್ನು ಸ್ತಿçà ಪುರುಷರು ಮತ್ತು ಆಬಾಲ ವೃದ್ಧರೆಲ್ಲರೂ ಮಾಡಬಹುದು. ಇದರಿಂದ ನಮ್ಮ ದೇಹದ ಮೇಲೆ ಅಂಗಾAಗಗಳ ಮೇಲೆ ಹಿಡಿತ ದೊರೆಯುವುದು. ಸೂರ್ಯನ ನಮಸ್ಕಾರ ಈ ನಿಟ್ಟಿನಲ್ಲಿ ಕ್ರೀಡಾಪಟು ಗಳಿಗೆ ಬಹುಮುಖ್ಯ. ಇಂದು ಎಲ್ಲಾ ಕ್ರೀಡೆಗಳಲ್ಲೂ ರಾಜ್ಯ, ರಾಷ್ಟç ಅಂತರ ರಾಷ್ಟಿçÃಯ ತಂಡಗಳ ಆಟಗಾರರು ಯೋಗ, ಸೂರ್ಯ ನಮಸ್ಕಾರವನ್ನು ದಿನವೂ ಮಾಡುತ್ತಾರೆ. ಸೂರ್ಯ ನಮಸ್ಕಾರ ವ್ಯಾದಿಗಳು ಬರದಂತೆ ತಡೆಯುವುದಷ್ಟೇ ಅಲ್ಲ; ಮಹಾವ್ಯಾಧಿಗಳನ್ನು ಗುಣಪಡಿಸಬಲ್ಲದು. ಪ್ರತಿದಿನವೂ ಸೂರ್ಯ ನಮಸ್ಕಾರ ಮಾಡಿ ಸೂರ್ಯೋಪಾದೋದಕವನ್ನು ಸೇವಿಸುವುದ ರಿಂದ ದೀರ್ಘಾಯುಸ್ಸು, ಬಲ, ವೀರ್ಯ, ತೇಜಸ್ಸು ಇವುಗಳು ಪ್ರಾಪ್ತವಾಗಿ ಸರ್ವರೋಗ ನಿವಾರಣೆಯಾಗಿ ಅಕಾಲ ಮೃತ್ಯುವಿನಿಂದ ಪಾರಾಗುತ್ತೇವೆ.
ಸೂರ್ಯ ನಮಸ್ಕಾರ ಮಾಡುವಾಗ ಹೇಳುವ ಮಂತ್ರಗಳಿAದ ಅ, ಉ, ಮ ಸ್ವರಗಳನ್ನು ಮತ್ತು ಹ್ರಾಂ, ಹ್ರೀಂ, ಹ್ರೌಂ, ಹ್ರಃ ಬೀಜ ಮಂತ್ರಗಳನ್ನು ಉಚ್ಛರಿಸುವುದರಿಂದ ವಿವಿಧ ಶಬ್ದ ತರಂಗಗಳು ನಿರ್ಮಾಣವಾಗುತ್ತವೆ. ‘ಆ ಸ್ವರದ ತರಂಗದಿAದ ನಾಭಿಯ ಕೆಳಗಿನ ಅಂಗಾAಗಗಳ ಸ್ಥಿತಿ ಹಾಗೂ ಚಟುವಟಿಕೆ ಗಳಿಗೂ, ‘ಉ’ ಸ್ವರದ ತರಂಗಗಳಿAದ ನಾಭಿಯ ಯಿಂದ ಉರೋಮದ್ಯದ ಅಂಗಾAಗಗಳ ಸುಸ್ಥಿತಿ ಹಾಗೂ ಕ್ರಿಯೆಗಳಿಗೂ ‘ಮ’ ಸ್ವರದಿಂದ ನೆತ್ತಿಯ ವರೆಗಿನ ಎಲ್ಲಾ ಪ್ರಕ್ರಿಯೆ ಗಳಿಗೂ ಚೈತನ್ಯ ಬರುವುದು ಬೀಜ ಮಂತ್ರಗಳ ತರಂಗ ಗಳಿಂದ ಹೃದಯ ಮತ್ತು ಶ್ವಾಶಕೋಶದ ಕ್ರಿಯೆಗಳ ಮೇಲೆ ಉತ್ತಮ ಸಂಸ್ಕಾರ ಆಗುವುದು. ರೇಚಕ (ಉಸಿರು ಬಿಡುವುದು), ಪೂರಕ (ಉಸಿರು ತೆಗೆದುಕೊಳ್ಳುವುದು) ಕುಂಭಕಗಳಿAದ (ಉಸಿರು ತೆಗೆದು ಕೊಂಡು ಅಥವಾ ಬಿಟ್ಟು ಅಲ್ಲೇ ತಡೆ ಹಿಡಿಯುವುದು) ಉಸಿರಾಟ ಹದಗೊಂಡು ಶರೀರದ ಸಮಸ್ಥಿತಿ ಸುಧಾರಿಸುವುದು. ಇಡೀ ಶರೀರದಲ್ಲಿ ಈ ಎಲ್ಲಾ ವಿನ್ಯಾಸಕ್ರಮ (ಸ್ಥಿತಿಗಳು, ರೇಚಕ ಪೂರಕ ಕ್ರಮ ಧ್ಯಾನಕ್ರಮ, ತ್ರಾಟಕಕ್ರಮ (ನೋಟ), ಬಂಧಾದಿಗಳಿAದ ಹಿತಕರ ಬದಲಾವಣೆಗಳು ಉಂಟಾಗುತ್ತವೆ. ಸೂರ್ಯ ನಮಸ್ಕಾರ ಅನೇಕ ಆಸನಗಳ ಸುಂದರ ಜೋಡಣೆ, ಊರ್ಧ್ವಾಸನ, ಪಾದ ಹಸ್ತಾಸನ, ಏಕಪಾದ ಪ್ರಸರಣಾಸನ, ದ್ವಿಪಾದ ಪ್ರಸರಣಾಸನ ಅಷ್ಟಾಂಗ ಪ್ರಣಿ ಪಾದಾಸನ, ಭುಜಂಗಾಸನ, ಅಧೋಮುಖ ಶ್ವಾಸನಾಸನ ಇತ್ಯಾದಿ. ಸೂರ್ಯ ನಮಸ್ಕಾರದಲ್ಲಿ ಶರೀರದ ಪೋಷಣೆ, ರಕ್ಷಣೆ, ಬೆಳವಣಿಗೆಗೆ ಬೇಕಾದ ಎಲ್ಲಾ ಅಂಶಗಳು ಶರೀರದ ಎಲ್ಲಾ ಸ್ನಾಯು ಸಮೂಹಗಳು ಚಲನೆಗೊಳ್ಳುತ್ತವೆ. ಸೂರ್ಯ ನಮಸ್ಕಾರದ ಎಲ್ಲಾ ಭಂಗಿಗಳು, ದೇಹದಲ್ಲಿರುವ ಎಲ್ಲಾ ಅಂಗಗಳಿಗೂ ಪರಿಪೂರ್ಣ ವ್ಯಾಯಾಮವನ್ನು ದೊರಕಿಸಿ ಕೊಡುವ ಶ್ರೇಷ್ಠ ವ್ಯಾಯಾಮವಾಗಿದೆ. ಅದಕ್ಕಾಗಿ ಇದು ಪೂರ್ಣ ವ್ಯಾಯಾಮ.
ಸೂರ್ಯ ನಮಸ್ಕಾರಗಳಲ್ಲೂ ಅನೇಕ ಪ್ರಕಾರಗಳುಂಟು. ಯೋಗ ನಮಸ್ಕಾರ ಭದ್ರನಮಸ್ಕಾರ, ಗುರು ನಮಸ್ಕಾರ ಸಾಷ್ಟಾಂಗ ನಮಸ್ಕಾರ ಪಂಚಾAಗ ನಮಸ್ಕಾರ ಇತ್ಯಾದಿ, ಮೂಲ ಉದ್ದೇಶ ಒಂದೇ ಆದರೂ ಅನೇಕ ಪರಿವರ್ತನೆಗಳು, ರೂಪಾಂತರಗಳು ವಿವಿಧ ಉಪಾಸಕರಿಂದ ಬೆಳಕಿಗೆ ಬಂದಿವೆ.
ಸೂರ್ಯ ನಮಸ್ಕಾರದ ಮಂತ್ರ
ಓA ಹಿರಣ್ಮಯೇನ ಪಾತ್ರೇಣ | ಸತ್ಸಸ್ಕಾಪಿ ಹಿತಂ ಮುಖಂ ||
ತತ್ವಂ ಪೂಷನ್ನ ಪಾವೃಣು | ಸತ್ಯಧರ್ಮಾಯ ದೃಷ್ಟಯೇ ||
ಧ್ಯೇಯೇಃ ಸದಾ ಸವಿತೃ ಮಂಡಲ ಮಧ್ಯವರ್ತಿ |
ನಾರಾಯಣ ಸಂಸಿಜಾಸನ ಸನ್ನಿವಿಷ್ಟಃ||
ಕೇಯೂರವಾನ್ ಮಕರ ಕುಂಡಲವಾನ್ ಕಿರೀಟ |
ಹಾರಿ ಹಿರಣ್ಮಯ ವಪುಃದೃತ ಶಂಖಚಕ್ರಃ ||
ಅರ್ಥ: ಸತ್ಯದ ಮುಖವನ್ನು ಚಿನ್ನದ ಮುಖವಾಡವನ್ನು ತೆಗೆದು ಸತ್ಯ ಸ್ವರೂಪವು ಗೋಚರವಾಗುವಂತೆ ಮಾಡು. ಹೀಗೆ ಸೂರ್ಯನಮಸ್ಕಾರ ಕ್ರೀಡಾಪಟುಗಳಿಗೂ, ಸರ್ವರಿಗೂ ಉಪಯುಕ್ತವಾಗಿ ಆರೋಗ್ಯದ ಭಾಗ್ಯ ಎಂದೆನ್ನಿಸಿದೆ.
-ಹರೀಶ್ ಸರಳಾಯ,
ಮೊ: ೯೭೧೩೧೮೧೦೨೫೦. ಮಡಿಕೇರಿ.