(ಕೋವರ್ ಕೊಲ್ಲಿ ಇಂದ್ರೇಶ್)

ಬೆAಗಳೂರು, ಏ. ೧೯: ದಿನೇ ದಿನೇ ಏರುತ್ತಿರುವ ಕಾಫಿಯ ಉತ್ಪಾದನಾ ವೆಚ್ಚ, ರೋಗ ಬಾಧೆ, ಹವಾಮಾನ ವೈಪರೀತ್ಯದ ನಡುವೆ ಮಾರ್ಚ್ ತಿಂಗಳ ಎರಡನೇ ವಾರದಲ್ಲಿ ಬೀಳಬೇಕಾದ ಹೂ ಮಳೆ ಇನ್ನೂ ಬಂದಿಲ್ಲ. ಬಿರು ಬಿಸಿಲಿನ ನಡುವೆ ಮಳೆಗಾಗಿ ನಿತ್ಯ ಆಕಾಶ ನೋಡುತ್ತಿರುವ ಕಾಫಿ ಬೆಳೆಗಾರರಿಗೆ ಅರೇಬಿಕಾ ಕಾಫಿ ದರ ಸ್ಥಿರವಾಗಿರುವುದರ ಜೊತೆಗೆ ಇದೀಗ ರೊಬಸ್ಟಾ ಚೆರಿ ಕಾಫಿ ದರ ಏರಿಕೆ ಆಗುತ್ತಿರುವುದು ಕೊಂಚ ನೆಮ್ಮದಿ ನೀಡಿದೆ.

ಬುಧವಾರ ಚಿಕ್ಕಮಗಳೂರಿನ ಕಾಫಿ ಮಾರುಕಟ್ಟೆಯಲ್ಲಿ ೫೦ ಕೆ.ಜಿ. ರೊಬಸ್ಟಾ ಚೆರಿ ಕಾಫಿ ದರ ೬೦೫೦ ರೂಪಾಯಿಗಳಿಗೆ ತಲುಪಿ ಸಾರ್ವಕಾಲಿಕ ದಾಖಲೆ ಬರೆದಿದೆ. ಕಳೆದ ಸುಮಾರು ಆರು ತಿಂಗಳಿನಿAದ ರೊಬಸ್ಟಾ ನಿಧಾನವಾಗಿ ಆದರೆ ಧೃಢವಾಗಿ ಏರಿಕೆ ದಾಖಲಿಸುತ್ತಲೇ ಬಂದಿದೆ.

ಬುಧವಾರ ಔಟರ್ನ್ ೨೭ ಇದ್ದ ಕಾಫಿಗೆ ಸುಮಾರು ೬೦೦೦-೬೦೫೦ರ ವರೆಗೂ ಬೆಲೆ ಲಭಿಸಿದೆ. ಮುಂದಿನ ದಿನಗಳಲ್ಲೂ ಬೆಲೆ ಇನ್ನಷ್ಟು ಹೆಚ್ಚಳಗೊಳ್ಳಲಿದೆ ಎಂದು ಕೆಲವು ವರ್ತಕರು ಹೇಳುತ್ತಾರೆ.

ಲಂಡನ್ ಮಾರುಕಟೆಯಲ್ಲಿ ರೊಬಸ್ಟಾ ಕಾಫಿ ಬೀನ್ಸ್ ಟನ್‌ಗೆ ೨,೪೧೧ ಡಾಲರ್ ಆಸುಪಾಸಿನಲ್ಲಿ ಮಾರಾಟವಾಗಿದೆ. ಪರಿಣಾಮ ಸ್ಥಳೀಯ ಕಾಫಿ ಮಾರುಕಟ್ಟೆಯಲ್ಲೂ ಧಾರಣೆ ಮತ್ತು ಬೇಡಿಕೆ ಹೆಚ್ಚಳವಾಗಿದೆ. ವಿಶ್ವದಲ್ಲಿ ರೊಬಸ್ಟಾ ಕಾಫಿ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿ ವಿಯೇಟ್ನಾಂ ಇದ್ದು ಎರಡನೇ ಸ್ಥಾನದಲ್ಲಿ ಬ್ರೆಜಿಲ್ ಇದೆ. ಮೂರನೇ ಸ್ಥಾನದಲ್ಲಿ ಇಂಡೋನೇಷ್ಯಾ ಇದ್ದು ನಾಲ್ಕನೇ ಸ್ಥಾನದಲ್ಲಿ ಭಾರತ ಇದೆ.

ಬ್ರೆಜಿಲ್‌ನಲ್ಲಿ ತೀವ್ರ ಹಿಮಪಾತದ ಕಾರಣ ಕಾಫಿ ಉತ್ಪಾದನೆಯಲ್ಲಿ ಕುಸಿತ ಕಂಡುಬAದಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ವ್ಯಾಪಾರ ಮೂಲಗಳು ತಿಳಿಸಿವೆ. ಬ್ರೆಜಿಲ್‌ನಲ್ಲಿ ಸರಾಸರಿ ಕಾಫಿ ಉತ್ಪಾದನೆಯು ವರ್ಷಕ್ಕೆ ೬೦ ಮಿಲಿಯನ್ ಚೀಲಗಳು (೬೦ ಕೆಜಿಯ ಚೀಲ) ಆಗಿದೆ. ಆದರೆ ಈ ವರ್ಷ ಉತ್ಪಾದನೆಯು ೫೦ ಮಿಲಿಯನ್ ಚೀಲಗಳಿಗೆ ಕುಸಿದಿದೆ. ಸುಗ್ಗಿಯ ನಂತರದ ಅವಧಿಯಲ್ಲಿ ಆ ದೇಶದ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಬೆಳೆ ಸಂಪೂರ್ಣ ನಾಶವಾಗಿರುವುದೇ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಆದಾಗ್ಯೂ, ಪ್ರಸ್ತುತ ಬೆಲೆ ಏರಿಕೆಯು ದೇಶದ ಕಾಫಿ ರೈತರಿಗೆ ಪ್ರಯೋಜನವಾಗುವುದಿಲ್ಲ; ಕಾಫಿ ಬೆಳೆಗಾರರು ಈಗಾಗಲೇ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ (ಏಉಈ) ಅಧ್ಯಕ್ಷ ಡಾ. ಹೆಚ್.ಟಿ. ಮೋಹನ್ ಹೇಳುತ್ತಾರೆ. ರಾಜ್ಯ ಸರ್ಕಾರವು ಕಾಫಿಗೆ ಬೆಂಬಲ ಬೆಲೆ ಘೋಷಿಸುವ ಮೂಲಕ ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ಬರಬೇಕೆಂದು ಅವರು ಒತ್ತಾಯಿಸಿದ್ದಾರೆ.

ಕೇರಳ ರಾಜ್ಯ ಸರ್ಕಾರವು ಕಾಫಿಗೆ ಕಿಲೋಗೆ ೯೦ ರೂಪಾಯಿಗಳ ಬೆಂಬಲ ಬೆಲೆಯನ್ನು ಘೋಷಿಸಿದೆ. ಆದರೆ ಒಬ್ಬ ಬೆಳೆಗಾರನಿಂದ ಕೇವಲ ಒಂದು ಎಕರೆಯಷ್ಟು ಬೆಳೆಗೆ ಮಾತ್ರ ಬೆಂಬಲ ಬೆಲೆ ನೀಡಲಾಗುತ್ತಿದೆ. ಪ್ರಸ್ತುತ ಕಾಫಿ ದರವು ಕಿಲೋಗೆ ೧೨೦ ರೂಪಾಯಿ ತಲುಪಿದ್ದು, ಸರ್ಕಾರದ ಬೆಂಬಲ ಬೆಲೆಗೆ ಯಾರೂ ಕಾಫಿಯನ್ನು ನೀಡುತ್ತಿಲ್ಲ.

(ಮೊದಲ ಪುಟದಿಂದ) ಕಾಫಿ ಕೊಯ್ಲು ಆದ ಕೂಡಲೇ ಇಟ್ಟುಕೊಳ್ಳಲು ಸ್ಥಳಾವಕಾಶ ಇಲ್ಲದೆ ಮತ್ತು ಹಣದ ಅಗತ್ಯತೆಯಿಂದಾಗಿ ಶೇ. ೯೦ ರಷ್ಟು ಬೆಳೆಗಾರರು ಚೀಲಕ್ಕೆ ೫೦೦೦ ರೂಪಾಯಿ ದರ ಇದ್ದಾಗಲೇ ಮಾರಾಟ ಮಾಡಿದ್ದಾರೆ. ಈಗ ದರ ಏರಿಕೆ ಆಗಿದ್ದರೂ ಬೆಳೆಗಾರರಿಗೆ ಹೆಚ್ಚಿನ ಲಾಭವೇನೂ ಆಗುತ್ತಿಲ್ಲ. ಆದರೆ ಏರಿಕೆ ದೃಢವಾಗಿದ್ದು, ಮುಂದಿನ ವಾರಗಳಲ್ಲೂ ಹೆಚ್ಚಿನ ದರ ಏರಿಳಿತ ಇರುವ ಸಾಧ್ಯತೆ ಕಡಿಮೆ ಎಂಬದು ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯವಾಗಿದೆ. ಮುಂದಿನ ವರ್ಷವೂ ಈ ಏರುಮುಖ ದರ ಮುಂದುವರಿಯುವ ಸಾಧ್ಯತೆ ಜಾಸ್ತಿ ಇದೆ ಎಂದು ಹೇಳಿದರು.