ಮಡಿಕೇರಿ, ಏ. ೧೮: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೂಲಕ ರಾಜ್ಯದ ಇತರೆಡೆಗಳಲ್ಲಿ ಈಗಾಗಲೇ ಪ್ರಾರಂಭಗೊAಡಿರುವ ಇಲೆಕ್ಟಿçಕ್ ಬಸ್ ಸಂಚಾರ ವ್ಯವಸ್ಥೆ ಇದೀಗ ಕೊಡಗಿನಲ್ಲೂ ಆರಂಭಗೊAಡಿದೆ. ಸದ್ಯದ ಮಟ್ಟಿಗೆ ಬೆಂಗಳೂರಿನಿAದ ವೀರಾಜಪೇಟೆ ಹಾಗೂ ವೀರಾಜಪೇಟೆಯಿಂದ ಬೆಂಗಳೂರಿಗೆ ಈ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ಇದೀಗ ಕಳೆದ ಸೋಮವಾರದಿಂದ ಒಟ್ಟು ಐದು ಬಸ್‌ಗಳು ಸಂಚಾರ ಪ್ರಾರಂಭಿಸಿರುವುದಾಗಿ ಮಡಿಕೇರಿಯ ಕೆಎಸ್‌ಆರ್‌ಟಿಸಿ
(ಮೊದಲ ಪುಟದಿಂದ) ಘಟಕದ ವ್ಯವಸ್ಥಾಪಕಿ ಗೀತಾ ಅವರು ತಿಳಿಸಿದ್ದಾರೆ. ಕೊಡಗಿಗೆ ಸಂಬAಧಿಸಿದAತೆ ವೀರಾಜಪೇಟೆ ಹಾಗೂ ಮಡಿಕೇರಿಗೆ ಈ ಸೌಲಭ್ಯ ಕಲ್ಪಿಸಲು ಸಂಸ್ಥೆ ತೀರ್ಮಾನಿಸಿತ್ತು. ಇದಕ್ಕಾಗಿ ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿ ಚಾರ್ಜಿಂಗ್ ಸ್ಟೇಷನ್ ಅನ್ನೂ ಪ್ರಾರಂಭಿಸ ಲಾಗುತ್ತಿದೆ. ಇದೀಗ ವೀರಾಜಪೇಟೆ ಯಲ್ಲಿ ಚಾರ್ಜಿಂಗ್ ಸ್ಟೇಷನ್ ಕೆಲಸ ಪೂರ್ಣಗೊಂಡಿದ್ದು, ಇಲ್ಲಿಗೆ ಬರುತ್ತಿರುವ ಬಸ್‌ಗಳನ್ನು ಇಲ್ಲಿಯೂ ಚಾರ್ಜ್ ಮಾಡಲಾಗುತ್ತಿದೆ. ಮಡಿಕೇರಿಯ ಚಾರ್ಜಿಂಗ್ ಸೆಂಟರ್ ಕೆಲಸ ಅಂತಿಮ ಹಂತದಲ್ಲಿದೆ. ಸದ್ಯದ ಮಟ್ಟಿಗೆ ಐದು
ಬಸ್‌ಗಳ ಸೇವೆ ಪ್ರಾರಂ¨ sÀಗೊಂಡಿದ್ದು, ಈ ಬಸ್‌ಗಳ ಸಮಯ ಇಂತಿದೆ.
ಬೆAಗಳೂರಿನಿAದ ಹೊರಡುವ ಸಮಯ
ಬೆಳಿಗ್ಗೆ ೬.೧೫, ೮.೩೦, ೨.೪೫, ೩.೪೫ ಹಾಗೂ ೧೦.೪೬
ವೀರಾಜಪೇಟೆಯಿಂದ ಬೆಳಿಗ್ಗೆ ೫.೩೦, ೭.೦೫, ೧೧.೧೫, ೨.೪೫, ಹಾಗೂ ೪.೪೫
ಈ ಬಸ್‌ಗಳು ಒಮ್ಮೆ ಚಾರ್ಜ್ ಮಾಡಿದರೆ ೨೫೦ ರಿಂದ ೨೭೦ ಕಿ.ಮೀ. ಸಾಗಲಿದೆ. ಬಸ್ ಎಸಿ ವ್ಯವಸ್ಥೆಯೊಂದಿಗೆ ೪೩ ಆಸನಗಳನ್ನು ಹೊಂದಿದೆ.