ಮಡಿಕೇರಿ, ಏ. ೧೮: ತಾ. ೧೩ರ ‘ಶಕ್ತಿ’ಯಲ್ಲಿ ನೌಕರರ ಭವಿಷ್ಯನಿಧಿ ಕುರಿತು ಶ್ರೀಧರನ್ ಎಂಬವರು ಕೇಂದ್ರ ಸರ್ಕಾರದ ಸಂಸ್ಥೆಯಾದ ಭವಷ್ಯನಿಧಿ ಸಂಘಟನೆಯ ಲಾಂಛsನ ಬಳಸಿ ಲೇಖನ ಪ್ರಕಟಿಸಿದ್ದು, ಅದರ ಬಳಕೆ ಸರಿಯಾದ ಕ್ರಮವಲ್ಲವೆಂದು ಸಹಾಯಕ ಭವಿಷ್ಯನಿಧಿ ಆಯುಕ್ತ ಮುರಳೀಧರನ್ ಪಿ. ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
‘‘ನೌಕರರ ಭವಿಷ್ಯನಿಧಿ ಸಂಘಟನೆಯು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕೆಳಗೆ ಕಾರ್ಯನಿರ್ವಹಿಸುವ ಒಂದು ಸಂಘಟನೆ ಆಗಿದೆ. ಈ ಬರಹವನ್ನು ಪ್ರಕಟಿಸಿದ ಕೆ. ಶ್ರೀಧರನ್‌ಗೂ ನೌಕರರ ಭವಿಷ್ಯನಿಧಿ ಸಂಘಟನೆಗೂ ಯಾವುದೇ ರೀತಿಯ ಸಂಬAಧವಿರುವುದಿಲ್ಲ.’’
(ಮೊದಲ ಪುಟದಿಂದ) ‘‘ನೌಕರರ ಭವಿಷ್ಯನಿಧಿ ವಿಷಯವಾಗಿ ಏನಾದರೂ ಮಾಹಿತಿ ಬೇಕಿದ್ದಲ್ಲಿ ಮಡಿಕೇರಿ ಕಚೇರಿಯ ದೂರವಾಣಿ ಸಂಖ್ಯೆ ೦೮೨೭೨-೨೨೯೮೩೮ ಹಾಗೂ ಮೊಬೈಲ್ ಸಂಖ್ಯೆ ೬೩೬೧೫೨೩೨೮೫ ಅನ್ನು ಸಂಪರ್ಕಿಸಬಹುದು’’
ಬರಹವನ್ನು ಪ್ರಕಟಿಸಿದ ವ್ಯಕ್ತಿಯನ್ನು ಸಂಪರ್ಕಿಸಿದಲ್ಲಿ ಅದಕ್ಕೆ ಸಂಪರ್ಕಿಸಿದವರೇ ಸಂಪೂರ್ಣವಾಗಿ ಜವಾಬ್ದಾರರಾಗುತ್ತಾರೆ ಎಂದು ಮುರಳೀಧರನ್ ತಿಳಿಸಿದ್ದಾರೆ.