ನಾಪೋಕ್ಲು, ಏ. ೧೮: ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜ್ಜಿಮುಟ್ಟ ಪಳ್ಳಿರಾಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಗ್ರಾಮ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸು ವುದರ ಮೂಲಕ ಚುನಾವಣೆಯನ್ನು ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.

ಕಳೆದ ಎರಡು ಮೂರು ವರ್ಷಗಳಿಂದ ಇಲ್ಲಿನ ಜನರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನೀರಿನ ಟ್ಯಾಂಕ್ ಇದ್ದರೂ ನೀರು ಸರಬರಾಜು ಆಗುತ್ತಿಲ್ಲ. ಜಲಜೀವನ್ ಮಿಷನ್ ಕಾರ್ಯಗತಗೊಳ್ಳದೆ ಕುಡಿಯುವ ನೀರಿಗಾಗಿ ಸಮೀಪದ ಕೊಳವೆ ಬಾವಿಯನ್ನು ಅವಲಂಬಿಸ ಬೇಕಾಗಿದೆ.

ನೀರಿಗೆ ಹೊಳೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಮಸ್ಯೆಯನ್ನು ಪರಿಹರಿಸದಿದ್ದರೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರಾದ ಮಂದಪAಡ ಮೊಣ್ಣಪ್ಪ, ಇಬ್ರಾಹಿಂ ಪಿ.ಬಿ., ನಬೀಸಾ, ಫೇಮೀನಾ ಎಚ್ಚರಿಸಿದ್ದಾರೆ.

ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯ ನೀಡದ ಪಂಚಾಯಿತಿ ಹಾಗೂ ಸಂಬAಧಿಸಿದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಪಳ್ಳಿರಾಣೆಗೆ ತುರ್ತಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಡಬೇಕು. ಇಲ್ಲಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ರಸ್ತೆಯನ್ನು ದುರಸ್ತಿಪಡಿಸಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಸುಲೇಮಾನ್ ಪಿ.ಎಂ., ಸುಬೇರ್ ಪಿ.ಹೆಚ್., ಮಿಥುನ್ ಎಂ.ಆರ್., ಶಾದುಲಿ ಪಿ.ಎ., ಚಾಮಿ ಬಿ.ಪಿ., ರಾಜೀವ್, ಬಿ.ಎಂ. ಹನೀಫ, ಎಂ.ಎ. ಮೈದು ಎಂ.ಎ., ಸೂಫಿ, ರಘು ಸೇರಿದಂತೆ ಹಲವು ಗ್ರಾಮಸ್ಥರು ಹಾಜರಿದ್ದರು.