ಮಡಿಕೇರಿ, ಏ. ೧೮: ಸಿರಿಗನ್ನಡ ವೇದಿಕೆ ಕೊಡಗು ಹಾಗೂ ಸಿರಿಗನ್ನಡ ವೇದಿಕೆ ಮಹಿಳಾ ಘಟಕದ ವತಿಯಿಂದ ರಾಜ್ಯಮಟ್ಟದ ಕಿರು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ.
‘ಅಂರ್ರಾಷ್ಟಿçÃಯ ಕಾರ್ಮಿಕರ ದಿನಾಚರಣೆಯ ಮಹತ್ವ’ ಎಂಬ ವಿಷಯದ ಕುರಿತು ಕನ್ನಡದಲ್ಲಿ ನಿಯಮಿತ, ಪ್ರಾಮುಖ್ಯತೆಯ ಕುರಿತು ಪ್ರಬಂಧ ಸ್ಪರ್ಧೆ ನಡೆಯಲಿದೆ.
ಬರಹಗಾರರು ಕನ್ನಡ ಭಾಷೆಯಲ್ಲಿ ಮೊಬೈಲ್ನಲ್ಲಿ ಬರಹಗಳನ್ನು ಟೈಪ್ ಮಾಡಿ ೯೧೪೧೧೬೦೯೩೨ ಈ ಸಂಖ್ಯೆಗೆ ವಾಟ್ಸಾಪ್ ಮುಖಾಂತರ ಕಳುಹಿಸಬೇಕು. ಕಾಗುಣಿತ ದೋಷ ಇಲ್ಲದಂತಿರಲಿ. ಶೀರ್ಷಿಕೆ ಕಡ್ಡಾಯವಾಗಿರಬೇಕು.
ಬರಹಗಾರರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳ ಜೊತೆಗೆ ಅತ್ಯುತ್ತಮ ೪, ಉತ್ತಮ ೪ ಮತ್ತು ಮೆಚ್ಚುಗೆ ೪ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಬರಹ ತಲುಪಿಸಲು ಏ. ೨೬ ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ೯೫೯೧೩೬೬೨೯೬ ಸಂಖ್ಯೆಯನ್ನು ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.