ಇದೀಗ ಬಿಸಿಲ ಝುಳದ ನಡುವೆಯೇ ಚುನಾವಣಾ ಕಾವು ಕೂಡಾ ಏರತೊಡಗಿದೆ. ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ೨೦೨೩ರ ಮೇ ೧೦ ಎಂದು ಘೋಷಿತವಾಗಿದೆ. ೨೨೪ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿರುವ ಆ ದಿನವನ್ನು ಪ್ರಜಾಪ್ರಭುತ್ವ ಹಬ್ಬವನ್ನಾಗಿ, ಮತದಾನದ ಉತ್ಸವವನ್ನಾಗಿ ಸಂಭ್ರಮಿಸುವ ಪೂರ್ವತಯಾರಿ ಭರದಿಂದ ಸಾಗಿದೆ.
ಭಾರತವೆಂಬ ಬೃಹತ್ ಪ್ರಜಾಪ್ರಭುತ್ವ ದೇಶದ ಜವಾಬ್ದಾರಿಯುತ ನಾಗರಿಕರಾಗಿ ಈ ಸಂದರ್ಭದಲ್ಲಿ ತಪ್ಪದೇ ಮತದಾನ ಮಾಡುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವೂ ಆಗಿದೆ. ತಮ್ಮ ಅಮೂಲ್ಯ ಮತದಾನದ ಮೂಲಕ ನಮ್ಮ ಜನಪ್ರತಿನಿಧಿಗಳನ್ನು, ತನ್ಮೂಲಕ ಭಾವಿ ಸರಕಾರವನ್ನು ನಿರ್ಧರಿಸುವ ಹೊಣೆ ನಮ್ಮ ಮೇಲಿದೆ. ನಮ್ಮ ಮತ್ತು ನಮ್ಮ ದೇಶದ ಭವಿಷ್ಯ ಈಗ ನಮ್ಮ ಬೆರಳ ತುದಿಯಲ್ಲಿದೆ ಎಂಬುದAತೂ ಸುಳ್ಳಲ್ಲ.
ಚುನಾವಣಾ ದಿನವಾದ ೨೦೨೩ ರ ಮೇ ೧೦ ರಂದು ನಾವು ಚಲಾಯಿಸುವ ಪ್ರತಿಯೊಂದು ಮತವೂ ಭವಿಷ್ಯದ ಸರ್ಕಾರವನ್ನು ರೂಪಿಸುತ್ತದೆ. ನಮ್ಮ ಸಂವಿಧಾನವು ಸಕಲರಿಗೂ ಮುಕ್ತ ಸ್ವಾತಂತ್ರ÷್ಯದಿAದ ಮತದಾನ ಮಾಡುವ ಹಕ್ಕನ್ನು ಕರುಣಿಸಿದೆ. ಜಾತ್ಯತೀತ, ಲಿಂಗಾತೀತ, ಬಡವಬಲ್ಲಿದರೆಂಬ ಭೇದವಿಲ್ಲದ ಮತವು ಸಮಾನ ಮೌಲ್ಯವನ್ನು ಹೊಂದಿರುತ್ತದೆ. ಅತ್ಯಂತ ಎಚ್ಚರಿಕೆಯಿಂದ ನಿರ್ಧರಿಸಿ ಚಲಾಯಿಸುವ ಮತವು ದೇಶದ ಅಭಿವದ್ಧಿಗೆ ಪೂರಕವಾಗುತ್ತದೆ. ತಪ್ಪದೇ ಮತದಾನ ಮಾಡಿ ಬಲಿಷ್ಠ ಸರ್ಕಾರವನ್ನು ಆಯ್ಕೆ ಮಾಡುವುದು ನಮ್ಮ ಹಕ್ಕಷ್ಟೇ ಅಲ್ಲ ಜವಾಬ್ದಾರಿ ಕೂಡಾ ಹೌದು. ಪ್ರಜಾಸತ್ತಾತ್ಮಕ ರಾಷ್ಟçವಾದ ಭಾರತದಲ್ಲಿ ಪ್ರತಿ ೫ ವರ್ಷಗಳಿಗೊಮ್ಮೆ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತವೆ.
ಹದಿನೆಂಟು ವರ್ಷ ತುಂಬಿದವರೆಲ್ಲರೂ ಮತದಾನಕ್ಕೆ ಅರ್ಹರಾಗಿರು ತ್ತಾರೆ. ಸರಿಯಾಗಿ ಆಲೋಚಿಸದೆ ಚಲಾಯಿಸುವ ಮತದಿಂದ ಅನರ್ಹರು ಅಧಿಕಾರಕ್ಕೆ ಬಂದು ಆಳುವ ಸಂಭವವಿರುತ್ತದೆ. ದೇಶವನ್ನು ಆಂತರಿಕವಾಗಿ ಕಾಡುತ್ತಿರುವ ಬಹುತೇಕ ಸಮಸ್ಯೆಗಳಿಗೆ ಸರ್ವ ನಾಗರಿಕರೂ ಚಲಾಯಿಸುವ ಸೂಕ್ತ ಮತದಾನ ಪರಿಹಾರವಾಗಬಲ್ಲದು. ಏಕೆಂದರೆ ಮತದಾರನೇ ಬದಲಾವಣೆಯ ಹರಿಕಾರ.
ಸೂಕ್ಷö್ಮವಾಗಿ ಅವಲೋಕಿಸಿದರೆ ಮತದಾನದ ಪ್ರಮಾಣ ವಿದ್ಯಾವಂತರಿರುವ ಕ್ಷೇತ್ರಗಳಿಗಿಂತ ಅವಿದ್ಯಾವಂತ ರಿರುವ ಕ್ಷೇತ್ರಗಳಲ್ಲಿಯೇ ಜಾಸ್ತಿಯಾಗಿ ಕಂಡು ಬರುತ್ತಿರುವುದು ವಿಪರ್ಯಾಸ. ಮತದಾನದಲ್ಲಿ ಪ್ರತಿಯೊಬ್ಬನ ಪಾತ್ರ ಪರಿಣಾಮಕಾರಿಯಾಗಿರುವಂತೆ ಮತದಾನದ ಬಗ್ಗೆ ಅರಿವು ಮೂಡಿಸುವಲ್ಲಿ ವಿನೂತನ ಪ್ರಯೋಗಗಳು ನಡೆಯುತ್ತಿವೆ. ಅಂಚೆ ಪತ್ರಗಳ ಮೂಲಕ, ಹಾಲಿನ ಪ್ಯಾಕೆಟ್‌ಗಳ ಮೇಲೆ ಮತದಾನ ಜಾಗೃತಿಗಾಗಿ ಘೋಷಣೆಗಳನ್ನು ಮುದ್ರಿಸಿ ವಿತರಿಸುವ ಪ್ರಯತ್ನಗಳೂ ಸಾಗಿವೆ. ಕರಪತ್ರ, ಭಿತ್ತಿಪತ್ರ, ಬಣ್ಣ ಬಣ್ಣದ ಜಾಹೀರಾತುಗಳ ಮೂಲಕವೂ ಕಣ್ಣು ತೆರೆಸುವ ಯತ್ನಸಾಗಿದೆ.
ಪಟ್ಟಭದ್ರ ಹಿತಾಸಕ್ತಿಗಳು ಅಮಾಯಕರಿಗೆ ಹಣ, ವಸ್ತು, ಮಾದಕ ದ್ರವ್ಯಗಳ ಆಮಿಷಗಳನ್ನು ನೀಡಿ ಅಯೋಗ್ಯರು ಅಧಿಕಾರಕ್ಕೆ ಬರುವ ಸಾಧ್ಯತೆಗಳನ್ನು ತಡೆಯಬೇಕಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಹೇಳಿರುವಂತೆ, ‘ಮತದಾನ ಎನ್ನುವುದು ಮನೆಯ ಮಗಳಿದ್ದಂತೆ. ಅದನ್ನು ಹಣಕ್ಕಾಗಿ ಮಾರಿಕೊಳ್ಳಬೇಡಿ.’
ಜನರು ಸಾಕಷ್ಟು ವಿದ್ಯಾವಂತ ರಾಗಿದ್ದರೂ, ಮತದಾರರನ್ನು ಅದೆಷ್ಟೋ ರೀತಿಗಳಲ್ಲಿ ಪ್ರೇರೇಪಿಸಿದರೂ ಸಹಾ ಶೇಕಡಾ ನೂರರಷ್ಟು ಪ್ರಮಾಣದ ಮತದಾನ ಇನ್ನೂ ಆಗಿಲ್ಲ.
ಹಿಂಸೆ ಮತ್ತು ಭಯೋತ್ಪಾದನೆ ಅವಿದ್ಯಾವಂತರನ್ನು ಮತದಾನಕ್ಕೆ ಅಡ್ಡಿ ಮಾಡಿದರೆ, ಅನಾಸಕ್ತಿ ಹಾಗೂ ಬೇಜವಾಬ್ದಾರಿ ವಿದ್ಯಾವಂತರನ್ನು ಮತದಾನದಿಂದ ವಿಮುಖರನ್ನಾಗಿಸಿದೆ. ನಮ್ಮ ಕೊಡಗಿನಲ್ಲಿ ಕಳೆದ ಬಾರಿ ೭೪% ಮತದಾನ ದಾಖಲೆಗೊಂಡಿದ್ದು ಈ ಬಾರಿ ಅದರ ಶೇಕಡಾವಾರನ್ನು ಹೆಚ್ಚಿಸಲು ಚುನಾವಣಾ ಆಯೋಗವು ಸರಕಾರ ಹಾಗೂ ಸರ್ಕಾರೇತರ ಸಂಸ್ಥೆಗಳೊAದಿಗೆ ಹೆಚ್ಚಿನ ಶ್ರಮ ವಹಿಸುತ್ತಿದೆ. ಅಧಿಕ ಮತದಾನ ಪ್ರಕ್ರಿಯೆಗಾಗಿ ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (SಗಿಇಇP) ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗ ದೊಂದಿಗೆ ಬೈಕ್ ಜಾಥಾ, ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ ಮೊದಲಾದ ವಿವಿಧ ರೀತಿಯ ಅಭಿಯಾನಗಳು ಆರಂಭಗೊAಡಿವೆ.
ಮತದಾನದ ರಾಯಭಾರಿಗಳಾಗಿ ಚೇರಂಬಾಣೆ ಸಮೀಪದ ರವಿ ಮುತ್ತಪ್ಪ, ಮೇಕೇರಿಯ ಈಶ್ವರಿ, ಕುಶಾಲನಗರದ ಬಸವರಾಜು ಬಡಿಗೇರ್ ಕೊಡಗಿನಲ್ಲಿ ನೇಮಕಗೊಂಡಿದ್ದಾರೆ. ಸರ್ವೋಚ್ಚ ನಾಗರಿಕನ ಒಂದು ಮತಕ್ಕೆÀ ಇಡೀ ದೇಶವನ್ನೇ ಬದಲಿಸಬಲ್ಲ ತಾಕತ್ತಿದೆ ಎಂಬುದನ್ನು ಸಾರಿ ಹೇಳುತ್ತಿದ್ದಾರೆ. ಮೂಲಭೂತ ಅವಶ್ಯಕತೆಗಳಾದ ನೀರು, ಆರೋಗ್ಯ, ವಸತಿ, ಶಿಕ್ಷಣ, ರಸ್ತೆಗಳು, ಪರಿಸರ ಸಂರಕ್ಷಣೆ, ಯೋಜಿತ ನಗರಾಭಿವೃದ್ಧಿ ಇವೇ ಮೊದಲಾದ ಕನಸುಗಳು ಈಡೇರಲು ನಮಗೆ ಸದೃಢ ಸರಕಾರ ಬೇಕೇ ಬೇಕು.
ಮುಂದೆ ಸಾವಿರಾರು ಪ್ರತಿಭಟನೆಗಳನ್ನು ಮಾಡುತ್ತಾ ಪರದಾಡುವ ಬದಲು ಇಂದು ಯೋಗ್ಯ ಜನ ಪ್ರತಿನಿಧಿಯನ್ನು ಚುನಾಯಿಸುವ ಸೂಕ್ತ ಪ್ರಜ್ಞೆಯ ಅರಿವು ಮೂಡಬೇಕು. ನಮ್ಮ ಚುನಾವಣಾ ಆಯೋಗವು ಬದಲಾದ ಕಾಲಘಟ್ಟಕ್ಕೆ ಅನುಗುಣ ವಾಗಿ ಮತದಾರರನ್ನು ಆಕರ್ಷಿಸುವಂತಹ ಸೌಲಭ್ಯವುಳ್ಳ ಮತಗಟ್ಟೆಗಳನ್ನು ಸ್ಥಾಪಿಸುವ ಯೋಜನೆಗಳನ್ನು ರೂಪಿಸಿದೆ.
ಮಹಿಳಾಮಣಿಯರಿಗಾಗಿ ಕೇವಲ ಮಹಿಳಾ ಸಿಬ್ಬಂದಿಗಳನ್ನೇ ಒಳಗೊಂಡ ‘ಸಖೀ ಬೂತ್”, ಯುವ ಜನತೆಗಾಗಿ “ಯಂಗ್ ಬೂತ್’. ಕೊಡಗಿನ ಪ್ರಮುಖ ಬೆಳೆಯಾದ ಕಾಫಿ ಉತ್ಪನ್ನಗಳ ಕುರಿತಾದ ಚಿತ್ರಣಗಳಿಂದ ಕಂಗೊಳಿಸುವ ಬೂತ್, ಆದಿ ವಾಸಿಗಳ ವನ್ಯ ಜೀವಿಗಳ ಕುರಿತಾದ ಮಾಹಿತಿಗಳನ್ನು ಒಳಗೊಂಡAತಹ ವರ್ಣರಂಜಿತ ಬೂತ್, ಹೀಗೆ ವಿವಿಧ ಪರಿಕಲ್ಪನೆಗಳಿಂದ ಕೂಡಿದ ಮತ ಗಟ್ಟೆಗಳು ಮತದಾರರನ್ನು ಖಂಡಿತಾ ಸೆಳೆಯಲಿವೆ.
ಎಲ್ಲಕ್ಕಿಂತ ವಿಶೇಷವಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ ೮೦ ವರ್ಷಕ್ಕೆ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರು ಗೌಪ್ಯ ಮತದಾನವನ್ನು ಮನೆಯಿಂದಲೇ ಮಾಡಬಹುದಾದ ಸೌಲಭ್ಯ ಈ ಬಾರಿ ಮತದಾನದ ಪ್ರಮಾಣವನ್ನು ಹೆಚ್ಚಿಸಲಿದೆ. ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು ಮತ್ತು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಾತ್ರಿಪಡಿಸಿಕೊಳ್ಳಲು ಸಹಾಯವಾಣಿ ಸಂಖ್ಯೆ ೧೯೫೦ ಹಾಗೂ ವಿವಿಧ ವೆಬ್‌ಸೈಟ್‌ಗಳು, ಮೊಬೈಲ್ ಆ್ಯಪ್‌ಗಳು ಲಭ್ಯವಿವೆ.
ಇನ್ನೂ ಹೇಳಬೇಕೆಂದರೆ ಯಾರಿಗಾದರೂ ಯಾವುದೇ ಅಭ್ಯರ್ಥಿ ಅಥವಾ ಪಕ್ಷಕ್ಕೆ ಮತ ಹಾಕಲು ಇಚ್ಚೆ ಇಲ್ಲದಿದ್ದ ಪಕ್ಷದಲ್ಲಿ ಓಔಖಿಂ (ಓoಟಿe oಜಿ ಣhe ಚಿbove) ಎಂಬ ಆಯ್ಕೆಯನ್ನು ಕೂಡಾ ಒದಗಿಸಿದೆ. ಪ್ರತಿಯೊಬ್ಬ ಪ್ರಜೆ ಕೂಡಾ ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲೇಬೇಕು ಎಂಬ ಚಿಂತನೆ ಇದರ ಹಿಂದಿದೆ. ಇದು ನಾವು ನಮಗೆ ಸ್ವಾತಂತ್ರ÷್ಯಗÀಳಿಸಿ -ಉಳಿಸಿಕೊಟ್ಟ ಸ್ವಾತಂತ್ರ÷್ಯ ಹೋರಾಟ ಗಾರರಿಗೆ ನಾವು ಸಲ್ಲಿಸಬಹುದಾದ ಸೂಕ್ತ ಗೌರವ. ನಮ್ಮ ಸರಕಾರ ಇಷ್ಟೆಲ್ಲಾ ಜನಾನುರಾಗಿ ಸವಲತ್ತು ಗಳನ್ನು ಒದಗಿಸಿ ಮತದಾನಕ್ಕಾಗಿ ಹುರಿದುಂಬಿಸುತ್ತಿರುವಾಗ ಅಸಡ್ಡೆ ಮಾಡದೆ ನಮ್ಮ ದೇಶದ ಮೇಲೆ ಅಭಿಮಾನವಿಟ್ಟು ಹೆಮ್ಮೆಯಿಂದ, ಯಾವುದೇ ಆಮಿಷಗಳಿಗೆ ಒಳಗಾಗದೆ ನಿರ್ಭೀತರಾಗಿ ಮತ ಹಾಕೋಣ.
ಆ ಮೂಲಕ ಸದೃಢ ಸರಕಾರದ ರೂವಾರಿ ಗಳಾಗೋಣ. ನಮ್ಮ ಗಣ ರಾಜ್ಯದ ಗರಿಮೆಗೆ ಸಾಕ್ಷಿಗಳಾಗೋಣ.
- ಕೊಟ್ಟಕೇರಿಯನ ಲೀಲಾ ದಯಾನಂದ,
ಉಪ ಮಂಡಲ ಅಧಿಕಾರಿ ಬಿಎಸ್‌ಎನ್‌ಎಲ್, ಮಡಿಕೇರಿ.
ಮೊ. ೯೪೪೯೮೫೮೫೮೬