ಭಾಗಮAಡಲ, ಏ. ೧೭: ಸಮೀಪದ ಚೆಟ್ಟಿಮಾನಿ ಗ್ರಾಮದ ಕೆದಂಬಾಡಿ ಕ್ರಿಕೆಟ್ ಮೈದಾನದಲ್ಲಿ ಕೆದಂಬಾಡಿ ರಾಮಯ್ಯ ಗೌಡ ಸ್ಮರಣಾರ್ಥ ೧೦ ಕುಟುಂಬ ೧೮ ಗೋತ್ರ ಕೊಡಗು ಮತ್ತು ದಕ್ಷಿಣ ಕನ್ನಡದ ಅರೆಭಾಷಿಕ ಗೌಡ ಕುಟುಂಬಗಳ ನಡುವಿನ ೨೭ನೇ ವರ್ಷದ ಕೆದಂಬಾಡಿ ಕಪ್ ಕ್ರಿಕೆಟ್‌ನ ಸೋಮವಾರದ ಪಂದ್ಯಗಳಲ್ಲಿ ನೂಜಿಬೈಲು, ಪಾಲಾರ ಗುಂಡ್ಯ ಮತ್ತು ಕಾಳೆಯಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿದವು.

ದಿನದ ಮೊದಲ ಪಂದ್ಯದಲ್ಲಿ ಗುಡ್ಡೆಮನೆ ತಂಡವು ೬ ವಿಕೆಟಿಗೆ ೭೯ ರನ್ ಗಳಿಸಿತು. ಉತ್ತರವಾಗಿ ಆಡಿದ ಜೈನಿರ ತಂಡ ನಾಲ್ಕು ವಿಕೆಟಿಗೆ ೬೭ ರನ್ ಗಳಿಸಿ ೧೨ ರನ್‌ಗಳ ಸೋಲನ್ನು ಅನುಭವಿಸಿತು. ದಬ್ಬಡ್ಕ ತಂಡವು ಎಲ್ಲಾ ವಿಕೆಟ್ ಕಳೆದುಕೊಂಡು ೪೫ ರನ್ ಗಳಿಸಿತು. ಕಾಳೆಯಂಡ ತಂಡ ನಾಲ್ಕು ಓವರ್‌ನಲ್ಲಿ ೪೭ ರನ್ ಗಳಿಸಿ ಜಯಗಳಿಸಿತು. ಕೆದಂಬಾಡಿ (ಬಿ) ಮತ್ತು ಪಾಲಾರ ಗುಂಡ್ಯ ತಂಡಗಳ ನಡುವಿನ ಪಂದ್ಯದಲ್ಲಿ ಕೆದಂಬಾಡಿ (ಬಿ) ೪೦ ರನ್ ಗಳಿಸಿ ಪಾಲಾರ ಗುಂಡ್ಯ ತಂಡದ ಎದುರು ೩೧ ರನ್‌ಗಳ ಸೋಲನ್ನು ಕಂಡಿತು. ಪಾಲಾರ ಗುಂಡ್ಯ ತಂಡವು ೭೧ ರನ್ ಗಳಿಸಿತು.

ಉಪ್ಪಂಡಿ ಮತ್ತು ಅಡಕ (ಶ್ರೀ ವಿಷ್ಣು) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಡಕ (ಶ್ರೀ ವಿಷ್ಣು) ತಂಡವು ೭೬ ರನ್ ಗಳಿಸಿದರೆ ಉಪ್ಪಂಡಿ ತಂಡ ೩೯ ರನ್ ಗಳಿಸಿ ಸೋಲನ್ನು ಅನುಭವಿಸಿತು. ಆಟಗಾರ ಗುರು ಪ್ರಸಾದ್ ಗಳಿಸಿದ ೭೫ ರನ್‌ಗಳೊಂದಿಗೆ ಕೊನೆಯ ಆರು ಬಾಲ್‌ಗೆ ಆರು ಸಿಕ್ಸರ್ ಬಾರಿಸುವುದರ ಮೂಲಕ ನೂಜಿಬೈಲು ತಂಡ ೧೦೧ ರನ್‌ಗಳ ದಾಖಲೆ ಮಾಡಿತು. ಕುದುಕುಳಿ ತಂಡವು ನಾಲ್ಕು ವಿಕೆಟ್‌ಗೆ ೪೬ ರನ್ ಮಾಡಿ ೫೪ ರನ್‌ಗಳ ಸೋಲನ್ನು ಅನುಭವಿಸಿತು.

ಗುಡ್ಡೆಮನೆ ಮತ್ತು ಕಾಳೆಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಗುಡ್ಡೆಮನೆ ತಂಡ ೪೮ ರನ್ ಗಳಿಸಿದರೆ ಕಾಳೆಯಂಡ ತಂಡ ೫೪ ರನ್ ಗಳಿಸಿ ಗೆಲುವು ಸಾಧಿಸಿತು. ಅಡಕ (ಶ್ರೀ ವಿಷ್ಣು) ಮತ್ತು ಪಾಲಾರ ಗುಂಡ್ಯ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಾಲಾರ ಗುಂಡ್ಯ ತಂಡವು ೬೩ ರನ್ ಗಳಿಸಿತು. ಅಡಕ (ಶ್ರೀ ವಿಷ್ಣು) ತಂಡ ೪೭ ರನ್ ಗಳಿಸಿ ಸೋಲನ್ನು ಅನುಭವಿಸಿತು. ನೂಜಿಬೈಲು ಮತ್ತು ತುಂತಜೆ ತಂಡಗಳ ನಡುವಿನ ಪಂದ್ಯದಲ್ಲಿ ನೂಜಿಬೈಲು ತಂಡ ೧೧೪ ರನ್ ಗಳಿಸಿತು. ತುಂತಜೆ ೫೪ ರನ್ ಗಳಿಸಿ ೬೦ ರನ್‌ಗಳ ಸೋಲನ್ನು ಅನುಭವಿಸಿತು. ಇದುವರೆಗಿನ ಪಂದ್ಯಗಳಲ್ಲಿ ನೂಜಿಬೈಲು ತಂಡ ಅತ್ಯಧಿಕ ರನ್‌ಗಳಿಸಿದ ತಂಡವಾಗಿ ಹೊರಹೊಮ್ಮಿದೆ. -ಸುನಿಲ್