ಸೋಮವಾರಪೇಟೆ, ಏ. ೧೭: ಸಮೀಪದ ಐಗೂರು ಶ್ರೀ ಆದಿಶಕ್ತಿ ಮಹಾತಾಯಿ ಹಾಗೂ ಪಾಷಾಣ ಸೋಮವಾರಪೇಟೆ, ಏ. ೧೭: ಸಮೀಪದ ಐಗೂರು ಶ್ರೀ ಆದಿಶಕ್ತಿ ಮಹಾತಾಯಿ ಹಾಗೂ ಪಾಷಾಣ ದೇವಾಲಯದಲ್ಲಿ ಪಾಷಾಣಮೂರ್ತಿ ಮತ್ತು ಕಲ್ಕುಡ ದೈವಗಳ ಕೋಲ ನಡೆಯಿತು.

ನೇಮೋತ್ಸವ ಅಂಗವಾಗಿ ಕಳಸದ ಮೆರವಣಿಗೆ, ಮಹಾಪೂಜೆ, ಆದಿಶಕ್ತಿ ಮಹಾತಾಯಿ ದರ್ಶನ ನಂತರ ಪಾಷಾಣಮೂರ್ತಿ ಮತ್ತು ಕಲ್ಕುಡ ದೈವಗಳ ಕೋಲ ನಡೆಯಿತು. ನಂತರ ಮಂತ್ರವಾದಿ ಗುಳಿಗ ದೈವದ ಕೋಲ, ಕುಪ್ಪೆ ಪಂಜುರ್ಲಿ ದೈವದ ಕೋಲ, ಧೂಮಾವತಿ ದೈವದ ಕೋಲ, ಕಾರ್ಣಿಕ ದೈವ ಸ್ವಾಮಿ ಕೊರಗಜ್ಜ ದೈವದ ಕೋಲ, ಜಾಗೆದ ಗುಳಿಗ ದೈವದ ಕೋಲ ನಡೆಯಿತು. ಭದ್ರಕಾಳಿದೇವಿಯ ಕೋಲ, ಕೊರತಿ ದೇವಿಯ ಕೋಲ, ರಕ್ತೇಶ್ವರಿ ದೈವದ ಕೋಲ ನೆರವೇರಲಿದೆ ಎಂದು ದೈವದರ್ಶಿ ಆನಂದ ಪೂಜಾರಿ ತಿಳಿಸಿದ್ದಾರೆ. ಸುಳ್ಯದ ಜಯರಾಮ ಬೊಳಿಯ ಮಜಲು ಮತ್ತು ಸಹಪಾಠಿಗಳು ದೈವನರ್ತಕರಾಗಿ ಆಗಮಿಸಿದ್ದು, ರಾಜ್ಯ ಹಾಗೂ ಜಿಲ್ಲೆಯ ವಿವಿಧೆಡೆಗಳಿಂದ ಭಕ್ತಾದಿಗಳು ಆಗಮಿಸಲಿದ್ದಾರೆ.

ತಾ.೧೮ರಂದು (ಇಂದು) ಮಧ್ಯಾಹ್ನ ೧.೩೦ಕ್ಕೆ ಸರ್ವ ದೈವಗಳ ಎಡೆ ಪ್ರಸಾದ ವಿನಿಯೋಗ, ಅಪರಾಹ್ನ ೩ ಗಂಟೆಗೆ ಮಹಾಮಂಗಳಾರತಿ ಸಂಜೆ ೬ ಗಂಟೆಗೆ ದೈವ ನಡೆ ಮುಚ್ಚುವುದು ಹಾಗೂ ವರ್ಷಾವಧಿಯ ಜಾತ್ರಾ ಕಾರ್ಯಕ್ರಮಗಳು ಮುಕ್ತಾಯಗೊಳ್ಳಲಿದೆ.