ಮಡಿಕೇರಿ, ಏ. ೧೬: ವಿದ್ಯಾರ್ಥಿಗಳಿಗೆ ತಮ್ಮ ವಿಷಯವನ್ನು ಅರ್ಥೈಸಲು ಪುಸ್ತಕದ ವಿಚಾರ ಮಾತ್ರವಲ್ಲದೆ ವಿಭಿನ್ನ ಪ್ರಯೋಗಗಳು ಹಾಗೂ ಉದಾಹರಣೆಗಳು ಅತ್ಯವಶ್ಯಕವಾಗಿದ್ದು ಇಂತಹ ಶಿಕ್ಷಣ ನೀಡುವಲ್ಲಿ ಕಾರ್ಯಾಗಾರಗಳ ಪಾತ್ರ ಬಹುಮುಖ್ಯ ಎಂದು ಮಂಗಳೂರು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾಕ್ಟರ್ ಗಿರಿಧರ್ ರಾವ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ದರು. ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಮಾಜಶಾಸ್ತç ವಿಭಾಗ ಮತ್ತು ಮಂಗಳೂರು ಸಮಾಜಸ್ತç ಸಂಘದ ಸಹಯೋಗದಲ್ಲಿ ನಡೆದ ‘ನೂತನ ಶಿಕ್ಷಣ ನೀತಿ ೨೦೨೦’, ಸಮಾಜಶಾಸ್ತç ವಿಷಯದ ಚತುರ್ಥ ಸೆಮಿಸ್ಟರ್ ಪಠ್ಯಕ್ರಮದ ಒಂದು ದಿನದ ಕಾರ್ಯಾಗಾರದಲ್ಲಿ ಉದ್ಘಾಟಕರಾಗಿ ಪಾಲ್ಗೊಂಡ ಅವರು ವಿದ್ಯಾರ್ಥಿಗಳಿಗೆ ಹೇಗೆ ಸಮಾಜಶಾಸ್ತçದ ವಿಷಯ ಗಳನ್ನು ಮನದಟ್ಟು ಮಾಡಿಸಬೇಕೆಂಬ ಅರಿವನ್ನು ಪ್ರಾಧ್ಯಾಪಕರು ಹೊಂದಬೇಕು ಎಂಬುದನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ.ಪುಷ್ಪ ಕುಟ್ಟಣ್ಣ ಅವರಿಗೆ ಮಂಗಳೂರು ಸಮಾಜಶಾಸ್ತç ಸಂಘದ ವತಿಯಿಂದ ಸನ್ಮಾನಿಸಲಾಯಿತು. ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣದ ಅವಶ್ಯಕತೆ ಇದೆ ಮತ್ತು ಸಮಾಜಶಾಸ್ತçವನ್ನು ವಿದ್ಯಾರ್ಥಿಗಳು ಸಮುದಾಯ ದೊಂದಿಗೆ ಬೆರೆತು ಅರ್ಥ ಮಾಡಿ ಕೊಳ್ಳುವಂತಹ ಯೋಜನೆಗಳನ್ನು ಅವರಿಗೆ ಕೊಡಬೇಕೆಂದು ಹೇಳಿದರು. ಉಪನ್ಯಾಸಕರು ಸಮಾಜಶಾಸ್ತçದ ಬಗ್ಗೆ ಹೆಚ್ಚು ಒಲವನ್ನು ಹೊಂದಿರಬೇಕು ಆಗ ಮಾತ್ರ ಸಮಾಜಶಾಸ್ತç ಕಟ್ಟಿ ಬೆಳೆಸಲು ಸಾಧ್ಯವಾಗುತ್ತದೆ ಎಂಬ ಕಿವಿ ಮಾತನ್ನು ಹೇಳಿದರು. ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಅವರು ‘ಒಚಿಡಿgiಟಿಚಿಟizeಜ ಉಡಿouಠಿs iಟಿ Iಟಿಜiಚಿ’ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು. ಎಫ್.ಎಂ.ಸಿ. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎ.ಎನ್. ಗಾಯತ್ರಿ, ಅವರು ‘Poಠಿuಟಚಿಣioಟಿ ಚಿಟಿಜ Soಛಿieಣಥಿ’ ಎಂಬ ವಿಷಯದ ಕುರಿತಾಗಿ ವಿಚಾರ ಮಂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಫ್.ಎಂ.ಕೆ.ಎA.ಸಿ. ಕಾಲೇಜಿನ ಪ್ರಾಂಶುಪಾಲ ಡಾ.ಪ್ರೊ.ರಾಘವ್ ಬಿ. ಅವರು ವಹಿಸಿದ್ದರು. ವೇದಿಕೆಯಲ್ಲಿ ಸೇಂಟ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ರಿಚರ್ಡ್ ಪೈಸ್, ಮಂಗಳೂರು ಸಮಾಜಶಾಸ್ತç ಸಂಘದ ಅಧ್ಯಕ್ಷ ಪ್ರೊ. ಯೋಗಿಂದ್ರ ಬಿ. ಅವರು ಪದಾಧಿಕಾರಿಗಳಾದ ಡಾ. ಗಾಯತ್ರಿ ಎನ್., ಖಜಾಂಚಿ, ಡಾ. ವೈಶಾಲಿ, ಎಫ್.ಎಂ.ಕೆ.ಎA.ಸಿ. ಕಾಲೇಜಿನ Iಕಿಂಅ ವಿಭಾಗದ ಸಂಯೋಜಕ ಡಾ.ರಾಜೇಂದ್ರ ಆರ್. ರವರು ಉಪಸ್ಥಿತರಿದ್ದರು.

ಸುಮಾರು ಮೂವತ್ತಕ್ಕೂ ಹೆಚ್ಚಿನ ಸಮಾಜಶಾಸ್ತ್ರ ಉಪನ್ಯಾಸಕರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ವಂದನಾರ್ಪಣೆ ಯನ್ನು ಡಾ.ಎ. ಎನ್.ಗಾಯತ್ರಿ ಅವರು ನಡೆಸಿದರೆ, ನಿರೂಪಣೆ ಯನ್ನು ವಿದ್ಯಾ ಅವರು ನಡೆಸಿಕೊಟ್ಟರು.