ಕುಶಾಲನಗರ, ಏ. ೧೬: ಕುಶಾಲನಗರ ಪುರಸಭೆ ವ್ಯಾಪ್ತಿಯ ಶ್ರೀ ಸೋಮೇಶ್ವರ ದೇವಾಲಯದ ಸಮೀಪ ಹಂದಿಮಾAಸ, ಮೀನು ಮಾಂಸ ಮಾರಾಟಕ್ಕೆ ಅನುಮತಿ ನೀಡದಂತೆ ಪುರಸಭೆ ಸದಸ್ಯ ಹಾಗೂ ಸ್ಥಳೀಯ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಈ ಭಾಗದಲ್ಲಿ ಮಾಂಸ ವ್ಯಾಪಾರ ಮಾಡುತ್ತಿದ್ದು, ಇಡೀ ಪ್ರದೇಶ ವಾಸನಾಮಯವಾಗಿದೆ. ಇದರಿಂದ ಹೊರ ಸೂಸುವ ಕಲುಷಿತ ನೀರು ನೇರವಾಗಿ ಕಾವೇರಿ ನದಿ ಒಡಲು ಸೇರುತ್ತಿದೆ. ಈ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯಲ್ಲಿ ಮಾಂಸ ಮಾರಾಟಕ್ಕೆ ಅನುಮತಿ ನೀಡದಂತೆ ಪುರಸಭೆ ಸದಸ್ಯ ಎಂ.ಬಿ. ಸುರೇಶ್ ಮತ್ತು ನಾಗರಿಕರು ಪುರಸಭೆ ಅಧಿಕಾರಿಗಳನ್ನು ಕೋರಿದ್ದಾರೆ. ಕುಶಾಲನಗರ ಗಂಧದಕೋಟೆ ಬಳಿ ಮಾಂಸ ಮಾರಾಟ ಹರಾಜು ಪ್ರಕ್ರಿಯೆ ಮಾಡದೆ ಪುರಸಭೆಯ ಕೆಲವು ಸದಸ್ಯರು ಶಾಮೀಲಾಗಿ ಕಡಿಮೆ ಮೊತ್ತಕ್ಕೆ ಕೋಳಿ, ಮೀನು ಅಂಗಡಿಗಳನ್ನು ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಪುರಸಭೆ ಸದಸ್ಯರಾದ ಜಗದೀಶ್, ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.