ಪೊನ್ನಂಪೇಟೆ : ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೨ ನೇ ಜನ್ಮದಿನ ಆಚರಿಸಲಾಯಿತು. ಮುಖ್ಯ ಶಿಕ್ಷಕ ಬಿ .ಎಂ ವಿಜಯ್, ಎಸ್‌ಡಿಎಂಸಿ ಉಪಾಧ್ಯಕ್ಷೆ ನಾಗವೇಣಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭ ದೈಹಿಕ ಶಿಕ್ಷಕ ಟಿ.ಎಸ್. ಮಹೇಶ್, ಸಹ ಶಿಕ್ಷಕರಾದ ಎನ್. ನಿಂಗರಾಜು, ಐ.ಎಂ. ರೋಜಿ, ವಿ.ಜೆ. ಫಿಲೋಮಿನಾ, ಹೆಚ್.ಸಿ. ಮಂಗಳಾAಗಿ, ಎಂ. ಎನ್. ಶಕೀಲಾ ಬಾನು, ಸಿ.ಪಿ. ಗಂಗಾಮಣಿ, ಕೆ .ಆರ್. ವಿನಿತಾ, ಅಡುಗೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಕಡಂಗ : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೨ನೇ ಜನ್ಮ ದಿನವನ್ನು ಕಡಂಗ ವಿಜಯ ವಿದ್ಯಾಸಂಸ್ಥೆಯಲ್ಲಿ ಆಚರಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯರುಗಳು, ಸಹ ಶಿಕ್ಷಕರು, ಕಚೇರಿ ಸಿಬ್ಬಂದಿ, ಸಹಾಯಕಿಯರು, ಮುಂಬರುವ ಚುನಾವಣೆಯಲ್ಲಿ ಅರ್ಹ ಹಾಗೂ ಅರ್ಥಪೂರ್ಣ ವ್ಯಕ್ತಿತ್ವವನ್ನು ಹೊಂದಿರುವ ನಾಯಕ ನಿಗೆ ಮತ ನೀಡುವ ಮೂಲಕ ಮತದಾನದ ಹಕ್ಕಿಗೆ ಗೌರವ ನೀಡುವುದರೊಂದಿಗೆ ಸಮಾಜದ ಹಾಗೂ ಪರೋಕ್ಷವಾಗಿ ದೇಶದ ಬೆಳವಣಿಗೆಗೆ ಅವಕಾಶ ಮಾಡಿಕೊಡುವೆವು ಎಂಬ ಪ್ರತಿಜ್ಞೆ ಯನ್ನು ಸ್ವೀಕರಿಸುವ ಮೂಲಕ ಸಂವಿಧಾನ ಶಿಲ್ಪಿಗೆ ಗೌರವ ನಮನ ಸಲ್ಲಿಸಿ, ಅಂಬೇಡ್ಕರ್ ಜಯಂತಿ ಯನ್ನು ಅರ್ಥಪೂರ್ಣ ಗೊಳಿಸಲಾಯಿತು.ಕುಶಾಲನಗರ: ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ಅವರ ೧೩೨ನೇ ಜಯಂತಿಯ ಅಂಗವಾಗಿ ಕುಶಾಲನಗರ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಸರಳ ಕಾರ್ಯಕ್ರಮ ನಡೆಯಿತು.

ಕಚೇರಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ತಹಶೀಲ್ದಾರ್ ಟಿ.ಎಂ. ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಬಾಲಕೃಷ್ಣ ರೈ ಮತ್ತು ಅಧಿಕಾರಿ ಸಿಬ್ಬಂದಿ ವರ್ಗ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ತಾಲೂಕು ತಹಶೀಲ್ದಾರ್ ಪ್ರಕಾಶ್, ಪ್ರತಿಯೊಬ್ಬರು ಸಂವಿಧಾನವನ್ನು ಓದಿ ತಿಳಿದುಕೊಳ್ಳಬೇಕಾಗಿದೆ, ದೇಶದ ಮಹಾನ್ ವ್ಯಕ್ತಿ ಡಾ. ಅಂಬೇಡ್ಕರ್ ಅವರ ಆದರ್ಶಗಳನ್ನು ಪಾಲಿಸಬೇಕಾಗಿದೆ ಎಂದರು. ಪಾಲಿಬೆಟ್ಟ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಅಂಗವಾಗಿ ವೀರಾಜಪೇಟೆ ತಾಲೂಕು ಎಸ್‌ಸಿ ಮೋರ್ಚಾದಿಂದ ಪಾಲಿಬೆಟ್ಟ ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅಂಬೇಡ್ಕರ್ ಅವರ ಜೀವನ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳುವುದರೊಂದಿಗೆ ಸೇವಾ ಮನೋಭಾವದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದರು ಈ ಸಂದರ್ಭ ತಾಲೂಕು ಎಸ್ ಸಿ ಮೋರ್ಚಾದ ಅಧ್ಯಕ್ಷ ಶಶಿ, ಪ್ರಧಾನ ಕಾರ್ಯದರ್ಶಿ ಸುಶೀಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಸೇರಿದಂತೆ ಇತರರು ಇದ್ದರು

ಸುಂಟಿಕೊಪ್ಪ: ಪ್ರಜಾ ಪರಿವರ್ತನಾ ವೇದಿಕೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಅವರ ೧೩೨ನೇ ಜಯಂತಿಯನ್ನು ಆಚರಿಸಲಾಯಿತು. ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆ ಸರಳವಾಗಿ ಆಚರಿಸ ಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ವೇದಿಕೆ ಕೊಡಗು ಜಿಲ್ಲಾ ಘಟಕದ ವೇದಿಕೆ ಜಿಲ್ಲಾಧ್ಯಕ್ಷ ಹೆಚ್.ಎಸ್. ಮುತ್ತಪ್ಪ ಮಾತನಾಡಿ, ಡಾ|| ಬಿ.ಆರ್. ಅಂಬೇಡ್ಕರ್ ಅವರು ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುವುದರ ಮೂಲಕ ಪ್ರಪಂಚವೇ ಕೊಂಡಾಡುವAತ ಸಂವಿಧಾನವನ್ನು ರಚಿಸಿ ದೇಶದ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ. ಇದನ್ನು ಪ್ರತಿಯೊಬ್ಬ ನಾಗರಿಕನು ಉಳಿಸಿಕೊಂಡು ಹೋಗಬೇಕು ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದ್ದು ಕಾನೂನಿಗೆ ಎಲ್ಲರೂ ತಲೆದೂಗಬೇಕು ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಎ. ಗಣೇಶ್ ಮಾತನಾಡಿ, ದೇಶದಲ್ಲಿ ಶೋಷಿತರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಪ್ರತಿಯೊಂದು ವರ್ಗದ ಬಡಜನರಿಗೆ ಜೀವನದ ಭದ್ರತೆಗೆ ಸಂವಿಧಾನದ ಮೂಲಕ ಸ್ಪಷ್ಟ ಕಾನೂನು ರೂಪಿಸಿ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಹಗಲಿರುಳು ಶ್ರಮಿಸಿ ಇಡೀ ವಿಶ್ವವೇ ಮೆಚ್ಚುವಂತಹ ಸಂವಿಧಾನವನ್ನು ರಚಿಸಿ ವಿಶ್ವದಲ್ಲಿ ಭಾರತವು ತಲೆಎತ್ತಿ ನಿಲ್ಲುವಂತಹ ಗೌರವವನ್ನು ತಂದುಕೊಟ್ಟ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದರು.

ಜಿಲ್ಲಾ ಖಜಾಂಚಿ ರಾಮ ಜಿ. ಪಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಕಾರ್ಯಕರ್ತರಾದ ದೇವೇಂದ್ರ, ಸುನೀಲ್ ಹಾಗೂ ಇತರರು ಹಾಜರಿದ್ದರು. ಸಿದ್ದಾಪುರ: ಅಂಬೇಡ್ಕರ್ ತತ್ವ ಸಿದ್ದಾಂತಗಳು ಅನುಷ್ಠಾನಗೊಂಡಲ್ಲಿ ದೇಶ ಪ್ರಗತಿಯತ್ತ ಸಾಗಲು ಸಾಧ್ಯ ಎಂದು ಅಂಬೇಡ್ಕರ್ ಸೇನೆ ಕೊಡಗು ಜಿಲ್ಲಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಸತೀಶ್ ಟಿ. ಆರ್. ಕರೆ ನೀಡಿದರು.

ಕೊಡಗು ಜಿಲ್ಲಾ ಅಂಬೇಡ್ಕರ್ ಸೇನೆ ವತಿಯಿಂದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ .ಆರ್. ಅಂಬೇಡ್ಕರ್ ಅವರ ೧೩೨ನೇ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ತಮ್ಮ ಇಡೀ ಬದುಕನ್ನು ಬಡವರು ಹಾಗೂ ಶೋಷಿತರ ಪರವಾಗಿ ಹೋರಾಟಕ್ಕೆ ಮುಡಿಪಾಗಿಟ್ಟವರು. ಸಮಾಜದಲ್ಲಿ ಸಮಾನತೆ, ಅಸ್ಪೃಶ್ಯತೆ, ಹೋಗಲಾಡಿಸಿ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಸೃಷ್ಟಿಸಲು ಹಲವು ಕಾನೂನುಗಳನ್ನು ತಂದ ಮಹಾನ್ ಕ್ರಾಂತಿಕಾರಿ ಸಮಾಜ ಸುಧಾರಕರು ಎಂದರು. ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮಂಜು ಎಸ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಜಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಚಿನ್ನಮ್ಮ, ವೀರಾಜಪೇಟೆ ತಾಲೂಕು ಅಂಬೇಡ್ಕರ್ ಸೇನೆ ಉಪಾಧ್ಯಕ್ಷ ತಿಮ್ಮಣ್ಣ, ಜಿಲ್ಲಾ ಪ್ರಮುಖರಾದ ಭಾವ ಮಾಲ್ತಾರೆ, ಗಣೇಶ್ ಗದ್ದೆಮನೆ, ದೀಪು ಅಂಚುತಿಟ್ಟು, ವಿವಿಧ ಸಂಘಟನೆ ಗಳ ಮಹಿಳಾ ಪದಾಧಿಕಾರಿಗಳು ಹಾಜರಿದ್ದರು.

ಕಣಿವೆ : ನೊಂದವರು ಹಾಗೂ ದಮನಿತರ ಧ್ವನಿಯಾದ ಡಾ.ಅಂಬೇಡ್ಕರ್ ಅವರು ಯಾವುದೇ ಒಂದು ಸಮುದಾಯದ ಸ್ವತ್ತಲ್ಲ. ಇಡೀ ಮನುಕುಲದ ಸಮ ಸಮಾಜದ ಆಸ್ತಿ ಎಂದು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ. ಎಸ್. ಮೂರ್ತಿ ಹೇಳಿದರು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕೊಡಗು ಜಿಲ್ಲಾ ಸರ್ಕಾರಿ ನೌಕರರ ಸಮನ್ವಯ ಸಮಿತಿ ಹಾಗೂ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜಂಟಿಯಾಗಿ ಹಮ್ಮಿ ಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಗುಡಿ ಗೋಪುರಗಳಲ್ಲಿ ಕ್ಯೂ ನಿಲ್ಲುವ ಮಂದಿ ಗ್ರಂಥಾಲಯಗಳಲ್ಲಿ ಸಾಲು ಸಾಲಾಗಿ ನಿಂತು ಪುಸ್ತಕಗಳನ್ನು ಓದುವ ಮೂಲಕ ಈ ದೇಶ ಅಭಿವೃದ್ಧಿಯಾಗುತ್ತದೆ ಎಂದು ವಾದಿಸಿದ ಮಹಾತ್ಮ ಅವರು ಎಂದರು. ಎಸ್ಸಿ ಎಸ್ಟಿ ಸರ್ಕಾರಿ ನೌಕರರ ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ಮಹೇಂದ್ರಕುಮಾರ್ ಮಾತನಾಡಿ, ಆಧುನಿಕ ಭಾರತದ ನಿರ್ಮಾಪಕರಾದ ಕಣಿವೆ : ನೊಂದವರು ಹಾಗೂ ದಮನಿತರ ಧ್ವನಿಯಾದ ಡಾ.ಅಂಬೇಡ್ಕರ್ ಅವರು ಯಾವುದೇ ಒಂದು ಸಮುದಾಯದ ಸ್ವತ್ತಲ್ಲ. ಇಡೀ ಮನುಕುಲದ ಸಮ ಸಮಾಜದ ಆಸ್ತಿ ಎಂದು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ. ಎಸ್. ಮೂರ್ತಿ ಹೇಳಿದರು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕೊಡಗು ಜಿಲ್ಲಾ ಸರ್ಕಾರಿ ನೌಕರರ ಸಮನ್ವಯ ಸಮಿತಿ ಹಾಗೂ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜಂಟಿಯಾಗಿ ಹಮ್ಮಿ ಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಗುಡಿ ಗೋಪುರಗಳಲ್ಲಿ ಕ್ಯೂ ನಿಲ್ಲುವ ಮಂದಿ ಗ್ರಂಥಾಲಯಗಳಲ್ಲಿ ಸಾಲು ಸಾಲಾಗಿ ನಿಂತು ಪುಸ್ತಕಗಳನ್ನು ಓದುವ ಮೂಲಕ ಈ ದೇಶ ಅಭಿವೃದ್ಧಿಯಾಗುತ್ತದೆ ಎಂದು ವಾದಿಸಿದ ಮಹಾತ್ಮ ಅವರು ಎಂದರು. ಎಸ್ಸಿ ಎಸ್ಟಿ ಸರ್ಕಾರಿ ನೌಕರರ ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ಮಹೇಂದ್ರಕುಮಾರ್ ಮಾತನಾಡಿ, ಆಧುನಿಕ ಭಾರತದ ನಿರ್ಮಾಪಕರಾದ ಡಾ. ಅಂಬೇಡ್ಕರ್ ಜಾತಿ ಪದ್ಧತಿ, ಅಸ್ಪçಶ್ಯತೆ, ಬಡತನ ಮುಂತಾದ ಸಾಮಾಜಿಕ - ಆರ್ಥಿಕ ಸಮಸ್ಯೆಗಳನ್ನು ಅಧ್ಯಯನ ಮಾಡಿ ಸಮಸ್ಯೆಗಳ ನಿವಾರಣೆಯ ವಿಧಾನಗಳನ್ನು ರೂಪಿಸಿದ ಮಹಾಚೇತನ ಎಂದರು. ಅರಕಲಗೂಡು ತಾಲ್ಲೂಕು ಬಿದರೂರು ಸರ್ಕಾರಿ ಶಾಲೆಯ ಶಿಕ್ಷಕ ಜಿ. ಸುನಿಲ್ ಕುಮಾರ್ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಬದುಕು - ಬರಹಗಳ ಕುರಿತು ಉಪನ್ಯಾಸ ನೀಡಿದರು.

ಹಾಸ್ಟೆಲ್ ಮೇಲ್ವಿಚಾರಕ ಮಧು ಹತ್ತನೇ ತರಗತಿ ನಂತರ ಮುಂದೇನು ಎಂಬ ವಿಚಾರಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ನಿವೃತ್ತ ಪ್ರಾಂಶುಪಾಲ ಬೆಳ್ಳಿಯಪ್ಪ, ಆಲೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್, ನೌಕರರ ಸಮನ್ವಯ ಸಮಿತಿ ಕಾರ್ಯದರ್ಶಿಯೂ ಆದ ಶಿಕ್ಷಕ ಮಂಜುನಾಥ್, ಸಮಿತಿಯ ಪದಾಧಿಕಾರಿಗಳಾದ ಸತೀಶ್, ಲೋಕೇಶ್, ನಟರಾಜು, ಪತ್ರಕರ್ತ ಸತೀಶ್ ಮೊದಲಾದವ ರಿದ್ದರು. ಇದೇ ಸಂದರ್ಭ ನೌಕರರ ಸಮನ್ವಯ ಸಮಿತಿ ವತಿಯಿಂದ ಹೊರತಂದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ಮಡಿಕೇರಿ :ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ "ಕರ್ನಾಟಕ ದಲಿತ ಸಂಘರ್ಷ ಸಮಿತಿ" ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಜಿಲ್ಲೆಯ ಆಯಾಯ ತಾಲೂಕುಗಳಲ್ಲಿ ಸಂಘಟನೆಯ ಪ್ರಮುಖರು ತಮ್ಮ ತಮ್ಮ ನಿವಾಸದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಗೌರವ ಸಮರ್ಪಿಸಿದರು.

ಸಂಘಟನೆಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಂಸಿಹ ಅವರ ವೀರಾಜಪೇಟೆಯ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಗಾಯತ್ರಿ ನರಂಸಿಹ ಡಾ.ಅಂಬೇಡ್ಕರ್ ಅವರ ತತ್ವ, ಆದರ್ಶ, ಚಿಂತನೆಗಳು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿಯಾಗಿ ನಿಂತಿದೆ. ಸಂವಿಧಾನದ ಮೂಲ ಉದ್ದೇಶವನ್ನು ಇಂದಿನ ಯುವಕರು, ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಳ್ಳು ವಂತೆ ಕರೆ ನೀಡಿದರು.

ವೀರಾಜಪೇಟೆ ತಾಲೂಕಿನ ಸಂಘಟನೆ ಪ್ರಮುಖರಾದ ಜೇಮ್ಸ್, ಮನು, ರಘು, ಮಂಜು, ಮಂಜುಳಾ, ಕುಳಿಯ, ಬೋಜ, ಅಯ್ಯಪ್ಪ, ಸವಿತ ಕೊಡ್ಲಿಪೇಟೆ ಪವಿತ್ರ ಮತ್ತು ಇತರರು, ಸೋಮವಾರಪೇಟೆಯಲ್ಲಿ ಮನೋಜ್, ಶ್ರೀನಿವಾಸ್, ಕೃಷ್ಣ ಇತರರು, ಮಡಿಕೇರಿಯಲ್ಲಿ ಶಶಿಕಲಾ, ಭಾಗ್ಯವತಿ, ಗೌರಮ್ಮ ಹಾಗೂ ಪೊನ್ನಂಪೇಟೆಯಲ್ಲಿ ಮುತ್ತಮ್ಮ, ರಾಜೇಶ್ವರಿ, ರಾಜಪ್ಪ ಹಾಗೂ ಇತರರು ಹಾಜರಿದ್ದರು.