ಮಡಿಕೇರಿ, ಏ. ೧೭: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೨ನೇ ಜಯಂತಿಯನ್ನು ಜಿಲ್ಲೆಯ ವಿವಿಧೆಡೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶ್ರಮದಾನ, ಪ್ರತಿಜ್ಞಾ ವಿಧಿ ಸ್ವೀಕಾರ, ಸಂವಿಧಾನ ಆಶಯವನ್ನು ತಿಳಿಸುವ ಮೂಲಕ ಅಂಬೇಡ್ಕರ್ ಅವರನ್ನು ಹಾಗೂ ಅವರ ಆದರ್ಶವನ್ನು ಸ್ಮರಿಸಲಾಯಿತು.

ಮಡಿಕೇರಿ : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಜೀವನದ ಉದ್ದಕ್ಕೂ ಹೋರಾಟವನ್ನೇ ಕಂಡಿರುವ ಮಹಾಚೇತನ. ಅವರನ್ನು ಒಂದು ವರ್ಗಕ್ಕೆ ಸಿಮೀತಗೊಳಿಸದೇ ಅವರ ಆದರ್ಶ ಗುಣಗಳನ್ನು ಬೆಳೆಸಿಕೊಳ್ಳುವಂತಾಗಬೇಕು ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ತಿಳಿಸಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೨ನೇ ಜನ್ಮ ಜಯಂತಿ ಪ್ರಯುಕ್ತ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮೂರು ಮಂತ್ರಗಳನ್ನು ದೇಶಕ್ಕೆ ನೀಡಿದ್ದಾರೆ. ತುಳಿತಕ್ಕೆ ಒಳಗಾದವರಿಗೆ, ಅಸ್ಪೃಷ್ಯರಿಗೆ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯವನ್ನು ನೀಡುವ ಕೆಲಸ ಮಾಡಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಹೋರಾಟ ನಡೆಸಿದ್ದಾರೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಪ್ರಜಾಪ್ರಭುತ್ವದ ಪ್ರಮುಖ ಅಂಶಗಳಾದ ಸಮಾನತೆ, ಸಾಮಾಜಿಕ ನ್ಯಾಯದಂತಹ ಮಾನವೀಯ ಮೌಲ್ಯಗಳನ್ನು ಎಲ್ಲರಿಗೂ ದೊರಕಿಸಿಕೊಡುವಲ್ಲಿ ಅಂಬೇಡ್ಕರ್ ಅವರ ಪಾತ್ರ ಪ್ರಮುಖ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಈ ದೇಶಕ್ಕೆ ನೀಡಿದ ಸಂವಿಧಾನ ಇಡೀ ದೇಶ ಮೆಚ್ಚುವಂತದ್ದು, ಅವರ ಹೋರಾಟದ ಫಲವಾಗಿ ಇಂದು ದೇಶಾದ್ಯಂತ ಕೋಟ್ಯಂತರ ಜನರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ ಎಂದರು.

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ ಮಾತನಾಡಿದರು. ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ಮಾತನಾಡಿ, ಮಹಿಳೆಯರಿಗೆ ಕಾನೂನಾತ್ಮಕ ಗೌರವ ನೀಡುವ ಮೂಲಕ ಮಹಿಳಾ ಸ್ವಾತಂತ್ರ÷್ಯವನ್ನು ಪ್ರತಿಪಾದಿಸಿದರು. ಮಹಿಳಾ ಸ್ವಾತಂತ್ರ÷್ಯ ಮತ್ತು ಮಹಿಳಾ ಸಾಕ್ಷರತೆಯ ಮಹತ್ವ ಒತ್ತಿ ಹೇಳಿದರು. ಮಹಿಳೆಯರಿಗೆ ಪುರುಷರ ಸಮಾನದ ಹಕ್ಕನ್ನು ಕಾನೂನಾತ್ಮಕ ನೆಲೆಯಲ್ಲಿ ಒದಗಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು. ರಾಜೀವ್ ಗಾಂಧಿ ಪಂಚಯತ್‌ರಾಜ್ ಸಂಘಟನೆಯ ಸಂಯೋಜಕ ತೆನ್ನಿರಾ ಮೈನಾ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಡಿಕೇರಿ ನಗರಾಧ್ಯಕ್ಷ ರಾಜೇಶ್ ಯಲ್ಲಪ್ಪ, ಕಾಂಗ್ರೆಸ್ ಎಸ್.ಸಿ. ಘಟಕದ ಉಪಾಧ್ಯಕ್ಷ ಆರ್.ಪಿ. ಚಂದ್ರಶೇಖರ್, ಮಡಿಕೇರಿ ಬ್ಲಾಕ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಬಿ.ಎನ್. ಮುದ್ದುರಾಜು, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು, ಡಿಸಿಸಿ ಸದಸ್ಯರಾದ ಪುಷ್ಪ ಪೂಣಚ್ಚ, ವೆಂಕಟೇಶ್, ಖಲೀಲ್ ಭಾಷ, ನವೀನ್ ಕುಶಾಲಪ್ಪ, ಮುದ್ದಯ್ಯ ತೋರೆರ, ವಿ.ಪಿ. ಸುರೇಶ್, ಫ್ಯಾನ್ಸಿ ಬೆಳ್ಯಪ್ಪ, ಪ್ರೇಮ ಕೃಷ್ಣಪ್ಪ, ಜುಲೇಕಾಬಿ, ಪ್ರೇಮ ಲಿಂಗಪ್ಪ, ಸದಾಮುದ್ದಪ್ಪ, ಪ್ರಕಾಶ್ ಆಚಾರ್ಯ, ಕಾನೆಹಿತ್ಲು ಮೊಣ್ಣಪ್ಪ, ಮಿನಾಜ್ ಪ್ರವೀಣ್, ದಿವ್ಯ ಸ್ವರ್ಣಲತಾ ಸೇರಿದಂತೆ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ಹಾಜರಿದ್ದರು. ಮಡಿಕೇರಿ ಎಸ್.ಸಿ.ಘಟಕದ ನಗರಾಧ್ಯಕ್ಷೆ ಹೆಚ್.ಪಿ. ಪೂರ್ಣಿಮಾ ಸ್ವಾಗತಿಸಿದರು, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಗಿರೀಶ್ ಸರ್ವರನ್ನು ವಂದಿಸಿದರು. ಮಡಿಕೇರಿ: ಇಂದಿನ ಯುವಸಮೂಹ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ನಾಯಕತ್ವ ಗುಣವನ್ನು ರೂಢಿಸಿಕೊಂಡರೆ, ಸಂವಿಧಾನದ ಹಿತಾಸಕ್ತಿಯಂತೆ ಸಮಾನ, ಸಹೋದರತ್ವ, ಸಾಮರಸ್ಯದಿಂದ ಕೂಡಿದ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಮಹದೇವಯ್ಯ ಅಭಿಪ್ರಾಯಪಟ್ಟರು.

ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಭಾರತ ರತ್ನಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೨ನೇ ಜಯಂತಿಯಲ್ಲಿ ಮುಖ್ಯಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಅವರು, ಭಾರತೀಯ ಸಂವಿಧಾನ ರಚನೆಯಲ್ಲಿ ಅಂಬೇಡ್ಕ ಅವರ ಮಹಾನ್ ಕೊಡುಗೆಯನ್ನು ವಿವರಿಸಿ, ಅಂಬೇಡ್ಕರ್‌ರಿಗೆ ಅಷ್ಟೊಂದು ಅರ್ಹತೆಯಿದ್ದರೂ ಅವರಿಗೆ ಉನ್ನತ ಜವಾಬ್ದಾರಿಯನ್ನು ಒದಗಿಸಲು ಸತಾಯಿಸಿದ ಮನಸ್ಥಿತಿಗಳ ನಡುವೆಯೂ ಅವರು ಜನಸಾಮಾನ್ಯರ ಒಳಿತಿಗಾಗಿ ಕಠಿಣ ಪರಿಶ್ರಮದಿಂದ ಈ ದೇಶದ ಉಜ್ವಲ ಭವಿಷ್ಯಕ್ಕಾಗಿ ಅಡಿಪಾಯ ಹಾಕಿಕೊಟ್ಟಿದ್ದಾರೆ ಎಂದರು.

ಅAಬೇಡ್ಕರ್ ಅವರ ಜೀವನ, ಸಾಧನೆಯ ಕುರಿತು ವಿಶ್ವದಾದ್ಯಂತ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಗಳು ನಡೆಯುತ್ತಿದ್ದು, ಭಾರತೀಯರಿಗಿಂತ ವಿದೇಶಿಯರು ಅಂಬೇಡ್ಕರ್ ಅವರ ಕುರಿತು ಹ್ಚೆಚ್ಚು ತಿಳಿದುಕೊಳ್ಳುತ್ತಿದ್ದಾರೆ ಎಂದರು.

ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆಯ ನಾಯಕ ಪ್ರತೀಕ್. ಪಿ.ಟಿ, ಡಾ. ಅಂಬೇಡ್ಕರ್ ಅವರು ಬಾಲ್ಯದಿಂದ ಶೋಷಣೆಯನ್ನು ಅನುಭವಿಸಿ ಕಠಿಣ ಜೀವನವನ್ನು ಎದುರಿಸಿ ಸರ್ವರ ಒಳಿತಿಗಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡಿ ಇಂದು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ. ರಾಘವ. ಬಿ, ಶಾಂತಿಯುತ ಹೋರಾಟದಿಂದ ಕಾನೂನಾತ್ಮಕ ಸುಧಾರಣೆಗಳಿಂದ ಪ್ರಜಾಪ್ರಭುತ್ವದ ಯಶಸ್ಸಿಗೆ ಅಡಿಪಾಯ ಹಾಕಿಕೊಟ್ಟ ಕೀರ್ತಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು. ಹಿಂದಿ ವಿಭಾಗದ ಮುಖ್ಯಸ್ಥರಾದ ತಳವಾರ ಮಾತನಾಡಿದರು.

ಸಮಾಜಶಾಸ್ತç ವಿಭಾಗದ ಮುಖ್ಯಸ್ಥರು ಹಾಗೂ ರಾಷ್ಟಿçÃಯ ಸೇವಾ ಯೋಜನೆಯ ಸಂಯೋಜಕರಾದ ಡಾ. ಗಾಯಿತ್ರಿ, ಗಣಿತ ವಿಭಾಗದ ಮುಖ್ಯಸ್ಥರು ಹಾಗೂ ಐಕ್ಯುಎಸಿ ಮುಖ್ಯಸ್ಥ ಡಾ. ರಾಜೇಂದ್ರ, ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಇಸಿಸಿಸಿ ಸಂಯೋಜಕರಾದ ಡಾ. ರೇಣುಶ್ರಿ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪೊನ್ನಂಪೇಟೆ: ಮಹಿಳಾ ಮೀಸಲಾತಿ, ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕು, ವಿಧವಾ ವಿವಾಹ ಮೊದಲಾದವುಗಳನ್ನು ಸಂವಿಧಾನಾತ್ಮಕಗೊಳಿಸುವ ಮೂಲಕ ಮಹಿಳೆಯರ ಬಾಳಿಗೆ ಆಶಾಕಿರಣವಾದ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಇಡೀ ಮಹಿಳಾ ಸಮುದಾಯ ಋಣಿಯಾಗಿರಬೇಕು ಎಂದು ನಿವೃತ್ತ ಪ್ರಾಂಶುಪಾಲ ಹಿರಿಯ ಸಾಹಿತಿ ಡಾ.ಜೆ. ಸೋಮಣ್ಣ ಹೇಳಿದರು.

ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ನಡೆದ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಜಯಂತಿಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಮೊದಲ ಕಾನೂನು ಸಚಿವರಾಗಿದ್ದ ಡಾ.ಅಂಬೇಡ್ಕರ್ ಅವರು ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ದರು. ಆದರೆ ಅದು ತಿರಸ್ಕೃತಗೊಂಡಾಗ ಅದರಿಂದ ನೊಂದು ಸಚಿವ ಪದವಿಗೆ ರಾಜಿನಾಮೆ ನೀಡಿದರು ಎಂದು ಸ್ಮರಿಸಿದರಲ್ಲದೆ ಅಂಬೇಡ್ಕರ್ ಅವರು ಮಹಿಳೆ ಮತ್ತು ಪುರುಷರ ನಡುವೆ ಸಮಾನ ವೇತನ ಇರಬೇಕು ಎಂದು ಪ್ರತಿಪಾದಿಸಿದ ಮಹಾನ್ ಮಹಿಳಾವಾದಿಯಾಗಿದ್ದರು ಎಂದು ನುಡಿದರು.

ಕಾಲೇಜಿನ ವಿದ್ಯಾರ್ಥಿ ಸಂಪತ್ ಮಾತನಾಡಿ, ಅಸಾಮಾನ್ಯ ವ್ಯಕ್ತಿತ್ವದ ಡಾ.ಅಂಬೇಡ್ಕರ್ ಅವರು ಯಾವುದೇ ಭ್ರಮೆಯಲ್ಲಿ ಬದುಕಲಿಲ್ಲ. ಅವರೊಬ್ಬ ವಾಸ್ತವವಾಧಿಯಾಗಿದ್ದರು. ಶೋಷಿತರ ಬದುಕಿನ ಬವಣೆ ನೀಗಿಸಿ ಸಮಾನತೆಯ ಸಮಾಜವನ್ನು ನಿರ್ಮಿಸಲು ಶ್ರಮಿಸಿದರು. ಶಿಕ್ಷಣದ ಮೂಲಕ ಅರಿವು ಪಡೆದುಕೊಂಡು ಛಲದಿಂದ ಬದುಕು ಸಾಗಿಸಬೇಕು ಎಂಬುದು ಅವರ ಆಶಯವಾಗಿತ್ತು. ಇದನ್ನು ಸಾಕಾರಗೊಳಿಸಲು ಬದುಕಿನುದ್ದಕ್ಕೂ ಹೋರಾಡಿದರು ಎಂದು ಹೇಳಿದರು.

ಮತ್ತೊಬ್ಬ ವಿದ್ಯಾರ್ಥಿ ಹರ್ಷಿತ್ ಮಾತನಾಡಿ, ಶೋಷಿತ ಜನಾಂಗದವರು ರಾಜಕೀಯ ಅಧಿಕಾರ ಪಡೆದಾಗ ಮಾತ್ರ ತಮ್ಮ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳಲು ಸಾಧ್ಯ. ಹೀಗಾಗಿ ರಾಜಕೀಯಕ್ಕೆ ಯೋಗ್ಯರು ಬರಬೇಕು. ವಿಧಾನಸೌಧದಲ್ಲಿ ಪ್ರಾಮಾಣಿಕರು, ಯೋಗ್ಯರು ಕೂರಬೇಕು ಎಂಬುದನ್ನು ವಿಧಾನಸೌಧದ ಮುಂದೆ ಇರುವ ಅಂಬೇಡ್ಕರ್ ಪ್ರತಿಮೆಯಲ್ಲಿನ ಕೈ ಬೆರಳು ಸೂಚ್ಯವಾಗಿ ತೋರಿಸುವಂತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಸಿ.ಜಿ. ಕುಶಾಲಪ್ಪ ಮಾತನಾಡಿ, ಸತತ ಓದಿನ ಮೂಲಕ ಬದುಕಿನ ಹೆದ್ದಾರಿ ಕಂಡುಕೊAಡ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಹೋರಾಟದ ಮೂಲಕ ಸ್ವಾಭಿಮಾನದ ಬದುಕು ಸಾಗಿಸಿದ ಬಾಬು ಜಗಜೀವನ್‌ರಾಮ್ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಾಬು ಜಗಜೀವನ್‌ರಾಮ್ ಜಯಂತಿ ಕುರಿತು ಕಾಲೇಜಿನ ವಿದ್ಯಾರ್ಥಿನಿ ನವಿತಾ ಮಾತನಾಡಿದರು. ಪ್ರಾಧ್ಯಾಪಕರಾದ ಪ್ರೊ. ಜಡೇಗೌಡ, ಪ್ರೊ. ದೇವಗಿರಿ, ಡಾ. ಕೆಂಚರೆಡ್ಡಿ, ಡಾ.ರಾಮಕೃಷ್ಣ ಹೆಗಡೆ, ಡಾ. ಹೊಸಗೌಡರ್ ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.ನಿಟ್ಟೂರು-ಕಾರ್ಮಾಡುವಿನಲ್ಲಿ

ಪೊನ್ನಂಪೇಟೆ: ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ಪೊನ್ನಂಪೇಟೆ ತಾಲೂಕಿನ ನಿಟ್ಟೂರು ಕಾರ್ಮಾಡು ಗ್ರಾಮ ವ್ಯಾಪ್ತಿಯ ದಾಳಿಂಬೆ ಕಾಲೋನಿಯಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ೧೩೨ ನೇ ಜಯಂತಿಯನ್ನು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭ ದ.ಸಂ.ಸ. ರಾಜ್ಯ ಸಮಿತಿ ಸದಸ್ಯ ಟಿ.ಎನ್.ಗೋವಿಂದಪ್ಪ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಅಂಬೇಡ್ಕರ್ ಅವರು ಮಹಾನ್ ಮಾನವತಾವಾದಿ, ಶೋಷಿತ ವರ್ಗದವರ ಆಶಾಕಿರಣ. ಮಹಿಳೆಯರ ಪಾಲಿಗೆ ಸಮಾನತೆಯ ನಂದಾದೀಪವಾಗಿದ್ದಾರೆ. ಸೂರ್ಯ ಭೂಮಿಗೆ ಎಷ್ಟು ಮುಖ್ಯವೋ, ಅದೇ ರೀತಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತಕ್ಕೆ ಅಷ್ಟೇ ಮುಖ್ಯ. ಅಂಬೇಡ್ಕರ್ ವ್ಯಕ್ತಿಯಷ್ಟೇ ಅಲ್ಲ, ಮಹಾನ್ ಶಕ್ತಿ. ಶ್ರೇಷ್ಠ ವ್ಯಕ್ತಿಯಾಗಿರುವುದರಿಂದಲೇ ವಿಶ್ವಸಂಸ್ಥೆಯ ವತಿಯಿಂದಲೂ ಅವರ ಜನ್ಮದಿನ ಆಚರಿಸಲಾಗುತ್ತದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಅಂಬೇಡ್ಕರ್‌ರವರು ಕಾನೂನು ರೂಪದಲ್ಲಿ ನಮಗೆ ಸಂವಿಧಾನವನ್ನು ನೀಡಿ ಅಸಮಾನತೆಯನ್ನು ಹೋಗಲಾಡಿಸಿದ್ದಾರೆ ಎಂದರು.

ದ.ಸA.ಸ ಕೊಡಗು ಜಿಲ್ಲಾ ಸಂಚಾಲಕ ಪರಶುರಾಮ್ ಮಾತನಾಡಿ, ಅಂಬೇಡ್ಕರ್‌ರವರು ಶೋಷಿತರ ಪಾಲಿನ ಆಶಾಕಿರಣವಾಗಿದ್ದು, ದೇಶದಲ್ಲಿ ಅತ್ಯಂತ ಉನ್ನತ ಶಿಕ್ಷಣವನ್ನು ಪಡೆದ ಮಹಾನ್ ವ್ಯಕ್ತಿ. ಪ್ರತಿಯೊಬ್ಬರೂ ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ಉತ್ತಮ ಬದುಕು ಕಟ್ಟಿಕೊಳ್ಳುವಂತಾಗಬೇಕು, ಶಿಕ್ಷಣ ಒಂದೇ ಅಸಮಾನತೆಯನ್ನು ಹೋಗಲಾಡಿಸಲು ಇರುವ ಮಾರ್ಗ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಸಂ.ಸ. ನಿಟ್ಟೂರು ಕಾರ್ಮಾಡು ಗ್ರಾಮ ಸಂಚಾಲಕ ಜೆ.ಕೆ.ವಿಜಯ ಮಾತನಾಡಿದರು.

ಜಾನಪದ ಕಲಾವಿದ ಎಸ್.ಟಿ. ಗಿರೀಶ್ ಹಾಗೂ ಗೋವಿಂದಪ್ಪ ಕ್ರಾಂತಿಗೀತೆಗಳನ್ನು ಹಾಡಿದರು. ಈ ಸಂದರ್ಭ ದ.ಸಂ.ಸ. ಸಂಘಟನಾ ಸಂಚಾಲಕ ಸಿಂಗಿ ಸತೀಶ್, ಹೆಚ್.ಎನ್. ಮಹಾದೇವ್, ದ.ಸಂ.ಸ.ಮಹಿಳಾ ಸಂಚಾಲಕಿ ಲಕ್ಷಿö್ಮ, ವೀರಾಜಪೇಟೆ ತಾಲೂಕು ದ.ಸಂ.ಸ.ಸAಚಾಲಕ ಕುಮಾರ್, ಸಮಿತಿಯ ಪ್ರಮುಖರಾದ ಹೆಚ್.ಬಿ. ಮುರುಗ, ವಿ.ಟಿ.ಜಯ, ವಿಜಯಕುಮಾರ್, ಷಣ್ಮುಗ, ರವಿ, ಸತೀಶ್, ಎಸ್.ಟಿ. ಗಿರೀಶ್ ಇನ್ನಿತರರು ಇದ್ದರು. ದ.ಸಂ.ಸ.ಸAಘಟನಾ ಸಂಚಾಲಕ ಸಿಂಗಿ ಸತೀಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಪೊನ್ನಂಪೇಟೆ ತಾಲೂಕು ಕಚೇರಿ ಪೊನ್ನಂಪೇಟೆ ತಾಲೂಕು ಕಚೇರಿ

ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕು ಕಛೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಲಾಯಿತು. ತಹಶೀಲ್ದಾರ್ ಪ್ರಶಾಂತ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ವಿಶ್ವಕ್ಕೆ ಮಾದರಿಯಾದ ವಿಶಿಷ್ಟ ಸಂವಿಧಾನವನ್ನು ದೇಶಕ್ಕೆ ನೀಡಿದ ಮಹಾನ್ ಚೇತನ ಅಂಬೇಡ್ಕರ್ ರವರು. ತುಳಿತಕ್ಕೆ ಒಳಗಾದ ಜನಾಂಗದ ಉದ್ಧಾರಕ್ಕಾಗಿ ಸಂವಿಧಾನದ ಮೂಲಕ ಕೊಡುಗೆ ನೀಡಿದ್ದಾರೆ. ವಿವಿಧ ಜಾತಿ, ಧರ್ಮ, ವೈವಿಧ್ಯತೆಯ ಭೌಗೋಳಿಕ ಪರಿಸ್ಥಿತಿ ಹೊಂದಿದ್ದರೂ ನಮ್ಮ ದೇಶ ಒಗ್ಗಟ್ಟಿನಿಂದಿರುವುದಕ್ಕೆ ಸಂವಿಧಾನ ಮುಖ್ಯ ಕಾರಣ. ಅಂತಹ ಶ್ರೇಷ್ಠ ಸಂವಿಧಾನದ ಮೌಲ್ಯಗಳನ್ನು ಕಾಪಾಡಿಕೊಂಡು ಅಂಬೇಡ್ಕರರ ಚಿಂತನೆಯ ಬೆಳಕಿನಲ್ಲಿ ನಾವು ಸಾಗಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ರವಿಕುಮಾರ್, ಶಿರಸ್ತೇದಾರ್ ಜನಾರ್ಧನ್, ಆರ್.ಐ ಗಳು, ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು, ಹಾಗೂ ತಾಲೂಕು ಕಛೇರಿ ಸಿಬ್ಬಂದಿಗಳು ಇದ್ದರು.

ದೊಡ್ಡಕುಂದದಲ್ಲಿ

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ದೊಡ್ಡಕುಂದ ಗ್ರಾಮದಲ್ಲಿ ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ೧೩೨ ನೇ ಜನ್ಮ ದಿನಾಚರಣೆಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಗ್ರಾಮ ಮುಖಂಡರು ಅಂಬೇಡ್ಕರ್ ಅವರ ಜೀವನ ಚರಿತ್ರೆ, ವ್ಯಕ್ತಿತ್ವ ಹಾಗೂ ದಿನದ ಮಹತ್ವ ಕುರಿತು ಮಾತನಾಡಿದರು.

ಪ್ರಮುಖರಾದ ಜವರೇಗೌಡ, ಡಿ.ಆರ್. ವೇದಕುಮಾರ್, ಪಾವನಾ, ಗಗನ್ ರೈ, ಯೋಗೇಂದ್ರ, ಪ್ರಶಾಂತ್, ಜೆ.ಎಲ್.ಜನಾರ್ಧನ್, ಯೋಗಾನಂದ್, ಆರ್.ವಿ. ದರ್ಶನ್, ಆರ್.ಆರ್. ಪವನ್, ಜಯಂತ್, ಜೆ.ಕೆ. ಅಕ್ಷಯ್, ಡಿ.ಆರ್. ಲೋಕೇಶ್, ಡಿ.ಕೆ. ದರ್ಶನ್ ಉಪಸ್ಥಿತರಿದ್ದರು. ವೇದಕುಮಾರ್ ಸ್ವಾಗತಿಸಿ, ಪ್ರಶಾಂತ್ ವಂದಿಸಿದರು.

ಹೆಬ್ಬಾಲೆ ಪ್ರಾಥಮಿಕ ಶಾಲೆ

ಹೆಬ್ಬಾಲೆ: ಇಲ್ಲಿಗೆ ಸಮೀಪದ ಹೆಬ್ಬಾಲೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ೧೩೨ ನೇ ಜನ್ಮ ದಿನಾಚರಣೆಯನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತ್ತು.

ಶಾಲೆಯ ಹಿರಿಯ ಶಿಕ್ಷಕರುಗಳಾದ ಜಾನಕಿ ಸಿ.ಎಸ್. ಮತ್ತು ಹೆಚ್.ಈ. ರಮೇಶ್ ಆಂಬೇಡ್ಕರ್ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಮಾತನಾಡಿದರು. ಇದೇ ಸಂದರ್ಭ ೭ ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಲಾವಣ್ಯ ಹೆಚ್.ಎಂ. ಮತ್ತು ಮನೋಜ್ ಹೆಚ್.ಎಂ. ಅವರಿಗೆ ರಾಜಶೇಖರ್ ಜ್ಞಾಪಕಾರ್ಥ ದತ್ತಿ ನಿಧಿ ವಿತರಿಸಲಾಯಿತು.

ಶಿಕ್ಷಕಿ ಪುಪ್ಪಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು.. ಮುಖ್ಯ ಶಿಕ್ಷಕ ಹೆಚ್.ಎಂ. ವೆಂಕಟೇಶ ಸ್ವಾಗತಿಸಿ, ಜಾನಕಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಹಶಿಕ್ಷಕಿ ಸಿ.ಎಂ. ಬಬಿತಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಹೆಚ್.ಪಿ. ಮಂಜುನಾಥ್, ದಾನಿಗಳಾದ ಕುಮಾರ್, ಗ್ರಾಮಸ್ಥರು, ಶಾಲಾ ಶಿಕ್ಷಕ ವರ್ಗ ಹಾಗೂ ಮಕ್ಕಳು ಹಾಜರಿದ್ದರು.

ಸೋಮವಾರಪೇಟೆಯಲ್ಲಿ

ಸೋಮವಾರಪೇಟೆ: ತಾಲೂಕು ಅಂಬೇಡ್ಕರ್ ಯುವಸೇನೆ ಹಾಗೂ ಬೆಟ್ಟದಳ್ಳಿ ಸಿದ್ದಾರ್ಥನಗರದ ಗ್ರಾಮಾಭಿವೃದ್ಧಿ ಸಮಿತಿ ಮತ್ತು ಮಾನವತಾ ಯುವಕ ಸಂಘದ ವತಿಯಿಂದ ಪಟ್ಟಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೨ನೇ ಜಯಂತಿಯನ್ನು ವಿಜೃಂಭಣೆಯಿAದ ಆಚರಿಸಲಾಯಿತು.

ಪಟ್ಟಣದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಒಳಗೊಂಡ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು. ಅಭಿಮಾನಿಗಳು ಮೆರವಣಿಗೆಯಲ್ಲಿ ಸಾಗಿ, ಪುಟ್ಟಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಭ್ರಮದಿAದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಂತರ ಬಾಣಾವರ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭ ಪ್ರಮುಖರಾದ ಮಂಜುನಾಥ್, ಬಿ.ಇ. ಜಯೇಂದ್ರ, ಪ್ರವೀಣ್, ಮನೋಜ್, ರಾಮಚಂದ್ರ, ಎಂ.ಪಿ. ಹೊನ್ನಪ್ಪ, ಆನಂದ್, ರಾಜು, ರವಿ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.

ವೀರಾಜಪೇಟೆ ತಾಲೂಕು ಆಡಳಿತ

ವೀರಾಜಪೇಟೆ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರು ವಿಶ್ವಜ್ಞಾನಿಯಾಗಿ ಭಾರತದ ಸಂವಿಧಾನದಲ್ಲಿ ಜನರಿಗೆ ಬೇಕಾಗಿರುವÀ ಕಾಯಿದೆಯನ್ನು ರಚಿಸಿ ಮಾನವ ಕುಲಕ್ಕೆ ಸಮಾನತೆಯನ್ನು ತೋರಿಸಿಕೊಟ್ಟಂತಹ ಶ್ರೇಷ್ಠ ವ್ಯಕ್ತಿ ಅವರು ಹಾಕಿಕೊಟ್ಟಂತ ಮಾರ್ಗದಲ್ಲಿ ನಾವುಗಳು ನಡೆಯಬೇಕಾಗಿದೆ ಎಂದು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಹೆಚ್.ಎನ್. ರಾಮಚಂದ್ರ ಹೇಳಿದರು.

ವೀರಾಜಪೇಟೆ ತಾಲೂಕು ಆಡಳಿತ, ರಾಷ್ಟಿçÃಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರ ೧೩೨ನೇ ಜಯಂತಿ ಅಂಗವಾಗಿ ಸರಳ ರೀತಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸಿ ಪುಷ್ಪನಮನ ಸಲ್ಲಿಸಿದ ತಹಶೀಲ್ದಾರ್ ರಾಮಚಂದ್ರ ಅವರು ಮಾತನಾಡಿ, ಅಂಬೇಡ್ಕರ್‌ರವರು ಬರೆದಂತ ಸಂವಿಧಾನದ ಮೌಲ್ಯಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರೀತಿ ಚಿಕ್ಕಮಾದಯ್ಯ ಅವರು ಮಾತನಾಡಿ ಡಾ, ಬಿ.ಆರ್. ಅಂಬೇಡ್ಕರ್‌ರವರು ಒಂದೇ ಜನಾಂಗಕ್ಕೆ ಸೀಮಿತವಾಗದೇ ಎಲ್ಲಾ ಸಮುದಾಯಗಳ ಏಳಿಗೆಗಾಗಿ ರಚಿಸಿದ ಸಂವಿಧಾನದ ಮೌಲ್ಯವನ್ನು ಪಾಲಿಸುವ ಮೂಲಕ ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಹೆಚ್.ಬಿ. ಪ್ರದೀಪ್ ಕುಮಾರ್, ಶಿರಸ್ತೇದಾರ್‌ಗಳಾದ ಹೆಚ್.ಕೆ. ಪೊನ್ನು, ಪುರುಷೋತ್ತಮ, ಕಂದಾಯ ಪರಿವೀಕ್ಷಕರಾದ ಎಂ.ಎಲ್. ಹರೀಶ್ ಹಾಗೂ ತಾಲೂಕು ಕಚೇರಿ, ಕಂದಾಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.ಹೆಬ್ಬಾಲೆ ಪ್ರಾಥಮಿಕ ಶಾಲೆ

ಹೆಬ್ಬಾಲೆ: ಇಲ್ಲಿಗೆ ಸಮೀಪದ ಹೆಬ್ಬಾಲೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ೧೩೨ ನೇ ಜನ್ಮ ದಿನಾಚರಣೆಯನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತ್ತು.

ಶಾಲೆಯ ಹಿರಿಯ ಶಿಕ್ಷಕರುಗಳಾದ ಜಾನಕಿ ಸಿ.ಎಸ್. ಮತ್ತು ಹೆಚ್.ಈ. ರಮೇಶ್ ಆಂಬೇಡ್ಕರ್ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಮಾತನಾಡಿದರು. ಇದೇ ಸಂದರ್ಭ ೭ ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಲಾವಣ್ಯ ಹೆಚ್.ಎಂ. ಮತ್ತು ಮನೋಜ್ ಹೆಚ್.ಎಂ. ಅವರಿಗೆ ರಾಜಶೇಖರ್ ಜ್ಞಾಪಕಾರ್ಥ ದತ್ತಿ ನಿಧಿ ವಿತರಿಸಲಾಯಿತು.

ಶಿಕ್ಷಕಿ ಪುಪ್ಪಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು.. ಮುಖ್ಯ ಶಿಕ್ಷಕ ಹೆಚ್.ಎಂ. ವೆಂಕಟೇಶ ಸ್ವಾಗತಿಸಿ, ಜಾನಕಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಹಶಿಕ್ಷಕಿ ಸಿ.ಎಂ. ಬಬಿತಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಹೆಚ್.ಪಿ. ಮಂಜುನಾಥ್, ದಾನಿಗಳಾದ ಕುಮಾರ್, ಗ್ರಾಮಸ್ಥರು, ಶಾಲಾ ಶಿಕ್ಷಕ ವರ್ಗ ಹಾಗೂ ಮಕ್ಕಳು ಹಾಜರಿದ್ದರು.

ಆಲೂರು ಸಿದ್ದಾಪುರದಲ್ಲಿಮುಳ್ಳೂರು: ಸಮೀಪದ ಆಲೂರುಸಿದ್ದಾಪರದಲ್ಲಿ ಅಂಬೇಡ್ಕರ್ ಅವರ ಜನ್ಮ ದಿನವನ್ನು ಸರಳವಾಗಿ ಆಚರಿಸಲಾಯಿತು. ಆಲೂರುಸಿದ್ದಾಪುರ ಸರಕಾರಿ ಪ್ರೌಢಶಾಲೆಯಲ�