ಮಡಿಕೇರಿ, ಏ. ೧೬: ರಾಜ್ಯ ವಿಧಾನಸಭಾ ಚುನಾವಣೆಯ ಸಮಯ ಸನ್ನಿಹಿತವಾಗುತ್ತಿದ್ದು, ದಿನೇ ದಿನೇ ಜಿಲ್ಲೆಯಲ್ಲಿ ರಾಜಕೀಯ ಕದನ ದೊಂದಿಗೆ ಕುತೂಹಲ ಹೆಚ್ಚಾಗುತ್ತಿದೆ. ಈ ಬಾರಿ ಜಿಲ್ಲೆಯನ್ನು ಪ್ರತಿನಿಧಿಸುವ ಇಬ್ಬರು ಜನಪ್ರತಿನಿಧಿಗಳು ಯಾರೆಂಬು ದನ್ನು ಅರಿಯಲು ಮೇ ೧೩ರ ತನಕ ಕಾಯಬೇಕಿದೆ. ಇದಕ್ಕೆ ಮುನ್ನ ಅಂದರೆ ಕಳೆದ ಅವಧಿಯ ವಿಧಾನಸಭಾ ಚುನಾವಣೆ (೨೦೧೮)ರಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಏನಾಗಿತ್ತು ಎಂಬ ಕುರಿತಾದ ಮಾಹಿತಿಯ ಹಿನ್ನೋಟ ಹೀಗಿದೆ:
ವೀರಾಜಪೇಟೆ ಕ್ಷೇತ್ರ
೨೦೧೮ರ ವಿಧಾನಸಭಾ ಚುನಾವಣೆ ಯಲ್ಲಿ ವೀರಾಜಪೇಟೆ ಕ್ಷೇತ್ರದಿಂದ ಒಟ್ಟು ಆರು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು. ಕಾಂಗ್ರೆಸ್ ಪಕ್ಷದಿಂದ ಸಿ.ಎಸ್. ಅರುಣ್ ಮಾಚಯ್ಯ, ಬಿಜೆಪಿಯಿಂದ ಕೆ.ಜಿ. ಬೋಪಯ್ಯ, ಜೆ.ಡಿ.ಎಸ್.ನಿಂದ ಸಂಕೇತ್ ಪೂವಯ್ಯ ಹಾಗೂ ಪಕ್ಷೇತರರುಗಳಾಗಿ ಎಚ್.ಡಿ. ಬಸವರಾಜು, ನಂಜಪ್ಪ ಎಂ.ಕೆ. ಹಾಗೂ ಹೆಚ್.ಡಿ. ದೊಡ್ಡಯ್ಯ ಸ್ಪರ್ಧೆಯಲ್ಲಿದ್ದರು.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆದಿದ್ದು, ಇದರಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ಅವರು ಚುನಾಯಿತರಾಗಿದ್ದರು.
ಮಡಿಕೇರಿ ಕ್ಷೇತ್ರ
ಮಡಿಕೇರಿ ಕ್ಷೇತ್ರದಿಂದ ಒಟ್ಟು ೧೦ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು. ಬಿಜೆಪಿ ಅಭ್ಯರ್ಥಿಯಾಗಿ ಎಂ.ಪಿ. ಅಪ್ಪಚ್ಚುರಂಜನ್, ಕಾಂಗ್ರೆಸ್‌ನಿAದ ಕೆ.ಪಿ. ಚಂದ್ರಕಲಾ, ಜೆ.ಡಿ.ಎಸ್.ನಿಂದ ಬಿ.ಎ. ಜೀವಿಜಯ ಪಕ್ಷಗಳ ಅಭ್ಯರ್ಥಿಗಳಾಗಿ ದ್ದರು. ಇವರೊಂದಿಗೆ ಪಕ್ಷೇತರರು ಗಳಾಗಿ ಭಾರ್ಗವ ಚೆರಿಯಮನೆ, ಕೆ.ಬಿ. ರಾಜು, ಸಿ.ಯು. ಕಿಶನ್, ಕಲೀಲ್ ಎಂ., ಬಿ.ಎನ್. ತಿಮ್ಮಯ್ಯ, ಎಂ. ಮೊಹಮದ್ ಹನೀಫ್ ಹಾಗೂ ಪಿ.ಎಸ್. ಯಡೂರಪ್ಪ ಸ್ಪರ್ಧೆ ಮಾಡಿದ್ದರು. ಈ ಕ್ಷೇತ್ರದಲ್ಲಿ ೨೦೧೮ರ ಚುನಾವಣೆಯಲ್ಲಿ ಸ್ಪರ್ಧೆ ಎದುರಾಗಿದ್ದು, ಬಿಜೆಪಿ ಹಾಗೂ ಜೆ.ಡಿ.ಎಸ್. ಪಕ್ಷದ ನಡುವೆ ಕಾಂಗ್ರೆಸ್ ಇಲ್ಲಿ ಮೂರನೇ ಸ್ಥಾನ ಪಡೆದಿತ್ತು. ಈ ಹಣಾಹಣಿಯಲ್ಲಿ ಎಂ.ಪಿ. ಅಪ್ಪಚ್ಚು ರಂಜನ್ ಅವರು ಚುನಾಯಿತರಾಗಿದ್ದರು.