ಕಡಂಗ, ಏ. ೧೬: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ಎಸ್ ಎಫ್ ಹಾಗೂ ಎಸ್ವೈಎಸ್ ಸಂಯುಕ್ತ ಆಶ್ರಯದಲ್ಲಿ ಪವಿತ್ರ ರಂಜಾನ್ ತಿಂಗಳ ಅಂಗವಾಗಿ ಕುಂಜಿಲ ಪೈನರಿ ಆಡಿಟೋರಿಯಂ ನಲ್ಲಿ ಬೃಹತ್ ಝಿಕ್ರ್ ಮಜ್ಲಿಸ್ ಮತ್ತು ಇಫ್ತಾರ್ ಸಂಗÀಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಬ್ದುಲ್ ರಶೀದ್ ದಾರಿಮಿ, ಮುನೀರ್ ಮಳ್ಹರಿ, ಮಹಮದ್ ಹಾಜಿ ಮುಂತಾದ ಗಣ್ಯರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಈ ವರ್ಷದ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಕುಂಜಿಲ ರೌಲತುಲ್ ಉಲೂಮ್ ಮದ್ರಸ ವಿದ್ಯಾರ್ಥಿನಿ ಫರೀದ ಎಮ್ಎಸ್ ಹಾಗೂ ಮದ್ರಸ ಸದರ್ ಹಾಗೂ ಶಿಕ್ಷಕ ಅಬ್ದುಲ್ಲ ಸಖಾಫಿ ಉಸ್ತಾದರನ್ನು ಗೌರವಿಸಲಾಯಿತು.