ಭಾಗಮಂಡಲ, ಏ. ೧೫: ಕೆದಂಬಾಡಿ ರಾಮಯ್ಯ ಗೌಡ ಸ್ಮರಣಾರ್ಥ ಹತ್ತು ಕುಟುಂಬ ಹದಿನೆಂಟು ಗೋತ್ರ ಕೊಡಗು ಮತ್ತು ಸುಳ್ಯ ಅರೆಭಾಷಿಕ ಗೌಡ ಕುಟುಂಬಗಳ ನಡುವಿನ ೨೭ನೇ ವರ್ಷದ ಕೆದಂಬಾಡಿ ಕಪ್ ಕ್ರಿಕೆಟ್ ಪಂದ್ಯಾಟಕ್ಕೆ ಚೆಟ್ಟಿಮಾನಿ ಕೆದಂಬಾಡಿ ಕ್ರಿಕೆಟ್ ಮೈದಾನದಲ್ಲಿ ಚಾಲನೆ ದೊರೆಯಿತು.

ಪಂದ್ಯಾಟವನ್ನು ಉದ್ಘಾಟಿಸಿದ ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞ ಡಾ. ಕುಶ್ವಂತ್ ಕೋಳಿಬೈಲು, ಜನಾಂಗದ ಸಾಂಸ್ಕೃತಿಕ ಆಚರಣೆಗಳನ್ನು ಯಾವುದೇ ಕಾರಣಕ್ಕೆ ಕೈ ಬಿಡಬಾರದು ಎಂದು ಕರೆ ನೀಡಿದರು.

ಕೆದಂಬಾಡಿ ಕುಟುಂಬದ ಹಿರಿಯರ ದೂರದೃಷ್ಟಿಯ ಫಲವಾಗಿ ಸುಸಜ್ಜಿತ ಆಟದ ಮೈದಾನ ರೂಪುಗೊಂಡಿದೆ. ಚೆಟ್ಟಿಮಾನಿಯ ಆಟದ ಮೈದಾನವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕು. ಯುವ ಜನತೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ಕೈಜೋಡಿಸಬೇಕು ಎಂದರು.

ಸಮಾರAಭ ಉದ್ಘಾಟಿಸಿದ ಮಡಿಕೇರಿಯ ವಕೀಲ ಸಾಹಿತಿ ಕುಡೆಕಲ್ಲು ವಿದ್ಯಾಧರ ಮಾತನಾಡಿ, ಕೆದಂಬಾಡಿ ರಾಮಯ್ಯಗೌಡರು ಕೇವಲ ಗೌಡ ಸಮುದಾಯದ ನಾಯಕರಲ್ಲ. ದಕ್ಷಿಣ ಭಾರತದಲ್ಲಿ ಹೆಸರು ಮಾಡಿದವರು. ಜನಾಂಗದ ಅಭಿವೃದ್ಧಿಗಾಗಿ ಅವರು ರೂಪಿಸಿರುವ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.

ಕೆದAಬಾಡಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಕೀರ್ತಿ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೆದಂಬಾಡಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಸ್. ಜಯಪ್ರಕಾಶ್, ಹಿರಿಯ ಅಂತರರಾಷ್ಟಿçÃಯ ಅಥ್ಲೆಟ್ ಸೂದನ ಡಾಲಿ, ಕೆದಂಬಾಡಿ ಕುಟುಂಬಸ್ಥರು ಹಾಗೂ ಕೆದಂಬಾಡಿ ಕ್ರಿಕೆಟ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು. ಕೆದಂಬಾಡಿ ನಿತಿನ್ ನಿರೂಪಿಸಿ, ಶ್ರಾವ್ಯ ಪ್ರಾರ್ಥಿಸಿದರು. ಬಳಿಕ ಬಾರಿಕೆ ಮತ್ತು ಬಿದ್ರುಪಣೆ

(ಮೊದಲ ಪುಟದಿಂದ) ತಂಡಗಳ ನಡುವೆ ಪಂದ್ಯಾಟ ನಡೆಯಿತು. ಬಾರಿಕೆ ತಂಡ ೪೩ ರನ್ ಗಳಿಸಿತು. ಬಿದ್ರುಪಣೆ ಏಳು ವಿಕೆಟ್‌ಗಳ ಜಯ ಸಾಧಿಸಿತು. ತಳೂರು ಮತ್ತು

ಕೋಚನ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ತಳೂರು ತಂಡ ೫೬ ರನ್ ಗಳಿಸಿದರೆ ಕೋಚನ ತಂಡವು ಆರು ವಿಕೆಟ್ ನಷ್ಟಕ್ಕೆ ೩೫ ರನ್ ಮಾಡಿ ೨೧ ರನ್‌ಗಳ ಸೋಲನ್ನು ಕಂಡಿತು.

ಮೂರನೇ ಪಂದ್ಯದಲ್ಲಿ ದೇರಜೆ ತಂಡವು ಐದು ವಿಕೆಟ್‌ಗೆ ೫೫ ರನ್ ಮಾಡಿತು. ಪಡ್ಡಂಬೈಲು ತಂಡ ಒಂದು ವಿಕೆಟ್ ನಷ್ಟಕ್ಕೆ ೬೧ ರನ್ ಗಳಿಸಿ ಗೆಲುವು ಸಾಧಿಸಿತು. ದಂಬೆ ಕೋಡಿ ಮತ್ತು ಕುಕ್ಕನೂರು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ದಂಬೆಕೋಡಿ ತಂಡವು ನಾಲ್ಕು ವಿಕೆಟ್‌ಗೆ ೬೫ ರನ್ ಗಳಿಸಿತು. ಕುಕ್ಕನೂರು ತಂಡವು ೫ ವಿಕೆಟ್‌ಗೆ ೩೯ ರನ್ ಮಾಡಿ ೨೬ ರನ್‌ಗಳ ಸೋಲನ್ನು ಅನುಭವಿಸಿತು. ತಳೂರು ತಂಡವು ಐದು ವಿಕೆಟ್‌ಗೆ ೫೬ ರನ್ ಗಳಿಸಿತು. ಬಿದ್ರುಪಣೆ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ ೩೪ ರನ್ ಮಾಡಿ ೨೨ ರನ್‌ಗಳ ಸೋಲನ್ನು ಕಂಡಿತು. ದಂಬೆಕೋಡಿ ಮತ್ತು ಪಡ್ಡಂಬೈಲು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ದಂಬೆಕೋಡಿ ತಂಡ ಎಂಟು ವಿಕೆಟಿಗೆ ೩೭ ರನ್ ಗಳಿಸಿತು. ಪಡ್ಡಂಬೈಲು ಬಿ ತಂಡ ಒಂದು ವಿಕೆಟ್ ನಷ್ಟಕ್ಕೆ ೪೨ ರನ್ ಗಳಿಸಿ ಗೆಲುವು ಸಾಧಿಸಿತು. ದಿನದ ಕೊನೆಯ ಪಂದ್ಯದಲ್ಲಿ ತಳೂರು ತಂಡವು ನಾಲ್ಕು ವಿಕೆಟ್‌ಗೆ ೭೭ ರನ್ ಗಳಿಸಿತು. ಉತ್ತರವಾಗಿ ಆಡಿದ ಪಡ್ಡಂಬೈಲು ಬಿ ತಂಡ ಒಂದು ವಿಕೆಟ್ ನಷ್ಟಕ್ಕೆ ೫೪ ರನ್‌ಗಳಿಗೆ ೨೩ ರನ್‌ಗಳ ಸೋಲನ್ನು ಅನುಭವಿಸಿತು. ತಳೂರು ತಂಡ ಮುಂದಿನ ಹಂತಕ್ಕೆ ಪ್ರವೇಶಿಸಿತು. -ಸುನಿಲ್ ಕುಯ್ಯಮುಡಿ