ಮಡಿಕೇರಿ, ಏ. ೧೫: ಅರಮೇರಿಯ ಎಸ್‌ಎಮ್‌ಎಸ್ ವಿದ್ಯಾ ಸಂಸ್ಥೆಯಲ್ಲಿ ಮಾರ್ಚ್ ೨೭ರಿಂದ ಏಪ್ರಿಲ್ ೫ ರವರೆಗೆ ೧೦ ದಿನಗಳ ಕಾಲ ಬೇಸಿಗೆ ಶಿಬಿರವನ್ನು ಆಯೋಜಿಸ ಲಾಗಿತ್ತು. ಪಾಲ್ಗೊಂಡಿದ್ದ ೧೪೫ ಶಿಬಿರಾರ್ಥಿಗಳು ಕಸದಿಂದ ರಸ, ಕಲೆ, ಕರಕುಶಲ, ಕ್ರೀಡೆ, ಅಡುಗೆ, ಇನ್ನಿತರ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀಕಾಂತ್ ರಾವ್ ಅವರು ಬೇಟೋಳಿ ಮತ್ತು ದೇವರ ಕಾಡುಗಳಲ್ಲಿ ಪಕ್ಷಿಗಳ ಚಲನ ವಲನಗಳ ಕುರಿತು ಮಾರ್ಗದರ್ಶನ ನೀಡಿದರು.
ಭಾಗವಹಿಸಿದ್ದ ಶಿಬಿರಾರ್ಥಿಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ ವಿದ್ಯಾರ್ಥಿಗಳು ಹಲವಾರು ಬ್ಯಾಡ್ಜ್ಗಳನ್ನು ಸಂಪಾದಿಸಿಕೊAಡರು. ಶಿಬಿರದಲ್ಲಿ ಕೊಡಗು ರೆಡ್‌ಕ್ರಾಸ್ ಸೊಸೈಟಿಯ ಡಾ. ರವೀಂದ್ರ ಕಾಮತ್, ಮುರಳೀಧರ್ ಪ್ರಥಮ ಚಿಕಿತ್ಸೆಯ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದರು. ದಂತ ವೈದೆÀ್ಯ ಡಾಕ್ಟರ್ ಸುಪ್ರಿತಾ ದೀಪಕ್ ಅವರು ಮಕ್ಕಳ ಹಲ್ಲುಗಳ ಶುಚಿತ್ವ ಕಾಪಾಡುವ ಬಗ್ಗೆ ಮಾಹಿತಿ ನೀಡಿದರು. ಜನರಲ್ ತಿಮ್ಮಯ್ಯ ಅವರ ಜನ್ಮದಿನದ ಪ್ರಯುಕ್ತ ಮಡಿಕೇರಿಯ ತಿಮ್ಮಯ್ಯ ವೃತ್ತದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಮುಖ್ಯ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯು ಅವರು ತಿಮ್ಮಯ್ಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಶಿಬಿರಾರ್ಥಿ ಗಳೊಡನೆ ರಾಜಾಸೀಟ್‌ವರೆಗೆ ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡರು. ಬಳಿಕ ಸನ್ನಿಸೈಡ್ ಸಂಗ್ರಹಾಲಯ, ಸಾಲುಮರದ ತಿಮ್ಮಕ್ಕ ಉದ್ಯಾನ ವನಗಳಿಗೆ ಭೇಟಿ ನೀಡಲಾಯಿತು. ಶಿಬಿರದ ಮುಕ್ತಾಯದ ದಿನದ ಪ್ರಯುಕ್ತ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಎಸ್‌ಎಮ್‌ಎಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು, ಭಾರತ್ ಸ್ಕೌಟ್ ಮತ್ತು ಗೈಡ್ಸ್ನ ಜಿಲ್ಲಾ ಮುಖ್ಯ ಆಯುಕ್ತ ಕೆ.ಟಿ ಬೇಬಿ ಮ್ಯಾಥ್ಯು, ಜಿಲ್ಲಾ ಕಾರ್ಯದರ್ಶಿ ವಸಂತಿ ಎಂ.ಎA., ಜಂಟಿ ಕಾರ್ಯದರ್ಶಿ ಬೊಳ್ಳಜಿರ ಅಯ್ಯಪ್ಪ ಜಿಲ್ಲ್ಲಾ ತರಬೇತಿ ಆಯುಕೆÀ್ತ ಮೈಥಿಲಿ ರಾವ್, ಸಂಸ್ಥೆಯ ಪ್ರಾಂಶುಪಾಲೆ ಕುಸುಂ ಟಿಟೋ ಹಾಜರಿದ್ದರು. ಕಾರ್ಯಕ್ರಮವನ್ನು ಪ್ರತಿಮಾ ನಿರೂಪಿಸಿದರು. ದಾಕ್ಷಾಯಿಣಿ ಸ್ವಾಗತಿಸಿ, ವಂದಿಸಿದರು.