ಕರಿಕೆ, ಏ. ೧೪: ಕೊಡಗು ವೃತ್ತದ ವೀರಾಜಪೇಟೆ ಪ್ರಾದೇಶಿಕ ವಿಭಾಗದ ಮಾಕುಟ್ಟ ತನಿಖಾ ಠಾಣೆ ಮತ್ತು ಮಡಿಕೇರಿ ವನ್ಯಜೀವಿ ವಿಭಾಗದ ತಲಕಾವೇರಿ ವನ್ಯಧಾಮದ ಹಕ್ಕಿಕಂಡಿ / ಮೇಲಡ್ಕ ಮಾರ್ಗದಲ್ಲಿ ಹಾದುಹೋಗುವ ಅಂತರ ರಾಜ್ಯ ಹೆದ್ದಾರಿಗಳಲ್ಲಿ ರಾಜ್ಯ ಮತ್ತು ಅಂತರ ರಾಜ್ಯ ವಾಹನಗಳು ಯಥೇಚ್ಚವಾಗಿ ಸಂಚರಿಸುತ್ತಿದ್ದು, ಈ ವಾಹನಗಳ ಪ್ರವೇಶ/ಉಪಯೋಗಿ ಶುಲ್ಕ ಸಂಗ್ರಹಿಸಲಾಗುವುದು ಎಂದು ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ವೀರಾಜಪೇಟೆ-ಮಾಕುಟ್ಟ ಮತ್ತು ಭಾಗಮಂಡಲ-ಕರಿಕೆ ರಾಜ್ಯ ಹೆದ್ದಾರಿಗಳಲ್ಲಿ ವಾಹನಗಳು ಯಥೇಚ್ಚವಾಗಿ ವನ್ಯಧಾಮ ಮತ್ತು ಮೀಸಲು ಅರಣ್ಯ ಪ್ರದೇಶವನ್ನು ಹಾದುಹೋಗುತ್ತಿದ್ದು, ಕೇರಳ ರಾಜ್ಯದ ಮತ್ತು ಬೇರೆ ಜಿಲ್ಲೆಯ ವಾಹನಗಳು ಈ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಿ ಸಾರ್ವಜನಿಕರು ಪರಿಸರ ನಾಶ, ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯ ವಸ್ತುಗಳನ್ನು ಅರಣ್ಯದಲ್ಲಿ ಹಾಕುತ್ತಿರುವುದರಿಂದ ವನ್ಯಜೀವಿ ಪ್ರಾಣಿಗಳು ಸೇವಿಸಿ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ಈಗಾಗಲೇ ಇಲಾಖಾ ಸಿಬ್ಬಂದಿಗಳ ಕೊರತೆಯಿರುವುದ ರಿಂದ ಅರಣ್ಯ ರಕ್ಷಣೆ, ವನ್ಯಜೀವಿ ಕಳ್ಳಬೇಟೆ ಹಾಗೂ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿಯಾಗುವುದಲ್ಲದೆ, ರಸ್ತೆಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ನಿರ್ವಹಣೆ ಕೂಡ ಮಾಡಲಾಗು ತ್ತಿದ್ದು, ಸಿಬ್ಬಂದಿಗಳಿಗೆ ಹೆಚ್ಚಿನ ಒತ್ತಡ ವಿದೆ. ಆದ್ದರಿಂದ ದಿನನಿತ್ಯ ಸಂಚರಿ ಸುವ ಸ್ಥಳೀಯ ವಾಹನಗಳು ಮತ್ತು ಬಸ್ಸುಗಳನ್ನು ಹೊರತುಪಡಿಸಿ ಹೊರ ರಾಜ್ಯದ ಮತ್ತು ಬೇರೆ ಜಿಲ್ಲೆಯ ಪ್ರವಾಸಿಗರ ವಾಹನಗಳಿಗೆ ಶುಲ್ಕ ವನ್ನು ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಬಿ. ಎನ್. ಎನ್. ಮೂರ್ತಿ ತಿಳಿಸಿದ್ದಾರೆ.
ಕಳೆದ ೩-೪ ತಿಂಗಳುಗಳಿAದ ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಕೇರಳ ರಾಜ್ಯದ ವಾಹನಗಳಲ್ಲಿ ವೈದ್ಯಕೀಯ ತ್ಯಾಜ್ಯ ವಸ್ತುಗಳು, ಪ್ಲಾಸ್ಟಿಕ್ ವಸ್ತುಗಳು ಮತ್ತು ಇತರೆ ವಸ್ತುಗಳನ್ನು ಅರಣ್ಯ ಪ್ರದೇಶಗಳಲ್ಲಿ ಹಾಕಿದ್ದು, ಇದನ್ನು ವನ್ಯಪ್ರಾಣಿ ಸಂಘರ್ಷ ನಿಧಿಗೆ ಜಮಾವಣೆ ಮಾಡಿ ಜಿಲ್ಲೆಯಲ್ಲಿ ಮಾನವ ವನ್ಯಜೀವಿ ಸಂಘರ್ಷ ಸಂದರ್ಭದಲ್ಲಿ ನಡೆಯುವ ಘಟನೆಗಳಿಗೆ ಉಪಯೋಗಿಸಲ್ಪಟ್ಟಿದ್ದು ಹಾಗೂ ರಸ್ತೆಯಲ್ಲಿ ಕಸ ನಿರ್ವಹಣೆ ಮಾಡಲು ಉಪಯೋಗಿಸಲಾಗುತ್ತಿದೆ. ವನ್ಯಧಾಮ ಹಾಗೂ ಮೀಸಲು ಅರಣ್ಯದ ಅಭಿವೃದ್ಧಿ ಮತ್ತು ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಈ ರಸ್ತೆ ಯಲ್ಲಿ ಸಂಚರಿಸುವ ಅಂತರರಾಜ್ಯ ಮತ್ತು ಇತರೆ ಜಿಲ್ಲೆಗಳಿಂದ ಬರುವ ವಾಹನ ಗಳಿಂದ ಶುಲ್ಕವನ್ನು ಸಂಗ್ರಹಿಸಲಾಗು ತ್ತಿದೆ. ಭಾಗಮಂಡಲ- ಕರಿಕೆ ರಸ್ತೆ ಬದಿಯಲ್ಲಿ ಹೆಚ್ಚಿನ ಸಣ್ಣ-ಸಣ್ಣ ಜಲಪಾತಗಳಿದ್ದು, ಹೊರ ರಾಜ್ಯಗಳ ಹಾಗೂ ಇತರೆ ಜಿಲ್ಲೆಗಳಿಂದ ಬರುವ ಪ್ರವಾಸಿಗರು ವಾಹನಗಳನ್ನು ನಿಲುಗಡೆ ಮಾಡಿ ಮದ್ಯ ಸೇವಿಸುವುದು, ಸ್ನಾನ ಮಾಡುವುದು, ಊಟಮಾಡಿ ಪ್ಲಾಸ್ಟಿಕ್, ಮೆಡಿಕಲ್ ತ್ಯಾಜ್ಯ ಮತ್ತು ಇತರೆ ತ್ಯಾಜ್ಯ ವಸ್ತು ಗಳನ್ನು ಎಸೆದು ಹೋಗುವುದು ಕಂಡುಬAದಿದೆ. ಮುಂದಿನ ದಿನ ಗಳಲ್ಲಿ ಇದನ್ನು ತಡೆಗಟ್ಟುವಲ್ಲಿ ವಿಫಲ ವಾದಲ್ಲಿ ಕೊಡಗಿನ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದ್ದು ಹಾಗೂ ವನ್ಯಪ್ರಾಣಿಗಳು ಇದನ್ನು ಸೇವಿಸಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಶುಲ್ಕವನ್ನು ಸಂಗ್ರಹಿಸಿ ವನ್ಯಧಾಮ ಹಾಗೂ ಮೀಸಲು ಅರಣ್ಯದ ಸ್ವಚ್ಛತೆ ಕಾಪಾಡಲು ಹೆಚ್ಚು ಅನುಕೂಲವಾಗಿದೆ ಎಂಬುದಾಗಿ ಮಾಹಿತಿ ನೀಡಲಾಗಿದೆ.