ವೀರಾಜಪೇಟೆ, ಏ. ೧೪: ವೀರಾಜಪೇಟೆ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟೋಳಿ ಗ್ರಾಮದ ಕೆ. ಬೊಯಿಕೇರಿ ಗ್ರಾಮಕ್ಕೆ ಹೊಂದಿಕೊAಡಿರುವ ರಸ್ತೆ ಮುಂಭಾಗದ ತಂಗುದಾಣದ ಸ್ಥಿತಿ ಶೋಚನೀಯ ಸ್ಥಿತಿಯತ್ತ ಸಾಗಿದೆ. ಹಲವು ವರ್ಷಗಳ ಹಿಂದೆ ಕೆದಮುಳ್ಳೂರು ಪಾಲಂಗಾಲ, ತೋರ ಹೀಗೆ ಗ್ರಾಮೀಣ ಭಾಗಗಳಿಗೆ ತೆರಳಲು ಪ್ರಯಾಣಿಕರಿಗಾಗಿ ತಂಗುದಾಣವನ್ನು ನಿರ್ಮಾಣ ಮಾಡಲಾಗಿತ್ತು. ತಂಗುದಾಣದಲ್ಲಿ ಪ್ರಯಾಣಿಕರು ತಂಗಿ ಬಸ್ಸಿನ ಪ್ರಯಾಣಿಕಕ್ಕಾಗಿ ಕಾಯುತ್ತಿದ್ದರು. ಇದೀಗ ಈ ರಸ್ತೆಯಲ್ಲಿ ಮುಂಜಾನೆಯಿAದ ಸಂಜೆಯವರೆಗೆ ಖಾಸಗಿ ವಾಹನಗಳು ಅಧಿಕವಾಗಿ ಸಂಚರಿಸುತ್ತವೆ.

ತಂಗುದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖಗೊಂಡಿದೆ. ಬಸ್‌ಗಳ ನಿಲುಗಡೆ ಕಡಿಮೆಯಾಗಿದೆ. ಸಂಜೆ ವೇಳೆಗೆ ಕೆಲವು ಪುಂಡ ಪೋಕರಿಗಳಿಗೆ ಇದು ಇಂದು ಆಶ್ರಯತಾಣವಾಗಿ ಪರಿಣಮಿಸಿದೆ. ರಾತ್ರಿ ವೇಳೆಯಲ್ಲಿ ಕೆಲವು ಪುಂಡರು ತಂಗುದಾಣದಲ್ಲಿ ಮದ್ಯ ಸೇವನೆ, ಧೂಮಪಾನ ಮಾಡಿ ಬಾಟಲಿಗಳನ್ನು ಮತ್ತು ಬೀಡಿ ಸಿಗರೇಟು ತುಂಡುಗಳು ಮತ್ತು ಇನ್ನಿತರ ತ್ಯಾಜ್ಯ ವಸ್ತುಗಳನ್ನು ತಂಗುದಾಣದಲ್ಲಿರಿಸಿ ತಂಗುದಾಣದ ಚಿತ್ರಣವನ್ನೇ ಬದಲು ಮಾಡಿದ್ದಾರೆ. ತಂಗುದಾಣ ನಿರ್ವಹಣೆ ಇಲ್ಲದೆ ಅವನತಿಯತ್ತ ಸಾಗಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿ ಕಾಣುತ್ತಿದೆ ತಂಗುದಾಣ.

ಸ್ವಚ್ಛ ಭಾರತದ ಪರಿಕಲ್ಪನೆ ಸರ್ಕಾರಕ್ಕಿದ್ದರೂ ಪುಂಡರಿಗೆ ಇದು ಅನ್ವಯವಾಗುವುದಿಲ್ಲದಂತಾಗಿದೆ. ತಂಗುದಾಣದ ಒಳಭಾಗ ಮತ್ತು ಸುತ್ತಲಿನಲ್ಲಿ ಮದÀ್ಯದ ಬಾಟಲಿ ಮತ್ತು ಇನ್ನಿತರ ತ್ಯಾಜ್ಯದ ದರ್ಶನ ಸರ್ವರಿಗೆ ಕಾಣದೊರಕುತ್ತದೆ. ಕೆಲವು ತಿಂಗಳ ಹಿಂದೆ ಗ್ರಾಮ ಪಂಚಾಯಿತಿ ಮತ್ತು ಸಂಘ ಸಂಸ್ಥೆಗಳೊAದಿಗೆ ಸ್ವಚ್ಛ ಭಾರತದ ಯೋಜನೆ ಅಡಿಯಲ್ಲಿ ರಸ್ತೆಯ ಇಕ್ಕೆಲಗಳನ್ನು ಮತ್ತು ತಂಗುದಾಣವನ್ನು ಶುಚಿಗೊಳಿಸಲಾಗಿತ್ತು. ತಂಗುದಾಣದ ಅನತಿ ದೂರದಲ್ಲಿ ಹೊಳೆಯ ಸಮೀಪ ಗ್ರಾಮ ಪಂಚಾಯಿತಿ ವತಿಯಿಂದ ಕಸ ಹಾಕುವವರ ವಿರುದ್ಧ ದಂಡ ವಿಧಿಸಲಾಗುತ್ತದೆ ಎಂದು ನಾಮಫಲಕ ಅಳವಡಿಸಲಾಗಿದೆ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪುಂಡರ ದರ್ಬಾರ್ ಮುಂದುವರೆದಿದೆ.

ತAಗುದಾಣದ ಸಮೀಪದ ಗ್ರಾಮಸ್ಥರು ತಂಗುದಾಣದ ನಿರ್ವಹಣೆಯ ಕುರಿತು. ಹಲವು ಬಾರಿ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ. ಗ್ರಾಮ ಪಂಚಾಯಿತಿ ಶುಚಿಗೊಳಿಸಿ ಹಿಂದಿರುಗಿದರೂ ಯತಾಸ್ಥಿತಿಯತ್ತ ತಂಗುದಾಣ ಮರುಳುತ್ತಿದೆ.

-ಕಿಶೋರ್ ಕುಮಾರ್ ಶೆಟ್ಟಿ ಇದೀಗ ಪ್ರಯಾಣಿಕರ ಸಂಖ್ಯೆ ಕ್ಷೀಣಿಸಿರುವುದರಿಂದ. ಈ ಭಾಗದಲ್ಲಿ ಸಂಚಾರ ಮಾಡುವ ಬಸ್‌ಗಳ ಸಂಖ್ಯೆ ತಗ್ಗಿದೆ. ತಂಗುದಾಣದ ಸ್ಥಿತಿ ಬದಲಾಗಿದೆ. ಶುಚಿಗೊಳಿಸುವಂತೆ ದೂರು ನೀಡಿದರೆ ಗ್ರಾಮ ಪಂಚಾಯಿತಿ ತನ್ನ ಕರ್ತವ್ಯ ನಿರ್ವಹಿಸಿ ಮರುಳುತ್ತದೆ. ಆದರೆ ಸಂಜೆ ಮತ್ತು ರಾತ್ರಿ ಸಮಯದಲ್ಲಿ ಕೆಲವು ಯುವಕರು ತಂಗುದಾಣದಲ್ಲಿ ವಿಶ್ರಮಿಸಿ ಮದ್ಯ ಸೇವನೆ ಮಾಡಿ ಕಾಲಿ ಬಾಟಲಿ, ಬೀಡಿ ಸಿಗರೇಟು ತುಂಡುಗಳನ್ನು ಸ್ಥಳದಲ್ಲೇ ಬಿಟ್ಟು ತೆರಳುವುದು ಸಾಮಾನ್ಯವಾಗಿದೆ. ಬೀಟ್ ಪೊಲೀಸ್ ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವಹಿಸಿದಲ್ಲಿ ಹೆದರಿಕೆಯಿಂದ ಪುಂಡರ ಹಾವಳಿ ಕಡಿಮೆಯಾಗಬಹುದು.

-ಸುಬ್ಬಯ್ಯ, ಗ್ರಾಮಸ್ಥ

ತಂಗುದಾಣ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಮದ್ಯದ ಬಾಟಲಿಗಳು ಮತ್ತು ಕೆಲವು ಮನೆಗಳ ತ್ಯಾಜ್ಯ ವಸ್ತುಗಳು ಕಾಣಸಿಗುತ್ತವೆ. ತಂಗುದಾಣದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಸಾರ್ವಜನಿಕರಿಗೆ, ಗ್ರಾಮಸ್ಥರಿಗೆ ತಿಳುವಳಿಕೆಯ ಜಾಹೀರಾತು, ನಾಮಫಲಕ, ದಂಡ ವಿಧಿಸುವ ಕಾರ್ಯಕೈಗೊಂಡರೂ ಕೆಲವು ನಾಗರಿಕತೆ ತಿಳಿಯದ ವ್ಯಕ್ತಿಗಳು ಅಶುಚಿತ್ವಗೊಳಿಸಿ ಪರಿಸರಕ್ಕೆ ಮಾರಕ ಎನ್ನುವಂತೆ ವರ್ತನೆ ಮಾಡುತ್ತಿರುವುದು ಬೇಸರ. ಗ್ರಾಮ ಪಂಚಾಯಿತಿಯ ವತಿಯಿಂದ ಕಸ ವಿಲೇವಾರಿ ಮಾಡುವ ವಾಹನ ಗ್ರಾಮದ ಎಲ್ಲೆಡೆ ಕರ್ತವ್ಯ ಸಮಯದಲ್ಲಿ ಸಂಚರಿಸಿ ಕಸವಿಲೇವಾರಿ ಮಾಡಲು ಶ್ರಮಿಸುತ್ತಿದೆ. ಆದರೆ ರಾತ್ರಿಯ ವೇಳೆಯಲ್ಲಿ ಕರ್ತವ್ಯ ನಿರ್ವಹಿಸುವುದು ಅಸಾಧ್ಯ. ಪೊಲೀಸ್ ಇಲಾಖೆಯು ರಾತ್ರಿ ಗಸ್ತು ನಿರ್ವಹಣೆ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿದಲ್ಲಿ ಒಂದಿಷ್ಟು ನಿಯಂತ್ರಣಕ್ಕೆ ತರಬಹುದು.

-ಎಂ.ಎA ಇಸ್ಮಾಯಿಲ್, ಗ್ರಾಮ ಪಂಚಾಯಿತಿ ಸದಸ್ಯ

ಸ್ವಚ್ಛ ಭಾರತ ಅಭಿಯಾನದಲ್ಲಿ ಗ್ರಾಮದ ಎಲ್ಲಡೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಕೆಲವು ಯುವಕರು ಅಶುಚಿತ್ವ ಮಾಡುತ್ತ ಪರಿಸರವನ್ನು ಹಾಳುಗೆಡವುತ್ತಿದ್ದಾರೆ. ಇಲಾಖೆ ಮತ್ತು ಸಂಘ ಸಂಸ್ಥೆಗಳ ಸಹಕಾರ ದೊಂದಿಗೆ ಹಲವು ಬಾರಿ ತಂಗುದಾಣ ಸ್ವಚ್ಛ ಮಾಡಲಾಗಿದೆ. ಪರಿಸರ ಸ್ವಚ್ಛತೆಯಲ್ಲಿ ಸಾರ್ವಜನಿಕರ ಸಹಕಾರ ಬಹುಮುಖ್ಯ. ಶೀಘ್ರದಲ್ಲಿ ಶುಚಿಗೊಳಿಸುವ ಕಾರ್ಯಕ್ಕೆ ಮುಂದಾಗುತ್ತೇವೆ.

-ಪ್ರಮೋದ್, ಪಿ.ಡಿ.ಓ ಕೆದಮುಳ್ಳೂರು

ಗ್ರಾಮ ಪಂಚಾಯಿತಿ