ಮಡಿಕೇರಿ, ಏ. ೧೪: ನಗರದ ಕೊಡಗು ವಿದ್ಯಾಲಯದಲ್ಲಿ ತಾ. ೧೫ರಂದು (ಇಂದು) ವಿಶ್ವ ಕಲಾದಿನದ ಅಂಗವಾಗಿ ‘ಸಮಾಗಮ ಆರ್ಟ್ ಆರ್ಟಿಸ್ಟ್’ ಎಂಬ ಕಾರ್ಯಕ್ರಮ ನಡೆಯಲಿದೆ.
೭ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳಿಗೆ ತರಬೇತಿಯೊಂದಿಗೆ ವಿವಿಧ ಚಿತ್ರವನ್ನು ದಿನವಿಡೀ ರಚಿಸಲಿದ್ದಾರೆ. ಕಲಾವಿದರುಗಳಾದ ಟಿ.ಬಿ. ಪ್ರಸನ್ನ ಕುಮಾರ್, ಐಮಂಡ ರೂಪೇಶ್ ನಾಣಯ್ಯ, ಕೆ.ಆರ್. ಮಂಜುನಾಥ್, ರಾಮ್ ಗೌತಮ್, ಅರುಣ ರಾಮ್ಗೌತಮ್, ವಹೀದ್ ಜಾನ್ ಮತ್ತು ಅನೀಶ ಕುಮಾರ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಕೊಡಗು ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ ಕಲಾವಿದರು ರಚಿಸಿದ ಚಿತ್ರಗಳ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.