ಸೋಮವಾರಪೇಟೆ, ಏ. ೧೩: ಪಟ್ಟಣದ ಮಹದೇಶ್ವರ ಬಡಾವಣೆಯಲ್ಲಿರುವ ಶ್ರೀ ಮುನೇಶ್ವರ ಸ್ವಾಮಿ ಹಾಗೂ ಚಾಮುಂಡೇಶ್ವರಿ ಅಮ್ಮನವರ ದೇವಾಲಯದ ೬ನೇ ವರ್ಷದ ವಾರ್ಷಿಕ ಮಹಾಪೂಜೋತ್ಸವ ತಾ. ೨೦ ರಂದು ನಡೆಯಲಿದೆ.

ಅರ್ಚಕ ಜಗದೀಶ್ ಉಡುಪ ಅವರ ನೇತೃತ್ವದಲ್ಲಿ ಅಂದು ಬೆಳಿಗ್ಗೆ ೮ ಗಂಟೆಗೆ ಮಹಾಗಣಪತಿ ಹೋಮ, ೧೦ ಗಂಟೆಗೆ ದುರ್ಗಾ ಹೋಮ ಹಾಗೂ ಕಳಸ ಪ್ರತಿಷ್ಠಾಪನೆ, ಬೆಳಿಗ್ಗೆ ೧೧.೩೦ಕ್ಕೆ ನವಕ ಕಳಸ ಪ್ರತಿಷ್ಠಾಪನೆ, ಕಳಶಾಭಿಷೇಕ, ಅಲಂಕಾರ, ಮಹಾಪೂಜೆ, ಸಂಜೆ ೫.೩೦ ಕ್ಕೆ ಪಂಚ ದುರ್ಗಾದೀಪ ನಮಸ್ಕಾರ, ೭.೩೦ ಗಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಡೆಯಲಿದೆ.