ಸುಂಟಿಕೊಪ್ಪ, ಏ. ೧೩: ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್, ಕಬ್ಸ್, ಬುಲ್ ಬುಲ್ಗಳಿಗೆ ಬೇಸಿಗೆ ಶಿಬಿರ ಆಯೋಜಿಸಲಾಗಿತ್ತು.
ಸಂತ ಅಂತೋಣಿ ಶಾಲಾ ಸಭಾಂಗಣದಲ್ಲಿ ೪ ದಿನಗಳ ಶಿಬಿರವನ್ನು ರಾಜ್ಯ ಗೈಡ್ ಸಂಸ್ಥೆಯ ಸದಸ್ಯೆ ಡೈಸಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯನಿ ಸೀಸ್ಟರ್ ವೀರ ಅವರು ಚಾಲನೆ ನೀಡಿದರು. ಬೇಸಿಗೆ ಶಿಬಿರದಲ್ಲಿ ೧೨೫ ಮಂದಿ ಶಿಬಿರಾ ರ್ಥಿಗಳು ಪಾಲ್ಗೊಂಡಿದ್ದು, ಪ್ರಾರ್ಥನೆ, ಧ್ವಜಾರೋಹಣ, ಸಭಾ ಕಾರ್ಯಕ್ರಮ, ಆಟೋಟ ಸ್ಪರ್ಧೆಗಳು, ಪ್ರಥಮ ಚಿಕಿತ್ಸೆ, ಘನವಂದನೆ, ಸಂಸ್ಥೆಯ ಉದ್ದೇಶ, ನಿಯಮ ಪ್ರತಿಜ್ಞೆ, ಪನರಾವರ್ತನೆ, ಕರಕುಶಲ ವಸ್ತುಗಳ ತಯಾರಿಕೆ ಹಾಗೂ ಪ್ರದರ್ಶನ, ಗ್ರಾಮ ಸ್ವಚ್ಛತೆ, ಹೊರ ಸಂಚಾರ, ನೃತ್ಯ ಮನರಂಜನೆ ಸೇರಿದಂತೆ ತರಬೇತಿಗಳನ್ನು ಶಿಬಿರದಲ್ಲಿ ನೀಡಲಾಯಿತು. ಕಬ್ಸ್ ಮಾಸ್ಟರ್ ಈವಾ ಜೀತಾ ಬೆನ್ನಿಸ್, ಮಹೇಶ್, ಗೈಡ್ ನಾಯಕಿ ಪ್ರೀತ್ ಜೋಯ್ಸ್ ಅವರು ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.