ಶನಿವಾರಸಂತೆ, ಏ.೧೩ : ಕಸಾಯಿಖಾನೆಗೆ ಸಾಗಿಸುತ್ತಿದ್ದ ೭ ಜಾನುವಾರುಗಳನ್ನು ಶನಿವಾರಸಂತೆಯ ಭಜರಂಗದಳ ಕಾರ್ಯಕರ್ತರು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದರು. ಗುರುವಾರ ಮುಂಜಾನೆ ೪.೩೦ರಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಎಮ್ಮೆಗಳು ಸೇರಿದಂತೆ ೭ ಜಾನುವಾರುಗಳನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ರಕ್ಷಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಸಮೀಪದ ಕಾಜೂರು ಗ್ರಾಮದ ಮುಖ್ಯರಸ್ತೆಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಮಾಹಿತಿಯನ್ವಯ ಭಜರಂಗದಳದ ಸಂಚಾಲಕ ತನ್ಮಯ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಧನಂಜಯ್, ಕಾರ್ಯಕರ್ತರಾದ ಆಕಾಶ್, ಸಚಿನ್, ಅಜಯ್, ಗಗನ್, ಶ್ರೇಯಸ್, ಇತರ ೨೦ ಮಂದಿ ವಾಹನವನ್ನು ಅಡ್ಡಗಟ್ಟಿ ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಾನುವಾರುಗಳನ್ನು ಪಶುಚಿಕಿತ್ಸಾ ವೈದ್ಯರಿಂದ ತಪಾಸಣೆಗೆ ಒಳಪಡಿಸಿ ನಂತರ ಸೂಕ್ತ ಗೋಶಾಲೆಗೆ ಕಳುಹಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪಿಎಎಸ್‌ಐ ಗೋವಿಂದ್‌ರಾಜ್ ಮಾರ್ಗದರ್ಶನದಲ್ಲಿ ಪಿಎಸ್‌ಐ ಕಾಶಿನಾಥ್ ಬಗಲಿ ಪ್ರಕರಣ ದಾಖಲಿಸಿದ್ದಾರೆ.