ಕುಶಾಲನಗರ, ಏ. ೧೩: ಕುಡಿದ ಮತ್ತಿನಲ್ಲಿ ಬೈಕ್ ಓಡಿಸಿ ಸರಣಿ ಅಪಘಾತ ಮಾಡಿ ಪರಾರಿ ಆಗುತ್ತಿದ್ದ ಬೈಕ್ ಚಾಲಕನೊಬ್ಬನನ್ನು ಕುಶಾಲನಗರ ಸಂಚಾರಿ ಠಾಣೆಯ ಪೊಲೀಸರು ವಶಕ್ಕೆ ತೆಗೆದುಕೊಂಡು ಕ್ರಮ ಕೈಗೊಂಡಿದ್ದಾರೆ.
ಕೂಡುಮAಗಳೂರಿನ ನಿವಾಸಿ ಸುಭಾಶ್ ಎಂಬಾತ ತನ್ನ ಬೈಕ್‌ನಲ್ಲಿ (ಏಂ ೧೨U೪೫೭೨) ಮದ್ಯ ಸೇವಿಸಿ ಕೂಡಿಗೆ ಕಡೆಯಿಂದ ಕುಶಾಲನಗರದ ಕಡೆಗೆ ಬರುತ್ತಿದ್ದು ಈ ಸಂದರ್ಭ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ಡಿಕ್ಕಿಪಡಿಸಿಕೊಂಡು ನಂತರ ಕುಶಾಲನಗರ ಗಣಪತಿ ದೇವಾಲಯದ ಮುಂದೆ ಪಾದಚಾರಿಗಳಿಗೆ ಡಿಕ್ಕಿಯಾಗಿ ರಸ್ತೆಯಲ್ಲಿ ಬಿದ್ದ ಸಂದರ್ಭ ಕುಶಾಲನಗರ ಸಂಚಾರಿ ಠಾಣೆ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿ ಬೈಕ್ ವಶ ಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.