ಸೋಮವಾರಪೇಟೆ, ಏ. ೧೩: ಇಲ್ಲಿಗೆ ಸಮೀಪದ ಬೆಟ್ಟದಳ್ಳಿ ಯಶೋದೆ ರಂಗಟ್ರಸ್ಟ್, ಸಾಂದೀಪನಿ ಪ್ರೌಢಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಮಕ್ಕಳ ಕಲಾಕಲಿಕೆ ಶಿಬಿರ ತಾ. ೧೫ರಿಂದ ಮೇ ೩ರ ವರೆಗೆ ನಡೆಯಲಿದೆ ಎಂದು ಶಿಬಿರದ ಸಂಚಾಲಕ ನಿಶಾಂತ್ ಮುತ್ತಣ್ಣ ತಿಳಿಸಿದ್ದಾರೆ.
ಚೌಡ್ಲು ಸಾಂದೀಪನಿ ಶಾಲಾ ಆವರಣ ಹಾಗೂ ಗೌಡಳ್ಳಿ ಶ್ರೀ ನವದುರ್ಗಾ ದೇವಾಲಯ ಆವರಣದಲ್ಲಿ ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆಯವರೆಗೆ ಶಿಬಿರ ನಡೆಯಲಿದೆ. ಡ್ರಾಮಾ ಜೂನಿಯರ್ಸ್, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೆಂಟರ್ಸ್ಗಳು ರಂಗಾಟ, ಅಭಿನಯ, ಚಿತ್ರಕಲೆ, ಕರಕುಶಲತೆ, ಯಕ್ಷಗಾನ, ಮೂಕಾಭಿನಯ, ಜಾನಪದ ಕುಣಿತ ಸೇರಿದಂತೆ ಇನ್ನಿತರ ರಂಗ ತರಬೇತಿ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: ೮೧೨೩೫೫೭೩೦೪, ೭೨೫೯೪೭೯೩೩೧ನ್ನು ಸಂಪರ್ಕಿಸ ಬಹುದೆಂದು ತಿಳಿಸಿದ್ದಾರೆ.