(ಕೆ.ಎಂ. ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಏ. ೧೪: ಶಾಲಾ ಕಟ್ಟಡದ ಮುಂಭಾಗ ಇರುವ ಸಣ್ಣ ಅರಣ್ಯ ಪ್ರದೇಶ, ಒಣಗಿ ನಿಂತಿರುವ ತೇಗದ ಮರದ ನಡುವೆ ಶಾಲಾ ಪುಟಾಣಿಗಳು ಆಟ ಆಡುತ್ತಿದ್ದಾರೆ. ಇವರಿಗೆ ಹಲವು ದಶಕಗಳಿಂದ ಕಾಡೇ ಆಟದ ಮೈದಾನವಾಗಿದೆ.
ಹೌದು ಕ್ರೀಡಾ ಕಲಿಗಳ ನಾಡಿನ ವೀರಾಜಪೇಟೆ ತಾಲೂಕಿನ ಮಾಲ್ದಾರೆ ಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಆಟದ ಮೈದಾನ ವಿಲ್ಲ. ಶಾಲಾ ಕಟ್ಟಡದ ಮುಂಭಾಗ ವಿರುವ ಸಣ್ಣ ಅರಣ್ಯ ಪ್ರದೇಶದಲ್ಲಿ ಆಟ ಆಡಬೇಕಾದ ಪರಿಸ್ಥಿತಿ ಮಕ್ಕಳದ್ದು.
ಕೂಲಿ ಕಾರ್ಮಿಕರು ಹಾಗೂ ಆದಿವಾಸಿಗಳ ಮಕ್ಕಳೇ ಹೆಚ್ಚಿನ ಸಂಖ್ಯೆ ಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಾಲ್ದಾರೆ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.
ಆದರೆ ಸರ್ಕಾರ ಇದುವರೆಗೆ ಆಟದ ಮೈದಾನ ವ್ಯವಸ್ಥೆ ಮಾಡದೇ ನಿರ್ಲಕ್ಷö್ಯ ತೋರಿದೆ.
ಮಾಲ್ದಾರೆ ಗ್ರಾಮದ ಸಾರ್ವಜನಿಕÀರಿಗೂ ಇದೇ ಶಾಲೆಯ ಮುಂಭಾಗ ವಿರುವ ಅರಣ್ಯ ಪ್ರದೇಶವೇ ಆಟದ ಮೈದಾನವಾಗಿದೆ.
ಒಣಗಿ ನಿಂತಿರುವ ತೇಗದ ಮರದ ನಡುವೆ ಆಡುತ್ತಿರುವ ವಿದ್ಯಾರ್ಥಿಗಳು!
ಶಾಲಾ ಮುಂಭಾಗದಲ್ಲಿರುವ ಸಣ್ಣ ಅರಣ್ಯ ಪ್ರದೇಶದಲ್ಲಿ ವಿದ್ಯಾರ್ಥಿಗಳು ಆಟ ಆಡುತ್ತಿದ್ದಾರೆ. ಮಕ್ಕಳು ಭಯದಲ್ಲೇ ಆಟ ಆಡಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ. ಇಂದೋ, ನಾಳೆಯೋ ತೇಗದ ಮರಗಳು ಒಣಗಿ ಬೀಳುವ ಪರಿಸ್ಥಿತಿ ಇದೆ. ಮೈದಾನವೂ ಇಲ್ಲ, ಆಟ ಆಡುತ್ತಿರುವ ಸಣ್ಣ ಅರಣ್ಯ ಪ್ರದೇಶದಲ್ಲಿನ ಒಣಗಿರುವ ತೇಗದ ಮರಗಳನ್ನು ತೆರವುಗೊಳಿಸಲು ಹಲವು ಬಾರಿ ಮನವಿ ಸಲ್ಲಿಸಿದರೂ ಸಹ ಇಂದಿಗೂ ಕೂಡ ಅರಣ್ಯ ಇಲಾಖೆ ಇತ್ತ ತಿರುಗಿ ನೋಡೇ ಇಲ್ಲ.
ಸಣ್ಣ ಅರಣ್ಯ ಪ್ರದೇಶದಲ್ಲಿನ ಸಣ್ಣ ಮೈದಾನದಲ್ಲಿ ಎಲ್ಲಾ ಆಟೋಟಗಳನ್ನು ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ತಾಲೂಕು ಹಾಗೂ ಜಿಲ್ಲಾಮಟ್ಟದ ಕ್ರೀಡಾಕೂಟಗಳಲ್ಲಿ ಸೂಕ್ತ ಮೈದಾನದ ಕೊರತೆಯಿಂದ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಕಾಡು ಪ್ರಾಣಿಗಳ ಭಯ, ರಸ್ತೆ ದಾಟುವಾಗ ಅಪಘಾತದ ಭಯ!
ಇರುವ ಸಣ್ಣ ಅರಣ್ಯ ಪ್ರದೇಶವನ್ನು ಕಚ್ಚಾ ಮೈದಾನವನ್ನಾಗಿ ರೂಪಿಸಿ ಆಟ ಆಡುತ್ತಿರುವ ಮಾಲ್ದಾರೆ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳು ಕಾಡು ಪ್ರಾಣಿಗಳ ಭಯದ ನಡುವೆಯೇ ಆಟ ಆಡುತ್ತಿದ್ದಾರೆ.
ಮಾಲ್ದಾರೆ ಭಾಗದಲ್ಲಿ ಕಾಡಾನೆ ಹಾಗೂ ಹುಲಿಗಳ ಹಾವಳಿ ಹೆಚ್ಚಿದೆ. ಯಾವ ಸಮಯದಲ್ಲಿ ಅರಣ್ಯ ಪ್ರದೇಶ ದಿಂದ ಕಾಡು ಪ್ರಾಣಿಗಳು ಹಾವಳಿ ನಡೆಸುತ್ತೋ ಎಂಬ ಭಯದಲ್ಲಿಯೇ ಕಳೆದ ಅನೇಕ ವರ್ಷಗಳಿಂದ ಮೈದಾನದಲ್ಲಿ ಆಟ ಆಡುತ್ತಿದ್ದಾರೆ.
ಮತ್ತೊಂದೆಡೆ ಆಟದ ಮೈದಾನವಾಗಿರುವ ಕಾಡಿನ ಪಕ್ಕದಲ್ಲೇ ರಸ್ತೆಗಳು ಹಾದುಹೋಗಿವೆೆ. ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ವಿದ್ಯಾರ್ಥಿಗಳು ಆಟ ಆಡುವಾಗ ಬಾಲ್ ರಸ್ತೆ ಭಾಗಕ್ಕೆ ಹೋದರೆ, ಅರ್ಧ ಗಂಟೆಗೂ ಹೆಚ್ಚು ಸಮಯ ಕಾದು ನಿಂತಿರುವ ಸನ್ನಿವೇಶ ಕೂಡ ಇದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ರಸ್ತೆ ಬದಿಯಲ್ಲಿರುವ ಬಾಲ್ ತೆಗೆಯಲು ವಿದ್ಯಾರ್ಥಿಗಳು ತೆರಳಿದರೆ ಅಪಘಾತ ಸಂಭವಿಸುವ ಸಾಧ್ಯತೆ ಗಳಿವೆ. ಆಟ ಆಡಲು ಮೈದಾನವೇ ನಮ್ಮ ಶಾಲೆಯಲ್ಲಿ ಇಲ್ಲ. ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಕೂಡ ಸಾಧ್ಯವಾಗುತ್ತಿಲ್ಲ. ಇತರೆ ಶಾಲಾ ಮಕ್ಕಳಂತೆ ನಮಗೂ ಆಟ ಆಡಲು ಆಸೆ ಇಲ್ವಾ! ಕಾಡಿನಲ್ಲಿ ಬೆಳೆದು ನಿಂತಿರುವ ಗಿಡಗಂಟಿ ಗಳನ್ನು ಕಡೆದು ಆಡುತ್ತಿದ್ದೇವೆ. ಅರಣ್ಯದ ಪಕ್ಕದಲ್ಲೇ ರಸ್ತೆ ಇದೆ ಹಾಗೂ ಕಂದಕವನ್ನು ತೋಡಿರು ವುದರಿಂದ ಭಯದಲ್ಲೇ ನಾವು ಆಟ ಆಡುತ್ತಿದ್ದೇವೆ ಎಂದು ಶಕ್ತಿಯೊಂದಿಗೆ ವಿದ್ಯಾರ್ಥಿಯೊಬ್ಬ ಮಾಹಿತಿ ಹಂಚಿಕೊAಡರು.
ಗ್ರಾಮದ ಯುವಕರಿಗೂ ಇದೇ ಮೈದಾನ
ಮಾಲ್ದಾರೆಯಲ್ಲಿ ಶಾಲಾ ಮಕ್ಕಳಿಗೆ ಮಾತ್ರವಲ್ಲ, ಗ್ರಾಮದ ಯುವಕರಿಗೂ ಕಾಡೇ ಆಟದ ಮೈದಾನವಾಗಿದೆ. ಇಲ್ಲಿಯೇ ಸಣ್ಣಪುಟ್ಟ ಕ್ರೀಡಾಕೂಟಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದಾರೆ. ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸುವಾಗ ಮೈದಾನ ಬದಿಯಲ್ಲೇ ಹಾದು ಹೋಗಿರುವ ರಸ್ತೆಯಲ್ಲಿ ಫೀಲ್ಡ್ರುಗಳು ನಿಂತಿರುತ್ತಾರೆ. ಸಾರ್ವಜನಿಕರು ರಸ್ತೆಯ ಬದಿಯಲ್ಲಿ ಆಟ ವೀಕ್ಷಣೆ ಮಾಡುತ್ತಿರುತ್ತಾರೆ. ವಾಹನಗಳಿಗೆ ಕ್ರೀಡಾಕೂಟದಿಂದ ತೊಂದರೆಯಾಗದAತೆ ಆಯೋಜಕರು ಟ್ರಾಫಿಕ್ ಪೊಲೀಸ್ ಮಾದರಿಯಲ್ಲಿ ಕಾರ್ಯನಿರ್ವಹಿಸಿ, ಅತ್ಯಂತ ಕಷ್ಟದಲ್ಲೇ ಆಟ ಆಡುತ್ತಿದ್ದಾರೆ. ಏತನ್ಮಧ್ಯೆ ಆಟ ಆಡುತ್ತಿರುವಾಗ ಕಂದಕದೊಳಗೆ ಬಾಲ್ ಹೋದರೆ, ಅರ್ಧಗಂಟೆಗೂ ಅಧಿಕ ಸಮಯ ಬಾಲ್ ಹುಡುಕಲು ಬೇಕಾಗುತ್ತದೆ. ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಾಲ್ದಾರೆಯಲ್ಲಿ ಆಟದ ಮೈದಾನದ ವ್ಯವಸ್ಥೆ ಮಾಡದಿದ್ದಲ್ಲಿ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಗ್ರಾಮದ ಯುವಕರು ತೀರ್ಮಾನ ಕೈಗೊಂಡಿ ದ್ದರು. ಜನಪ್ರತಿನಿಧಿಗಳ ಭರವಸೆ ಹಿನ್ನೆಲೆ ಚುನಾವಣಾ ಬಹಿಷ್ಕಾರ ಹಿಂಪಡೆದಿದ್ದರು. ಆದರೂ ಕೂಡ ಇದುವರೆಗೆ ಮಾಲ್ದಾರೆಯಲ್ಲಿ ಮೈದಾನ ವ್ಯವಸ್ಥೆ ಆಗಲಿಲ್ಲ.