ಭಾಗಮAಡಲ, ಏ. ೧೪: ಇಲ್ಲಿನ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಕುದುಕುಳಿ ಕ್ರಿಕೆಟ್ ಸಮಿತಿ ಆಯೋಜಿಸಿದ ಗೌಡ ಕುಟುಂಬಗಳ ನಡುವಿನ ಕುದುಕುಳಿ ಐನ್‌ಮನೆ ಕ್ರಿಕೆಟ್ ಕಪ್‌ನಲ್ಲಿ ಪರ್ಲಕೋಟಿ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.

ಅಂತಿಮ ಪಂದ್ಯದಲ್ಲಿ ಪರ್ಲಕೋಟಿ ಮತ್ತು ಹೊಸೊಕ್ಲು ತಂಡಗಳ ನಡುವೆ ಸೆಣೆಸಾಟ ನಡೆಯಿತು. ಪರ್ಲಕೋಟಿ ತಂಡವು ಆರಂಭಿಕ ಉತ್ತಮ ಪ್ರದರ್ಶನ ನೀಡಿತು. ಮಧ್ಯದಲ್ಲಿ ರನ್ ಗಳಿಕೆ ಕಡಿಮೆಯಾದರೂ ಅಂತ್ಯದಲ್ಲಿ ಚೇತರಿಸಿಕೊಂಡು ಉತ್ತಮ ಪ್ರದರ್ಶನ ನೀಡಿತು. ೧೦ ಓವರ್‌ನಲ್ಲಿ ೧೦೪ ರನ್ ಗಳಿಸಿ ಎದುರಾಳಿ ತಂಡಕ್ಕೆ ಸವಾಲು ನೀಡಿತು. ನಂತರ ಬೌಲಿಂಗ್ ಮೂಲಕ ಎದುರಾಳಿ ಹೊಸೊಕ್ಲು ತಂಡವನ್ನು ಕೇವಲ ೫೪ ರನ್‌ಗಳಿಗೆ ಕಟ್ಟಿ ಹಾಕಿತು. ಹೊಸೊಕ್ಲು ತಂಡ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಹೊಸೊಕ್ಲು ತಂಡ ೭೨ ರನ್ ಕಲೆ ಹಾಕಿತು. ಎಡಿಕೇರಿ ತಂಡವು ೩೧ ರನ್ ಸೇರಿಸಿ ೯ ವಿಕೆಟ್ ನಷ್ಟಕ್ಕೆ ೬೧ ರನ್‌ಗಳ ಸೋಲನ್ನು ಅನುಭವಿಸಿತು.

ಎರಡನೇ ಸೆಮಿಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಪರ್ಲ ಕೋಟಿ ತಂಡ ೭ ವಿಕೆಟ್ ನಷ್ಟಕ್ಕೆ ೮೫ ರನ್ ಗಳಿಸಿತು. ಪರ್ಲಕೋಟಿ ಮತ್ತು ಪುದಿನೆರವನ ತಂಡಗಳ ನಡುವಿನ ಈ ರೋಚಕ ಪಂದ್ಯದಲ್ಲಿ ಉತ್ತಮವಾಗಿ ಆಡಿದ ಪುದಿನೆರವನ ತಂಡ ೮೪ ರನ್ ಗಳಿಸಿ ಒಂದು ರನ್‌ಗಳ ವಿರೋಚಿತ ಸೋಲನ್ನು ಅನುಭವಿಸಿತು.

ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಎಡಿಕೇರಿ ತಂಡವು ಮೊದಲು ಬ್ಯಾಟ್ ಮಾಡಿ ಐದು ವಿಕೆಟ್ ನಷ್ಟಕ್ಕೆ ೪೭ ರನ್ ಗಳಿಸಿದರೆ ಪುದಿನೆರವನ ತಂಡ ಮೂರು ವಿಕೆಟ್ ನಷ್ಟಕ್ಕೆ ೫೧ ರನ್ ಮಾಡಿ ಮೂರನೇ ಸ್ಥಾನ ಗಳಿಸಿತು. ಎಡಿಕೇರಿ ೪ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕುದುಕುಳಿ ಕುಟುಂಬದ ಪಟ್ಟೆದಾರ ಕುದುಕುಳಿ ಯು. ಕೃಷ್ಣಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್ ಮಾತನಾಡಿ, ಆಟೋಟಗಳ ಮೂಲಕ ಜನಾಂಗ ಬಾಂಧವÀರು ಒಗ್ಗೂಡುವಂತಾಗಿದೆ.

(ಮೊದಲ ಪುಟದಿಂದ) ಜನಾಂಗ ಬಾಂಧವರ ನಡೆಯುವ ಈ ಕ್ರೀಡಾಕೂಟಗಳಿಂದ ಸಾಮರಸ್ಯ ವೃದ್ಧಿಸುತ್ತದೆ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕ, ಸ್ಥಳೀಯ ಕ್ರೀಡಾಕೂಟಗಳಿಂದ ಯುವ ಜನಾಂಗಕ್ಕೆ ಸ್ಪೂರ್ತಿ ದೊರಕುವಂತಾಗಿದೆ ಎಂದರು.

ಚೇರAಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ಮಾತನಾಡಿ, ಗೌಡ ಜನಾಂಗಗಳ ನಡುವಿನ ೧೦ ದಿನಗಳ ಕ್ರಿಕೆಟ್ ಹಬ್ಬ ಅದ್ಧೂರಿಯಿಂದ ನಡೆದಿದೆ ಕ್ರೀಡೆ ನಡೆಸುವುದು ದೊಡ್ಡದಲ್ಲ. ಕ್ರೀಡಾಕೂಟಕ್ಕೆ ಆರ್ಥಿಕ ನೆರವು ಅಗತ್ಯ ಈಚೆಗೆ ಯುವಕ ಯುವತಿಯರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಮುಂದೆ ಬರುತ್ತಿದ್ದಾರೆ. ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದುದು ಅಗತ್ಯವಾಗಿದೆ. ಗೌಡ ಜನಾಂಗದವರು ಇಂದು ಎಲ್ಲಾ ರಂಗದಲ್ಲೂ ಮುಂದುವರೆಯುತ್ತಿದ್ದಾರೆ. ಶಿಸ್ತು ಬದ್ಧತೆಯನ್ನು ಇಂದಿನ ಯುವಜನರು ರೂಡಿಸಿಕೊಳ್ಳಬೇಕು. ಮಕ್ಕಳಿಗೆ ಶಿಸ್ತನ್ನು ಕಲಿಸುವುದು ಪೋಷಕರ ಜವಾಬ್ದಾರಿ ಆಗಿದೆ ಎಂದರು.

ಈ ಸಂದರ್ಭ ಸಮಿತಿ ವತಿಯಿಂದ ಕುದುಕುಳಿ ಕುಟುಂಬದ ಪಟ್ಟೆದಾರ ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಭಾಗಮಂಡಲ ಗೌಡ ಸಮಾಜದ ಅಧ್ಯಕ್ಷ ಕುದುಪಜೆ ಪಳಂಗಪ್ಪ, ಕುದುಕುಳಿ ಜಗದೀಶ್, ಕೆದಂಬಾಡಿ ವಿಶುಕುಮಾರ್ ಉಪಸ್ಥಿತರಿದ್ದರು.

ಕುದುಕುಳಿ ಕಿಶೋರ್ ಸ್ವಾಗತಿಸಿದರು. ಕುದುಕುಳಿ ಚೈತ್ರ ಕಾರ್ಯಕ್ರಮ ನಿರೂಪಿಸಿದರು. -ಕುಯ್ಯಮುಡಿ ಸುನಿಲ್