ಮಡಿಕೇರಿ, ಏ. ೧೪: ಕೆದಂಬಾಡಿ ರಾಮಯ್ಯ ಗೌಡ ಸ್ಮರಣಾರ್ಥ ಹತ್ತು ಕುಟುಂಬ ೧೮ ಗೋತ್ರ ಕೊಡಗು ಮತ್ತು ಸುಳ್ಯ ಅರೆಭಾಷಿಕ ಗೌಡ ಕುಟುಂಬಗಳ ನಡುವಿನ ೨೭ನೇ ವರ್ಷದ ಕೆದಂಬಾಡಿ ಕ್ರಿಕೆಟ್ ಕಪ್-೨೦೨೩ಗೆ ತಾ. ೧೫ರಂದು (ಇಂದು) ಚಾಲನೆ ದೊರೆಯಲಿದೆ.
ಬೆಳಿಗ್ಗೆ ೮.೧೫ ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಕೆದಂಬಾಡಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಕೀರ್ತಿಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ, ಸಂಶೋಧಕ ಕುಡೆಕಲ್ಲು ವಿದ್ಯಾಧರ, ಮಕ್ಕಳ ತಜ್ಞ ಮೆ. ಡಾ|| ಕುಶ್ವಂತ್ ಕೋಳಿಬೈಲ್, ಕೆದಂಬಾಡಿ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೆ.ಎಸ್. ಜಯಪ್ರಕಾಶ್, ಅಂತರರಾಷ್ಟಿçÃಯ ಅಥ್ಲೆಟ್ ಸೂದನ ಡಾಲಿ, ಭಾಗಮಂಡಲ ಪೊಲೀಸ್ ಉಪ ನಿರೀಕ್ಷಕ ಪ್ರಿಯಾಂಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇಂದಿನಿAದ ತಾ. ೨೫ರ ತನಕ ಚೆಟ್ಟಿಮಾನಿ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.