ಮಡಿಕೇರಿ, ಏ. ೧೩: ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಆರು ಬ್ಲಾಕ್ ಹಾಗೂ ೨೭೩ ಮತಗಟ್ಟೆಗಳ ಪದಾಧಿಕಾರಿಗಳಿಗೆ ವಲಯ ಅಧ್ಯಕ್ಷರುಗಳಿಗೆ ಕೆಪಿಸಿಸಿಯ ನುರಿತ ತರಬೇತುದಾರರಿಂದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬ್ಲಾಕ್ ಅಧ್ಯಕ್ಷ ನೇತೃತ್ವದಲ್ಲಿ ಪ್ರಚಾರ ಸಮಿತಿಯ ಸಹಯೋಗದೊಂದಿಗೆ ಪಕ್ಷ ಸಂಘಟನೆ ಹಾಗೂ ಚುನಾವಣೆ ಎದುರಿಸುವ ಬಗ್ಗೆ ತರಬೇತಿ ನಡೆಯಲಿದೆ. ತಾ. ೧೫ ರ ಬೆಳಿಗ್ಗೆ ೧೦ ಗಂಟೆಗೆ ಗೋಣಿಕೊಪ್ಪಲು ಪರಿಮಳ ಕಲ್ಯಾಣ ಮಂಟಪದಲ್ಲಿ ಪೊನ್ನಂಪೇಟೆ ಬ್ಲಾಕ್ ಪದಾಧಿಕಾರಿಗಳಿಗೆ ತರಬೇತಿ ನಡೆಯಲಿದೆ.
ಮಧ್ಯಾಹ್ನ ೧೨.೩೦ ಗಂಟೆಗೆ ವೀರಾಜಪೇಟೆ ಬ್ಲಾಕ್ ಪದಾಧಿಕಾರಿಗಳಿಗೆ ವೀರಾಜಪೇಟೆಯ ಪಕ್ಷದ ಅಭ್ಯರ್ಥಿ ಕಚೇರಿ ಬಳಿ ೩.೩೦ ಗಂಟೆ, ನಾಪೋಕ್ಲು ಬ್ಲಾಕ್ ಪದಾಧಿಕಾರಿಗಳಿಗೆ ಕಾರುಗುಂದದ ಸಹಕಾರ ಸಂಘದ ಸಭಾಂಗಣದಲ್ಲಿ ತರಬೇತಿ ನಡೆಯಲಿದೆ. ಇದರ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಜಿಲ್ಲಾ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರುಗಳು, ಪಕ್ಷದ ನಾಯಕರುಗಳು ಭಾಗವಹಿಸಲಿದ್ದಾರೆ. ತಾ. ೧೯ರ ನಂತರ ಮಡಿಕೇರಿ, ಕುಶಾಲನಗರ, ಸೋಮವಾರಪೇಟೆಯಲ್ಲಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ರಮೇಶ್ ಮಾಹಿತಿಯಿತ್ತರು.
ತಾ. ೧೭ ರಂದು ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ಗೌಡ ಮಧ್ಯಾಹ್ನ ೧೨ ರಿಂದ ೧ ಗಂಟೆ ಒಳಗಾಗಿ ನಾಮಪತ್ರ ಸಲ್ಲಿಸಲಿದ್ದು, ಗಾಂಧಿಮೈದಾನದಲ್ಲಿ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ ೯.೩೦ ಗಂಟೆಗೆ ನಗರದ ಚೌಡೇಶ್ವರಿ ದೇವಾಲಯ ಬಳಿಯಿಂದ ಗಾಂಧಿ ಮೈದಾನದವರೆಗೆ ಮೆರವಣಿಗೆ ನಡೆಯಲಿದೆ ಎಂದರು.
ಕಾಂಗ್ರೆಸ್ನಲ್ಲಿ ಉದ್ಭವಿಸಿರುವ ಬಂಡಾಯ ಸ್ಪರ್ಧೆಗೆ ಸಂಬAಧಿಸಿದAತೆ ಪ್ರತಿಕ್ರಿಯಿಸಿದ ಅವರು, ಎಲ್ಲವನ್ನೂ ಸರಿಪಡಿ ಸಲಾಗುತ್ತದೆ ಎಂದು ಹೇಳಿದರು.
ಕೆಪಿಸಿಸಿ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ ಮಾತನಾಡಿ, ವೀರಾಜಪೇಟೆ ಕ್ಷೇತ್ರದಲ್ಲಿ ಕಳೆದ ೨೦ ವರ್ಷಗಳಿಂದ ಯಾವುದೇ ಅಭಿವೃದ್ಧಿ ಆಗಿಲ್ಲ. ಈ ಬಾರಿ ಮತದಾರರು ಕಾಂಗ್ರೆಸ್ಗೆ ಬೆಂಬಲಿಸಲಿದ್ದಾರೆ ಎಂದರು. ತಾ. ೧೮ ರಂದು ಬೆಳಿಗ್ಗೆ ೧೧.೩೦ ಗಂಟೆಗೆ ವೀರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ನಾಮಪತ್ರ ಸಲ್ಲಿಸಲಿದ್ದು, ಅದೇ ದಿನ ಸೆರಿನಿಟಿ ಹಾಲ್ನಲ್ಲಿ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಬೃಹತ್ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯ ನಾಪೋಕ್ಲು ಬ್ಲಾಕ್ ಸಂಯೋಜಕ ಬಿ. ಶರಿ ಗಿರೀಶ್, ವೀರಾಜಪೇಟೆ ಕ್ಷೇತ್ರ ಸಂಯೋಜಕ ಕೊಲ್ಯದ ಗಿರೀಶ್, ವೀರಾಜಪೇಟೆ ಬ್ಲಾಕ್ ಸಂಯೋಜಕ ಹನೀಫ್, ಪೊನ್ನಂಪೇಟೆ ಬ್ಲಾಕ್ ಸಂಯೋಜಕ ಮತ್ರಂಡ ದಿಲ್ಲು ಉಪಸ್ಥಿತರಿದ್ದರು.