ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಯ ಕುರಿತು ‘ಶಕ್ತಿ’ಯು ಶಾಲಾ ವಿದ್ಯಾರ್ಥಿಗಳಿಂದ ಬರಹ ಆಹ್ವಾನಿಸಿದಾಗ ಅನೇಕರು ಸ್ಪಂದಿಸಿದ್ದಾರೆ. ವಿಜೇತರುಗಳ ವಿವರವನ್ನು ಇಲ್ಲಿ ಕೊಡಲಾಗಿದ್ದು, ಆಯ್ದ ಬರಹಗಳನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. - ಸಂ

ಪ್ರಥಮ

‘ನೊAದ ಸಮುದಾಯಗಳ ಧ್ವನಿ’

ಡಾ. ಬಿ.ಆರ್. ಅಂಬೇಡ್ಕರ್ (೧೮೯೧-೧೯೫೯) ಓರ್ವ ಅದ್ಭುತ ಕ್ರಿಯಾಶೀಲ ಪ್ರತಿಭೆ. ಶತಮಾನಗಳಿಂದ ನೊಂದಿದ್ದ ಕೆಲವು ಸಮುದಾಯಗಳಿಗೆ ಧ್ವನಿಯಾದವರು. ಅವರಲ್ಲಿ ಸ್ವಾಭಿಮಾನ ಹಾಗೂ ಆತ್ಮವಿಶ್ವಾಸ ತುಂಬಿದವರು. ಶೋಷಿತ ಸಮುದಾಯಗಳಿಗೆ ನಿಜವಾದ ಅರ್ಥದಲ್ಲಿ ಸ್ವಾತಂತ್ರö್ಯ ಗಳಿಸಲು ದಾರಿ ತೋರಿದವರು.

ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಜನಪ್ರಿಯರಾಗಿದ್ದರು. ಅವರು ನ್ಯಾಯಶಾಸ್ತçಜ್ಞ, ಸಮಾಜ ಸುಧಾರಕ ಮತ್ತು ರಾಜಕಾರಣಿ. ಅವರನ್ನು ಭಾರತೀಯ ಸಂವಿಧಾನದ ಪಿತಾಮಹ ಎಂದೂ ಕರೆಯಲಾಗುತ್ತದೆ. ಇವರು ಒಬ್ಬ ಪ್ರಸಿದ್ಧ ರಾಜಕಾರಣಿ ಮತ್ತು ಖ್ಯಾತ ನ್ಯಾಯಶಾಸ್ತçಜ್ಞರಾಗಿದ್ದರು. ಅಸ್ಪೃಶ್ಯತೆ ಮತ್ತು ಜಾತಿ ನಿರ್ಬಂಧಗಳAತಹ ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆ ಮಾಡಲು ಅಂಬೇಡ್ಕರ್ ಅವರು ಪಟ್ಟ ಶ್ರಮ ಸದಾ ಸ್ಮರಣೀಯವಾದದ್ದು.

ಅವರು ತಮ್ಮ ಜೀವನದುದ್ದಕ್ಕೂ ಶೋಷಿತರ ಹಕ್ಕುಗಳಿಗಾಗಿ ಹೋರಾಡಿದವರು. ಜವಾಹರಲಾಲ್ ನೆಹರು ಅವರ ಸಂಪುಟದಲ್ಲಿ ಅಂಬೇಡ್ಕರ್ ಅವರು ಭಾರತದ ಮೊದಲ ಕಾನೂನು ಸಚಿವರಾಗಿ ನೇಮಕಗೊಂಡರು. ಅವರಿಗೆ ಮರಣೋತ್ತರವಾಗಿ ೧೯೯೦ ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ವನ್ನು ಘೋಷಿಸಲಾಯಿತು.

ಡಾ. ಅಂಬೇಡ್ಕರ್ ಅವರನ್ನು ಆಗಸ್ಟ್ ೨೯, ೧೯೪೭ ರಂದು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಸಮಾಜದ ಎಲ್ಲಾ ವರ್ಗಗಳ ನಡುವಿನ ಭಿನ್ನಾಭಿಪ್ರಾಯ ಸರಿ ಮಾಡದಿದ್ದರೆ ದೇಶದ ಏಕತೆಯನ್ನು ಕಾಪಾಡುವುದು ಕಷ್ಟ ಎಂದು ದ್ವಿತೀಯ

‘ಶೋಷಿತ ಸಮುದಾಯದ ಆಶಾಕಿರಣ’

ಬಾಬಾ ಸಾಹೇಬ್ ಅಂಬೇಡ್ಕರ್ ಭಾರತದ ಬೆಳಕು. ದೇಶದ ಸಮಸ್ತ ಶೋಷಿತ ಸಮುದಾಯದ ಆಶಾಕಿರಣ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟçವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತ ದೇಶದ ಸಂವಿಧಾನ ಶಿಲ್ಪಿ.

ಏಪ್ರಿಲ್ ೧೪ ಅಂಬೇಡ್ಕರ್ ಅವರ ಜನ್ಮದಿನವಾಗಿದೆ. ಅಂಬೇಡ್ಕರ್ ಅವರ ಆದರ್ಶ ಆಶಯಗಳನ್ನು ತಳ ಸಮುದಾಯಗಳು ಅರ್ಥಪೂರ್ಣವಾಗಿ ಅರಿತುಕೊಂಡು ಜನ್ಮದಿನ ಆಚರಿಸಬೇಕು ಎಂಬುದು ಅಂಬೇಡ್ಕರ್ ಅವರ ಅಭಿಲಾಷೆಯಾಗಿತ್ತು. ಅವರ ಅಭಿಲಾಷೆಯನ್ನು ಈಡೇರಿಸುವುದು ಇಂದಿನ ಪೀಳಿಗೆಯ ಕರ್ತವ್ಯ ಕೂಡ ಆಗಿದೆ. ಮೇಲು-ಕೀಳು, ಬಡವ-ಬಲ್ಲಿದ, ಪುರುಷ-ಸ್ತಿçà ಎನ್ನುವ ಅಸಮಾನತೆಯ ಸಮಾಜವನ್ನು ಅಂಬೇಡ್ಕರ್ ಕಟುವಾಗಿ ವಿರೋಧಿಸುತ್ತಿದ್ದರು. ಭಾರತೀಯರಾದ ನಾವೆಲ್ಲರೂ ಒಂದೇ ಎನ್ನುವುದು ಅಂಬೇಡ್ಕರ್ ಅವರ ಮಂತ್ರವಾಗಿತ್ತು. ಡಾ. ಬಿ.ಆರ್. ಅಂಬೇಡ್ಕರ್ ಅವರು ಓರ್ವ ಮಹಾಚೇತನ, ಭಾರತದ ಸಾಮಾಜಿಕ ಚಿಂತಕರಾಗಿ, ವಿದ್ವಾಂಸರಾಗಿ, ಶೋಷಿತರ ಪರ ಹೋರಾಟಗಾರರಾಗಿ ಮತ್ತು ಸಾಮಾಜಿಕ ಸಮಾನತೆಗಾಗಿ ಅವರು ನಡೆಸಿದ ಹೋರಾಟಗಳು ಚರಿತ್ರಾರ್ಹವಾಗಿವೆ. ಭಾರತದ ಸಂವಿಧಾನದಲ್ಲಿ ಒಬ್ಬ ವ್ಯಕ್ತಿ ಒಂದು ಮೌಲ್ಯ ಮತ್ತು ‘ಒಬ್ಬ ವ್ಯಕ್ತಿ ಒಂದು ಮತ’ ತತ್ವವನ್ನು ಅಡಕ ಮಾಡಲಾಗಿದೆ. ಇದರಿಂದ ಒಬ್ಬ ವ್ಯಕ್ತಿ ಸಮಾಜದಲ್ಲಿ ಕಾನೂನಿನ ಅಡಿಯಲ್ಲಿ ಸಮಾನತೆಗೆ ಬದ್ಧನಾಗುತ್ತಾನೆ. ಇದರಿಂದಾಗಿ ಸಾಮಾಜಿಕ ಸಮಾನತೆ ಸಾಧಿಸಿದಂತಾಗಿದೆ. ಸಾಮಾಜಿಕ ಕಾರ್ಯಕರ್ತರಾಗಿ, ರಾಜಕೀಯ ಚಿಂತಕರಾಗಿ, ಬರಹಗಾರರಾಗಿ ಮತ್ತು ಶಿಕ್ಷಣ ತಜ್ಞರಾಗಿ ಸಾರ್ವಜನಿಕ ಸೇವಾ ಕಾರ್ಯವನ್ನು ಅಂಬೇಡ್ಕರ್ ಕೈಗೊಂಡಿದ್ದರು. ಶೋಷಿತರ ಏಳಿಗೆಗಾಗಿ ‘ಬಹಿಷ್ಕೃತ ಹಿತಕಾರಣಿ ಸಭಾ’ವನ್ನು ಅವರು ಪ್ರಾರಂಭಿಸಿದರು. ಅಲ್ಲಿಯೇ ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಬೀಜಗಳು ಕುಡಿಯೊಡೆದವು. ‘ನಿಖರ ನಿರ್ದಿಷ್ಟವಾದ ಸ್ವಾತಂತ್ರö್ಯ, ಸಮಾನತೆ, ಸೋದರತೆಯ ತತ್ವ ತಳಹದಿಯ ಮೇಲೆ ಕಟ್ಟಲ್ಪಟ್ಟ ಸಮಾಜವೇ ಒಂದು ಆದರ್ಶ ಸಮಾಜವಾಗಿ ನಿಲ್ಲಲು ಸಾಧ್ಯ’ ಎಂದವರು ಡಾ. ಬಿ.ಆರ್. ಅಂಬೇಡ್ಕರ್.

- ನವ್ಯಶ್ರೀ ಆರ್.ಕೆ., ೮ನೇ ತರಗತಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೂಡಿಗೆ, ಸೋಮವಾರಪೇಟೆ ತಾಲೂಕು. ಮೊ. ೯೭೪೦೧೨೧೫೧೭.ತೃತೀಯ

‘ಸಮಾನತೆಯ ಹರಿಕಾರ’

ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ, ದೇಶದ ಮೊದಲ ಕಾನೂನು ಸಚಿವರು, ಉತ್ತಮ ವಕೀಲ, ಸಮಾಜ ಸೇವಕ, ರಾಜಕಾರಣಿ, ಲೇಖಕ, ಶಿಕ್ಷಣತಜ್ಞ, ದೇಶ ಕಂಡ ಮಹಾನ್ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ್.

ಪ್ರತಿ ವರ್ಷ ಏಪ್ರಿಲ್ ೧೪ ರಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ಭಾರತದಲ್ಲಿ ಸಮಾನತೆ ದಿನ ಮತ್ತು ಜ್ಞಾನ ದಿನ ಎಂದೂ ಕರೆಯಲಾಗುತ್ತದೆ.

ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಇಂದಿಗೂ ಯುವಜನತೆಗೆ ಸ್ಫೂರ್ತಿ ನೀಡುತ್ತಲೇ ಇವೆ. ಅಂಬೇಡ್ಕರ್ ಸಾಮಾಜಿಕ ಸಮಾನತೆಗಾಗಿ ಹೋರಾಡಿದವರು. ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು ಭಾರತದ ಸಂವಿಧಾನದ ಶಿಲ್ಪಿ ಎಂದು ಕರೆಯಲಾಗುತ್ತದೆ.

‘ಸೋಲದೆ ಗೆದ್ದರೆ ಮಂದಹಾಸ... ಸೋತು ಗೆದ್ದರೆ ಇತಿಹಾಸ...’

‘ನಿಮಗೆ ಗೌರವ ಸಿಗದೇ ಇರುವ ಜಾಗದಲ್ಲಿ ನಿಮ್ಮ ಚಪ್ಪಲಿಯನ್ನೂ ಸಹ ಬಿಡಬೇಡಿ’

‘ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು’

‘ಶಿಕ್ಷಣ ಎನ್ನುವಂತಹದ್ದು ಪುರುಷರಿಗೆ ಎಷ್ಟು ಮುಖ್ಯವೋ, ಮಹಿಳೆಯರಿಗೂ ಅಷ್ಟೇ ಮುಖ್ಯ’. ಅಂಬೇಡ್ಕರ್ ಅವರ ಈ ರೀತಿಯ ಹಲವಾರು ನುಡಿಗಳು ಇಂದಿಗೂ ಸ್ಮರಿಸಲ್ಪಡುತ್ತವೆ.

ಅಂಬೇಡ್ಕರ್ ಜಯಂತಿಯನ್ನು ಪ್ರತಿ ವರ್ಷವು ಶಾಲಾ-ಕಾಲೇಜುಗಳು, ಸರಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿಯೂ ಆಚರಣೆ ಮಾಡಲಾಗುತ್ತದೆ.

- ಪೂರ್ವಿಕಾ ಕೆ.ಎಸ್., ೯ನೇ ತರಗತಿ, ಶ್ರೀ ಕೃಷ್ಣ ವಿದ್ಯಾಮಂದಿರ ಶಾಲೆ, ಸಿದ್ದಾಪುರ, ಮೊ. ೯೯೭೨೬೩೭೮೫೬.