ನಾಪೋಕ್ಲು, ಏ. ೧೨: ಸಮೀಪದ ಕಕ್ಕಬ್ಬೆ-ಯವಕಪಾಡಿ ಗ್ರಾಮದ ಪೌರಾಣಿಕ ಹಿನ್ನೆಲೆಯ ಆದಿ ಶ್ರೀ ಪನ್ನಂಗಾಲತ್ತಮ್ಮೆ ದೇವಿಯ ವಾರ್ಷಿಕ ಉತ್ಸವವು ಶ್ರದ್ಧಾ ಭಕ್ತಿಯಿಂದ ನಡೆಯಿತು.

ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲ ಯದ ಸಮೀಪವಿರುವ ಅಮ್ಮಂಗೇರಿ ಯಲ್ಲಿ ಶ್ರೀ ದೇವಿಯ ದೇವತಾ ಕೆಲಸಕ್ಕೆ ನಿಯೋಜಿಸಲ್ಪಟ್ಟ ಕಣಿಯ ಜನಾಂಗದ ವರು ಶುದ್ಧ, ಶ್ರದ್ಧಾಭಕ್ತಿಯಿಂದ ಓಲೆಯಲ್ಲಿ ತಯಾರಿಸಿದ ಎರಡು ಕೊಡೆಗಳನ್ನು ದೈವ ದರ್ಶನ ಹಾಗೂ ಎತ್ತೇರಾಟ, ತಕ್ಕ ಮುಖ್ಯಸ್ಥರು, ಭಕ್ತಾದಿಗಳೊಂದಿಗೆ ಪನ್ನಂಗಾಲತ್ತಮ್ಮೆ ದೇವಸ್ಥಾನಕ್ಕೆ ಮಧ್ಯಾಹ್ನ ತರಲಾಯಿತು.

ಇಲ್ಲಿ ಎರಡು ವರ್ಷಕ್ಕೊಮ್ಮೆ ದೊಡ್ಡ ಹಬ್ಬ ನಡೆಯುತ್ತಿದ್ದು, ಈ ವರ್ಷ ದೊಡ್ಡ ಹಬ್ಬವಾಗಿರುವದರಿಂದ ಅಪರೂಪದ ಕ್ಷಣವನ್ನು ವೀಕ್ಷಿಸಿ ಪುನೀತರಾಗಲು ಭಕ್ತ ಸಾಗರವೇ ಇಲ್ಲಿ ನೆರೆದಿತ್ತು. ಉತ್ಸವಕ್ಕೆ ಸಂಬAಧಿಸಿದAತೆ ತಾ. ೧೩ ರಂದು ದೈವಿಕ ವಿಧಿವಿಧಾನ ಗಳು ನಡೆಯಲಿವೆ. -ದುಗ್ಗಳ