ಸೋಮವಾರಪೇಟೆ, ಏ. ೧೨: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ರೂ. ೨.೫೦ ಕೋಟಿ ವೆಚ್ಚದ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳು ಒಂದೆರಡು ವಾರದಲ್ಲಿ ಪೂರ್ಣಗೊಳ್ಳಲಿವೆ ಎಂದು ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು ಅವರು ತಿಳಿಸಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿ ಯಲ್ಲಿ ಸ್ಪಷ್ಟನೆ ನೀಡಿದ ಅವರು, ಸ್ಥಳೀಯ ನಿವಾಸಿಗಳು ಹಾಗೂ ಆ ವಾರ್ಡ್ನ ಸದಸ್ಯರ ಬೇಡಿಕೆಯಂತೆ ಕಾಮಗಾರಿಗಳನ್ನು ನಿರ್ವಹಿಸಲಾಗಿ ದೆಯೇ ಹೊರತು ಅನವಶ್ಯಕ ಕಾಮಗಾರಿಗಳನ್ನು ನಿರ್ವಹಿಸಿಲ್ಲ ಎಂದರು.
ಪಟ್ಟಣದ ದೇವಾಲಯ ರಸ್ತೆಯ ಮೇಲಿನ ಪೆಟ್ರೋಲ್ ಬಂಕ್ನಿAದ ಸೋಮೇಶ್ವರ ದೇವಾಲಯದವರೆಗಿನ ಕಾಂಕ್ರಿಟ್ ರಸ್ತೆಯನ್ನು ಕಳೆದ ೯ ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಇದರಲ್ಲಿ ಕೆಲ ಭಾಗಗಳು ಗುಂಡಿ ಬಿದ್ದಿದ್ದರಿಂದ ಸಂಪೂರ್ಣವಾಗಿ ಡಾಂಬರು ಹಾಕಿ ಅಭಿವೃದ್ಧಿ ಪಡಿಸಲಾಗಿದೆ. ಇದೀಗ ರಸ್ತೆ ಸುಸ್ಥಿತಿಯಲ್ಲಿದ್ದು, ಸರ್ಕಾರದ ಅನುದಾನವನ್ನು ಸದ್ಬಳಕೆ ಮಾಡಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿದ್ದ ಉಪಾಧ್ಯಕ್ಷ ಬಿ. ಸಂಜೀವ ಮಾತನಾಡಿ, ಬಹುತೇಕ ವಾರ್ಡ್ಗಳಲ್ಲಿ ಕೆಲಸ ಪೂರ್ಣ ಗೊಂಡಿದೆ. ಪಂಚಾಯಿತಿಗೆ ಖಾಯಂ ಅಭಿಯಂತರರು ಇಲ್ಲದೇ ಇರುವುದ ರಿಂದ ಅಭಿವೃದ್ಧಿ ಕಾರ್ಯಗಳಿಗೆ ಕೊಂಚ ಹಿನ್ನಡೆಯಾಗಿದೆ. ಬಗ್ಗೆ ಗಮನ ಹರಿಸಿ ಪ.ಪಂ.ಗೆ ಖಾಯಂ ಅಭಿಯಂತರರನ್ನು ನೇಮಿಸಲು ಕ್ರಮವಹಿಸಬೇಕೆಂದು ಮನವಿ ಮಾಡಿದರು.
ಜನತಾ ಕಾಲೋನಿಯಲ್ಲಿ ಸ್ಲಂ ಬೋರ್ಡ್ನಿಂದ ಬಿಡುಗಡೆಯಾದ ರೂ. ೩೫ ಲಕ್ಷ ಅನುದಾನದಲ್ಲಿ ರಸ್ತೆ, ಚರಂಡಿ, ತಡೆಗೋಡೆ ಕಾಮಗಾರಿಗೆ ಕ್ರಮವಹಿಸಲಾಗಿದೆ. ನಗರೋತ್ಥಾನ ಯೋಜನೆಯಡಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ವಾರ್ಡ್ ಸದಸ್ಯ ಶುಭಕರ್ ತಿಳಿಸಿದರು.
ಹೊಸ ಬಡಾವಣೆಯಲ್ಲಿ ರಸ್ತೆ, ಚರಂಡಿ ಕೆಲಸ ಪೂರ್ಣಗೊಂಡಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಹೇಳಿದರು. ರೇಂಜರ್ ಬ್ಲಾಕ್ನಲ್ಲಿ ಕಳೆದ ೨೦ ವರ್ಷಗಳಿಂದ ಆಗದೇ ಬಾಕಿ ಉಳಿದಿದ್ದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕೆಲವೊಂದು ಭಾಗದಲ್ಲಿ ತಡೆಗೋಡೆ ಕಾಮಗಾರಿ ಆಗಬೇಕಿದ್ದು, ಈ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಸದಸ್ಯ ಜೀವನ್ ಹೇಳಿದರು.
ಪಟ್ಟಣದ ಹೃದಯ ಭಾಗವಾದ ಖಾಸಗಿ ಬಸ್ ನಿಲ್ದಾಣ ಸುತ್ತಮುತ್ತ ಸಮರ್ಪಕವಾದ ಚರಂಡಿ ಇಲ್ಲದೇ ಇರುವುದರಿಂದ ತೀವ್ರ ಸಮಸ್ಯೆಯಾಗಿತ್ತು. ಇದೀಗ ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಸದಸ್ಯ ಬಿ.ಆರ್. ಮಹೇಶ್ ತಿಳಿಸಿದರು.
ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಸಂಬAಧ ಕ್ರಮವಹಿಸಲಾಗಿದೆ. ೧೩ ಕೋಟಿ ವೆಚ್ಚದ ಬೃಹತ್ ಯೋಜನೆ ಸಿದ್ದವಾಗಿದ್ದು, ಶೀಘ್ರದಲ್ಲೇ ಕೆಲಸ ಆರಂಭವಾಗಲಿದೆ. ಇದೀಗ ದುದ್ದುಗಲ್ಲಿನಿಂದ ನೀರು ಸರಬರಾಜಾಗುತ್ತಿದೆ. ಹಾರಂಗಿ ಯೋಜನೆ ನಿರೀಕ್ಷಿತ ಫಲ ನೀಡುತ್ತಿಲ್ಲ. ಈ ಹಿನ್ನೆಲೆ ಮೋಟಾರ್ ದುರಸ್ತಿ, ಪೈಪ್ಲೈನ್ನಲ್ಲಿ ವಾಲ್ ಅಳವಡಿಕೆಗೆ ಕ್ರಮ ವಹಿಸಲಾಗುವುದು ಎಂದು ಅಧ್ಯಕ್ಷ ಪಿ.ಕೆ. ಚಂದ್ರು ಹೇಳಿದರು.