ಸೋಮವಾರಪೇಟೆ, ಏ. ೧೨ : ಇಲ್ಲಿನ ‘ನಾವು ಪ್ರತಿಷ್ಠಾನ’ ವತಿಯಿಂದ ೩ನೇ ವರ್ಷದ ‘ಹಕ್ಕಿಗೊಂದು ಗುಟುಕು ಅಭಿಯಾನ’ ಆರಂಭಗೊAಡಿದ್ದು, ಪಕ್ಷಿಗಳಿಗೆ ನೀರಿನ ಸೌಕರ್ಯ ಒದಗಿಸುವ ಅತ್ಯುತ್ತಮ ೩ ವಿಧಾನಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಪ್ರತಿಷ್ಠಾನದ ಸಂಚಾಲಕ ಗೌತಮ್ ಕಿರಗಂದೂರು ತಿಳಿಸಿದ್ದಾರೆ.

ಪ್ರತಿಷ್ಠಾನದಿಂದ ೩ನೇ ವರ್ಷದ ಅಭಿಯಾನ ನಡೆಸಲಾಗುತ್ತಿದ್ದು, ಪ್ರತಿ ಬೇಸಿಗೆಯಲ್ಲಿ ನೀರಿನ ಮೂಲ ಬತ್ತುವುದರಿಂದ ಹಕ್ಕಿಗಳಿಗೆ ಅವಶ್ಯಕತೆ ಇರುವ ನೀರನ್ನು ಒದಗಿಸಿ ಅವುಗಳನ್ನು ರಕ್ಷಿಸಬೇಕಿದೆ. ಈ ಹಿನ್ನೆಲೆ ಪಕ್ಷಿಗಳಿಗೆ ನೀರಿನ ಸೌಕರ್ಯ ಒದಗಿಸಿರುವ ಬಗ್ಗೆ ಸೆಲ್ಫಿ ಅಥವಾ ಅದರ ಭಾವಚಿತ್ರ ತೆಗೆದು ಮೊ: ೯೮೮೦೦೫೦೮೮೧, ೯೧೬೪೧೩೧೬೩೬ಗೆ ವಾಟ್ಸಾಪ್ ಮಾಡಬಹುದು. ಈ ಚಿತ್ರಗಳನ್ನು ಪಕ್ಷಿತಜ್ಞರು ಪರಿಶೀಲಿಸಲಿದ್ದು, ಆಯ್ದ ಮೂವರಿಗೆ ಬಹುಮಾನ ನೀಡಲಾಗುವುದು.

ಪ್ರತಿ ಬಾರಿ ವಿವಿಧ ರಾಜ್ಯಗಳಿಂದ ಮಕ್ಕಳು, ಪರಿಸರ ಪ್ರೇಮಿಗಳು, ಪಕ್ಷಿ ಪ್ರೇಮಿಗಳು ಅಭಿಯಾನದಲ್ಲಿ ಭಾಗಿಯಾಗುತ್ತಿದ್ದು, ಮೇ ೧೫ರ ಒಳಗೆ ಚಿತ್ರಗಳನ್ನು ವಾಟ್ಸಾಪ್ ಮಾಡಬಹುದು ಎಂದು ಗೌತಮ್ ತಿಳಿಸಿದ್ದಾರೆ.