ಮುಳ್ಳೂರು, ಏ. ೧೨: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ವಾಹನ ತಪಾಸಣೆ ತೀವ್ರಗೊಳಿಸಲಾಗಿದೆ.
ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ಮತ್ತು ಪೊಲೀಸರು ಮತಗಟ್ಟೆ ಪರಿಶೀಲನೆ ಸೇರಿದಂತೆ ವಿವಿಧ ಚೆಕ್ಪೋಸ್ಟ್ಗಳಲ್ಲಿ ತಪಾಸಣಾ ಕಾರ್ಯಾಚರಣೆಯನ್ನು ಬಿಗಿಗೊಳಿಸಲಾಗಿದೆ. ಕೊಡಗು -ಹಾಸನ ಜಿಲ್ಲಾ ಗಡಿ ಭಾಗದಲ್ಲಿರುವ ಶನಿವಾರಸಂತೆ- ಅರಕಲಗೂಡು- ಹಾಸನ ಕಡೆಗೆ ಹೋಗುವ ರಾಜ್ಯ ಹೆದ್ದಾರಿಯ ಹಿಪ್ಪಲಿ ತಪಾಸಣಾ ಗೇಟ್, ಕೊಡ್ಲಿಪೇಟೆಯಿಂದ ಅರಕಲಗೂಡು ಕಡೆಗೆ ತೆರಳುವ ರಸ್ತೆಯ ನಿಲುವಾಗಿಲು ತಪಾಸಣಾ ಗೇಟ್, ಕೊಡ್ಲಿಪೇಟೆಯಿಂದ ಕೆಂಚಮನಕೋಟೆ- ಸಕಲೇಶಪುರಕ್ಕೆ ತೆರಳುವ ರಾಜ್ಯ ಹೆದ್ದಾರಿಯ ಶಾಂತಪುರ ತಪಾಸಣಾ ಗೇಟ್ಗಳಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಹಗಲು ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊಡಗಿನಿಂದ ಹಾಸನ ಕಡೆಗೆ ಹೋಗುವ ಮತ್ತು ಹಾಸನದಿಂದ ಕೊಡಗು ಜಿಲ್ಲೆಗೆ ಪ್ರವೇಶಿಸುವ ವಾಹನಗಳನ್ನು ತಡೆದು ತಪಾಸಣೆ ಮಾಡುತ್ತಿದ್ದಾರೆ. ಕೆಲವು ಚೆಕ್ಪೋಸ್ಟ್ಗಳಲ್ಲಿ ಸಿಬ್ಬಂದಿಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದು ಕಂಡುಬAದಿದೆ.
ಸೆಕ್ಟರ್ ಅಧಿಕಾರಿ ಯಾದವ್ ಬಾಬು, ಉಪ ತಹಶೀಲ್ದಾರ್ ನಾಗರಾಜು, ಗ್ರಾಮ ಆಡಳಿತಾಧಿಕಾರಿ ವಾಣಿ ಹಾಗೂ ಸಿಬ್ಬಂದಿ ವಿವಿಧ ಕಡೆಯ ಮತಗಟ್ಟೆಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.