ಕೂಡಿಗೆ, ಏ. ೧೨ : ಕೊಡಗಿನ ಗಡಿಭಾಗವಾಗಿರುವ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರುವ ಜಿಲ್ಲೆಯ ಏಕೈಕ ಕಾವೇರಿ ಸಮೂಹ ನೇಯ್ಗೆ ಕೇಂದ್ರ ಕಳೆದ ೨೦ ವರ್ಷಗಳಿಂದಲೂ ಮೂಲೆ ಗುಂಪಾಗಿದೆ.
ಈ ನೇಯ್ಗೆ ಕೇಂದ್ರದಲ್ಲಿ ಮೊದಲು ನೂರಾರು ಮಂದಿ ನೇಯ್ಗೆಯಲ್ಲಿ ತೊಡಗಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ೧೦ ಮಂದಿ ಮಾತ್ರ ನೇಯ್ಗೆ ಮಾಡುತ್ತಿದ್ದು, ಇದೀಗ ಇಲಾಖೆಯ ನಿರ್ಲಕ್ಷö್ಯ ಹಾಗೂ ರಾಜ್ಯ ಸರ್ಕಾರದ ನಿಗಮದ ಬೇಜವಾಬ್ದಾರಿಯಿಂದಾಗಿ ಕಳೆದ ಎರಡು ವರ್ಷಗಳಿಂದ ಕೇಂದ್ರದ ಕಾವೇರಿ ಸಮೂಹ ನೇಯ್ಗೆ ಕಾರ್ಯವು ಸಂಪೂರ್ಣ ಸ್ಥಗಿತಗೊಂಡಿದೆ.
ಶಿರAಗಾಲ ನೇಯ್ಗೆ ಕೇಂದ್ರದ ಮೂಲ ಉದ್ದೇಶ ಕೇಂದ್ರದಲ್ಲಿ ಕಚ್ಚಾ ವಸ್ತುಗಳ ಮೂಲಕ ಸಿದ್ದವಾದ ಬೆಡ್ಶೀಟ್ಗಳನ್ನು ತಯಾರಿಸುವುದು, ಸಿದ್ದವಾದ ಬೆಡ್ಶೀಟ್ಗಳಿಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವ ಕಾರಣ ಕೆಲ ವರ್ಷಗಳಿಂದ ಕೆಲಸ ಇಲ್ಲದಾಗಿದೆ ಎಂದು ದುಃಖದ ಮಾತುಗಳಲ್ಲಿ ಸ್ಥಳೀಯರು ಅಭಿಪ್ರಾಯಿಸಿದ್ದಾರೆ.
ಗ್ರಾಮಾಂತರ ಪ್ರದೇಶಗಳಲ್ಲಿ ಯುವಕರು, ಸ್ವ ಉದ್ಯೋಗ ಅವಲಂಬಿಸಲು ಹಾಗೂ ಕಾರ್ಯೋನ್ಮುಖರಾಗಲು ಸರಕಾರ ಅನೇಕ ಯೋಜನೆಯನ್ನು ಕೈಗೊಳ್ಳಲಿದೆ, ಈ ಗ್ರಾಮದಲ್ಲಿ ವಿದ್ಯಾವಂತ ನಿರುದ್ಯೋಗಿ ಯುವಕರು ಬಹು ಜನರಿದ್ದು, ತಮ್ಮ ಬದುಕನ್ನು ಕಟ್ಟಿಕೊಳ್ಳಲು ಈ ನೇಯ್ಗೆ ಕೇಂದ್ರ ಅನುಕೂಲವಾಗಿತ್ತು. ಇದೀಗ ಈ ಬಟ್ಟೆ ಉತ್ಪಾದನಾ ಕೇಂದ್ರವು ಬೀಳುವ ಹಂತ ತಲುಪಿ ದಿನಕಳೆದಂತೆ ದನದ ಕೊಟ್ಟಗೆಯಾಗಿ ಮಾರ್ಪಾಡುಗೊಳ್ಳುತ್ತಿದೆ.
ಜಿಲ್ಲಾ ಇಲಾಖೆಯ ಅಧಿಕಾರಿ, ಅಥವಾ ಕೈಮಗ್ಗ ನಿಗಮದ ರಾಜ್ಯದ ಪದಾಧಿಕಾರಿಗಳು ಇದರತ್ತ ಗಮನ ಹರಿಸದೆ ಇರುವುದರಿಂದಾಗಿ ಯುವಕರು ಕೆಲಸ ನಿಮಿತ್ತ ಬೇರೆ ಜಿಲ್ಲೆಗಳಿಗೆ ಹೋಗುವಂತಹ ಪ್ರಸಂಗ ಎದುರಾಗಿದೆ. ಜಿಲ್ಲೆಯ ಏಕೈಕ ಕೇಂದ್ರವಾಗಿರುವ ಈ ನೇಯ್ಗೆ ಉತ್ಪಾದನಾ ಕೇಂದ್ರವು ಮೊದಲು ಉಪ ಶಾಖೆಗಳನ್ನು ಮಡಿಕೇರಿ, ಕುಶಾಲನಗರದಲ್ಲಿ ಖಾದಿ ವಸ್ತು ಮಾರಾಟ ಕೇಂದ್ರಗಳ ಮೂಲಕ ಹೊಂದಿತ್ತು. ಇದೀಗ ಅವುಗಳೂ ಸಹ ಮುಚ್ಚಿವೆ. ಗ್ರಾಮಾಂತರ ಪ್ರದೇಶದ ಕಾರ್ಮಿಕರಿಗೆ ಅನುಕೂಲವಾಗಿದ್ದು, ಈ ನೇಯ್ಗೆ ಕೇಂದ್ರವನ್ನು ನೆಲಸಮಗೊಳಿಸಿ ನೂತನ ಕಟ್ಟಡವನ್ನು ನಿರ್ಮಾಣ ಮಾಡುವಂತೆ ನೇಕಾರರ ಒಕ್ಕೂಟದ ಅಧ್ಯಕ್ಷ ಪಾಂಡುರAಗ ಒತ್ತಾಯ ಮಾಡಿದ್ದಾರೆ.
ಜಿಲ್ಲೆಯ ಹೆಮ್ಮೆಯ ಕೇಂದ್ರವಾಗಿರುವ ನೇಯ್ಗೆ ಕೇಂದ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡುವಂತೆ ರಾಜ್ಯ ಸರ್ಕಾರದ ಕೈಮಗ್ಗ ನಿಗಮ ಮಂಡಳಿಯ ಅಧ್ಯಕ್ಷರಿಗೆ ಮತ್ತು ಸಂಬAಧಿಸಿದ ಇಲಾಖೆಗೆ ಪತ್ರ ವ್ಯವಹಾರ ಮಾಡಿದ್ದು, ಅದರ ಪರಿಣಾಮವಾಗಿ ರಾಜ್ಯ ಕೈಮಗ್ಗ ನಿಗಮ ಮಂಡಳಿ ಅಧ್ಯಕ್ಷರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ರಾಜ್ಯಮಟ್ಟದಲ್ಲಿ ವ್ಯವಹಾರ ನಡೆಸಿ ೫೦ ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಿತ್ತು. ಆದರೆ ಪೂರ್ಣ ಪ್ರಮಾಣದ ಕಟ್ಟಡ ವನ್ನು ನಿರ್ಮಿಸಲು ಬಿಡುಗಡೆ ಯಾದ ಹಣ ಸಾಕಾಗುವುದಿಲ್ಲ ಎಂಬುದರಿAದಾಗಿ ಇದುವರೆಗೂ ಯಾವುದೇ ಪ್ರಗತಿ ಕೆಲಸಗಳು ಮುಂದುವರೆಯದೆ ಪಾಳುಬಿದ್ದಿವೆ.
ಜಿಲ್ಲಾ ಪಂಚಾಯಿತಿ ವತಿಯಿಂದ ಕಳೆದ ೪ ತಿಂಗಳುಗಳ ಹಿಂದೆ ಕೈಮಗ್ಗ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿದ್ಯುತ್ ಚಾಲಿತ ನೇಯ್ಗೆ ಯಂತ್ರಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡಲಾಗಿದೆ. ಆದರೆ ಫಲಾನುಭವಿ ಗಳಿಗೆ ಇದುವರೆಗೂ ಯಾವುದೇ ರೀತಿಯ ವಿದ್ಯುತ್ ಸಂಪರ್ಕದ ವ್ಯವಸ್ಥೆ ಆಗಿರುವುದಿಲ್ಲ. ಸಂಬAಧಿಸಿದ ಇಲಾಖೆಯವರು ಜಿಲ್ಲೆಯ ಏಕೈಕ ನೇಯ್ಗೆ ಕೇಂದ್ರವನ್ನು ಅಭಿವೃದ್ಧಿಪಡಿಸಿ ಮೂಲ ನೇಕಾರರಿಗೆ ಬೇಕಾಗುವ ಸೌಲಭ್ಯಗಳನ್ನು ಒದಗಿಸಿ ನೇಯ್ಗೆ ಮಾಡಲು ಅನುಕೂಲ ಮಾಡುವಂತೆ ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷ ಟಿ.ಕೆ. ಪಾಂಡುರAಗ ಆಗ್ರಹಿಸಿದ್ದಾರೆ. - ನಾಗರಾಜ ಶೆಟ್ಟಿ