ಕೂಡಿಗೆ, ಏ. ೧೨: ರಾಜ್ಯದಲ್ಲಿ ಪ್ರಥಮವಾಗಿ ಆರಂಭಗೊAಡಿರುವ ಕೂಡಿಗೆ ಕ್ರೀಡಾ ಪ್ರೌಢಶಾಲಾ ಆವರಣದಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸಕ್ಕೆ ಅನುಕೂಲವಾಗುವ ಎಲ್ಲಾ ರೀತಿಯ ವ್ಯವಸ್ಥೆಗಳು ಇರುವುದರಿಂದ ಯುವ ಕ್ರೀಡಾಪಟುಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕ್ರೀಡಾ ಶಾಲಾ ಆವರಣದಲ್ಲಿ ಕ್ರೀಡಾ ಬೇಸಿಗೆ ಶಿಬಿರವನ್ನು ಆರಂಭಿಸುವAತೆ ಈ ಭಾಗದ ಹಿರಿಯ ಕ್ರೀಡಾಪಟುಗಳು ಆಗ್ರಹಿಸಿದ್ದಾರೆ. ಕುಶಾಲನಗರ ತಾಲೂಕು ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈಗಾಗಲೇ ಈ ಕೇಂದ್ರದಲ್ಲಿ ಹಾಕಿ ಮೈದಾನ ಮತ್ತು ಅಥ್ಲೆಟಿಕ್ ಮೈದಾನವು ಸುಸಜ್ಜಿತವಾಗಿರುವುದರಿಂದ ಈ ಕೇಂದ್ರದಲ್ಲಿ ಸಂಬAಧಿಸಿದ ಕ್ರೀಡಾ ತರಬೇತಿಯನ್ನು ಆರಂಭ ಮಾಡಿ ಯುವ ಕ್ರೀಡಾಪಟುಗಳಿಗೆ ತರಬೇತಿಯನ್ನು ಕ್ರೀಡಾಶಾಲಾ ತರಬೇತಿದಾರರು ನೀಡುವಂತೆ ಸಾರ್ವಜನಿಕರು ಮತ್ತು ಕ್ರೀಡಾಪಟುಗಳು ಒತ್ತಾಯಿಸಿದ್ದಾರೆ.