ಮಡಿಕೇರಿ, ಏ. ೧೨: ಕೊಡವ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ನಿಟ್ಟಿನಲ್ಲಿ ತಯಾರದ ಕೊಡವ ಸಿನಿಮಾಗಳಿಗೆ ದೊರಕಬೇಕಾದ ಮನ್ನಣೆ ಸಿಗುತ್ತಿಲ್ಲ. ಸರಕಾರದ ಸಹಾಯಧನವೂ ದೊರೆಯುತ್ತಿಲ್ಲ ಎಂದು ಕೊಡವ ಸಿನಿಮಾದ ನಿರ್ದೇಶಕರು, ನಿರ್ಮಾಪಕರು ಅಸಮಾಧಾನ ವ್ಯಕ್ತಪಡಿಸಿದ್ದು, ಇದನ್ನು ಸರಿಪಡಿಸುವ ಉದ್ದೇಶದಿಂದ ಕೊಡಗು ಚಲನಚಿತ್ರ ಒಕ್ಕೂಟ ರಚನೆಗೆ ತೀರ್ಮಾನಿಸಲಾಗಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಮುಲ್ಲೇಂಗಡ ಮಧೋಷ್ ಪೂವಯ್ಯ, ೧೯೭೨ ರಿಂದ ನಿರ್ಮಾಣಗೊಳ್ಳಲು ಆರಂಭಗೊAಡ ಕೊಡವ ಸಿನಿಮಾ ಕ್ಷೇತ್ರ ೨೦೧೦ರ ಬಳಿಕ ಕ್ಷಿಪ್ರ ಬೆಳವಣಿಗೆ ಸಾಧಿಸುತ್ತಿದೆ. ವರ್ಷಕ್ಕೆ ಸರಿಸುಮಾರು ೫ ರಿಂದ ೬ ಚಿತ್ರಗಳು ಸವಾಲಿನ ನಡುವೆ ಬಿಡುಗಡೆಯಾಗುತ್ತಿವೆ. ಕಷ್ಟಪಟ್ಟು ನಿಯಮಾನುಸಾರವಾಗಿ ತಯಾರಿಸಿದ ಚಲನಚಿತ್ರಗಳು ರಾಜ್ಯ, ರಾಷ್ಟç, ಅಂತರರಾಷ್ಟಿçÃಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುತ್ತಿಲ್ಲ. ಕೊಡವ ಸಂಸ್ಕೃತಿಯನ್ನು ತಿರುಚಿ ಮಾಡಿದ ಸಿನಿಮಾಗಳು ಪ್ರದರ್ಶನ ಕಂಡಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಾದೇಶಿಕ ಭಾಷೆಗಳಲ್ಲಿ ಸಿನಿಮಾ ಹೆಚ್ಚಾಗಬೇಕೆಂಬ ಉದ್ದೇಶದಿಂದ ಸಬ್ಸಿಡಿ, ಪ್ರಶಸ್ತಿ ನೀಡಲಾಗುತ್ತಿದೆ. ಇದು ಅರ್ಹರಿಗೆ ದೊರೆಯುತ್ತಿಲ್ಲ. ಸಾರ್ವಜನಿಕವಾಗಿ ಪ್ರದರ್ಶನಗೊಳ್ಳದ ಸಿನಿಮಾಗಳು ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿವೆ. ಇದಕ್ಕಾಗಿ ಲಾಭಿ ನಡೆಯುತ್ತಿದೆ. ಇದರ ಬಗ್ಗೆ ಜಾಗೃತಗೊಳ್ಳುವ ಅವಶ್ಯಕತೆ ಇದೆ. ಈ ಹಿನ್ನೆಲೆ ಒಕ್ಕೂಟ ರಚನೆಗೆ ನಿರ್ಧರಿಸಲಾಗಿದೆ. ತಾ. ೨೦ ರಂದು ಈ ಸಂಬAಧ ಸ್ಥಳೀಯ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಕಲಾವಿದರ ಸಭೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ನಿರ್ಮಾಪಕ ಕಾಳಿಮಾಡ ದಿನೇಶ್ ನಾಚಪ್ಪ ಮಾತನಾಡಿ, ಇದು ಕೊಡವ ಸಿನಿಮಾ ಕ್ಷೇತ್ರದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಪ್ರಶಸ್ತಿ, ಸಬ್ಸಿಡಿಯನ್ನು ಗುರಿ ಇಟ್ಟುಕೊಂಡು ಸಿನಿಮಾ ತಯಾರು ಮಾಡಲಾಗುತ್ತಿದೆ. ಭಾಷೆ, ಸಂಸ್ಕೃತಿಗೆ ಒತ್ತು ನೀಡದೆ, ಸ್ಥಳೀಯರಿಗೆ ಆದ್ಯತೆ ನೀಡದ ಸಿನಿಮಾಕ್ಕೆ ಎಲ್ಲ ಸವಲತ್ತು ದೊರೆತಿರುವುದು ವಿಷಾದನೀಯ ಎಂದರು. ಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಬಾಚಮಡ ವಿಶು ಕರುಂಬಯ್ಯ, ಆಚೆಯಡ ಗಗನ್ ಗಣಪತಿ, ಕಲಾವಿದೆ ಮಂಡೀರ ಪದ್ಮ ಬೋಪಯ್ಯ ಹಾಜರಿದ್ದರು.