ಸೋಮವಾರಪೇಟೆ, ಏ.೧೧ : ವಿಧಾನ ಸಭಾ ಚುನಾವಣೆಯ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಾ. ಮಂಥರ್ಗೌಡ ಅವರು ತಾ. ೧೩ ರಂದು (ಇಂದು) ಸೋಮವಾರಪೇಟೆ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಜಿ. ಇಂದ್ರೇಶ್ ತಿಳಿಸಿದ್ದಾರೆ.
ತಾ. ೧೩ ರಂದು ದೊಡ್ಡಮಳ್ತೆ, ಬೀಟಿಕಟ್ಟೆ, ಶುಂಠಿ, ಬಸವನಕೊಪ್ಪ, ಕೋಟೆಯೂರು, ಕೂಗೂರು, ಹೆಗ್ಗಳ, ಮಾದಾಪುರ, ಜಂಬೂರು ಪುನರ್ವಸತಿ ಕಾಲೋನಿ, ಜಾರುಕೊಲ್ಲಿ, ಗರಗಂದೂರು, ಮಲ್ಲಿಕಾರ್ಜುನ ಕಾಲೋನಿ, ಹೊಸತೋಟಗಳಲ್ಲಿ ಸಭೆ ನಡೆಸಲಿದ್ದಾರೆ ಎಂದು ಇಂದ್ರೇಶ್ ತಿಳಿಸಿದ್ದಾರೆ.