ಮಡಿಕೇರಿ, ಏ. ೧೨: ಕೊಡಗು ಐರಿ ಸಮುದಾಯಗಳ ಮಧ್ಯೆ ನಡೆಯುವ ೯ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯ ಲಾಂಛನವನ್ನು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಬಿಡುಗಡೆ ಗೊಳಿಸಲಾಯಿತು.

ಐರಿ ಜನಾಂಗದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸತತ ಏಳು ಬಾರಿ ಚಾಂಪಿಯನ್ ಆಗಿದ್ದ ಐರೀರ ಬಲ್ಲಮಾವಟಿ ತಂಡದ ಆಟಗಾರ ಐರೀರ ಚಂಗಪ್ಪ ಲೋಗೋ ಬಿಡುಗಡೆ ಮಾಡಿದರು.

ಈ ಸಂದರ್ಭ ಐನ್‌ಮನೆ ಟ್ರೋಫಿ ಕ್ರಿಕೆಟ್ ಆಯೋಜನಾ ಸಮಿತಿ ಕಾರ್ಯದರ್ಶಿ ಮುಲ್ಲೆöÊರಿರ ರೋಷನ್ ಸುಬ್ಬಯ್ಯ, ಸದಸ್ಯರಾದ ಮುಲ್ಲೆöÊರಿರ ಮೋಹನ್ ಗಣಪತಿ, ಐಮಣಿಯಂಡ ಕಿಶೋರ್ ಕಾವೇರಪ್ಪ, ಕರಕುಶಲಕರ್ಮಿ ಐನಂಗಡ ಉದಯ್, ಸದಸ್ಯರಾದ ಮುಲ್ಲೆöÊರಿರ ಸುಬ್ಬಯ್ಯ, ಆಯಪಂಡ ದಿಲನ್, ಕುಂದೈರಿರ ರೇಖಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾ. ೨೨, ೨೩ ರಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಪಂದ್ಯಾಟ ನಡೆಯಲಿದ್ದು, ೨೦ ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿವೆ.

ಹೆಣ್ಣುಮಕ್ಕಳಿಗೂ ಪ್ರದರ್ಶನ ಕ್ರಿಕೆಟ್ ಪಂದ್ಯಾಟ ಏರ್ಪಡಿಸಲಾಗಿದೆ. ಮಹಿಳೆಯರಿಗೆ ಹಗ್ಗ ಜಗ್ಗಾಟ ಹಾಗೂ ವಿವಿಧ ವಯೋಮಾನದ ಪುರುಷ ಹಾಗೂ ಮಹಿಳೆಯರಿಗೆ ೧೦೦ ಮೀಟರ್ ಓಟ, ಪುಟ್ಟ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಎಲ್ಲಾ ಸ್ಪರ್ಧೆಗಳಲ್ಲಿ ವಿಜೇತರಾಗಿ ಅತಿ ಹೆಚ್ಚು ಅಂಕಗಳಿಸುವ ಕುಟುಂಬಕ್ಕೆ ಆಕರ್ಷಕ ಐನ್‌ಮನೆ ಮಾದರಿಯನ್ನು ಟ್ರೋಫಿ ಯನ್ನಾಗಿ ನೀಡಲಾಗುತ್ತದೆ ಎಂದು ಆಯೋಜನಾ ಸಮಿತಿ ಸಂಚಾಲಕ ಐಮಂಡ ಶಬರಿ ನಾಚಪ್ಪ ತಿಳಿಸಿದ್ದಾರೆ.

ಐನ್ ಮನೆ ಟ್ರೋಫಿ -೨೦೨೩ ಕ್ರೀಡಾಕೂಟವನ್ನು ಐರಿಮಕ್ಕಡ ಕೂಟ ಮತ್ತು ಐರಿ ಸಮಾಜ ಅರಮೇರಿ ಜಂಟಿ ಆತಿಥ್ಯದಲ್ಲಿ ನಡೆಸಲಾಗುತ್ತಿದೆ.