ಕಣಿವೆ, ಏ. ೧೧ : ಈ ಬಾರಿ ಯಾಕೋ ಏನೋ ವರುಣ ಮುನಿದಂತಿದೆ. ಕಳೆದ ಜನವರಿಯಿಂದ ಕುಶಾಲನಗರ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಮಳೆ ಬರಲೇ ಇಲ್ಲ. ದಿನೇ ದಿನೇ ತಾಪಮಾನ ಹೆಚ್ಚಾಗುತ್ತಿದ್ದು ಉಷ್ಣಾಂಶ ದಿನೇ ದಿನೇ ಏರುತ್ತಲೇ ಇದೆ.

ಸೋಮವಾರ ೩೪ ಡಿಗ್ರಿ ಸೆಲ್ಸಿಯಸ್ ಇತ್ತು. ಅಂದರೆ ಭೂಮಿಯ ಮೇಲ್ಮೆöÊ ಸಂಪೂರ್ಣ ಕಾಯುತ್ತಿದ್ದು ಹುಲ್ಲಿನ ಗರಿಕೆಯೂ ಕೂಡ ಒಣಗುತ್ತಿದೆ. ಹಾಗೆಯೇ ನಗರ ಪಟ್ಟಣ ಪ್ರದೇಶಗಳಲ್ಲಿ ಕಟ್ಟಿಕೊಂಡಿರುವ ಕಾಂಕ್ರೀಟ್ ಮನೆಗಳ ಮೇಲ್ಛಾವಣಿಗಳು ಕೂಡ ಪೂರ್ಣ ಪ್ರಮಾಣದಲ್ಲಿ ಕಾಯುತ್ತಿದ್ದು ಮನೆಯೊಳಗೆ ಇರುವವರು ಬೇಯುವಂತಾಗಿದೆ.

ಅAದರೆ ಎಸಿ, ಫ್ಯಾನ್, ಕೂಲರ್‌ಗಳಿಲ್ಲದೇ ಮನೆಯೊಳಗೆ ಇರಲಾಗುತ್ತಿಲ್ಲ. ಒಂದು ವೇಳೆ ಕರೆಂಟ್ ಏನಾದರೂ ಕೈಕೊಟ್ಟರೆ ಮಂದಿಯ ಗತಿ ದೇವರೇ ಗತಿ.

ಕಳೆದ ವರ್ಷ ಜನವರಿಯಿಂದಲೇ ನಿರಂತರವಾಗಿ ಮಳೆ ಸುರಿದು ಬೇಸಗೆಯ ಧಗೆಯ ದಿನಗಳನ್ನು ಮರೆಸಿದ್ದ ವರುಣ ಈ ಬಾರಿ ಮುನಿದಿರುವ ವರುಣನ ಕುರಿತು ಪೂಜೆ, ಪ್ರಾರ್ಥನೆಗಳು ಜರುಗುತ್ತಿವೆ.

ಪುಣ್ಯಕ್ಕೆ ಹಾರಂಗಿ ಜಲಾಶಯದಲ್ಲಿ ಒಂದಿಷ್ಟು ನೀರು ಶೇಖರಣೆಯಾಗಿದ್ದರಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿವ ನೀರಿಗಾಗಿ ಸ್ವಲ್ಪ ಪ್ರಮಾಣದಲ್ಲಿ ನದಿಯಲ್ಲಿ ನೀರು ಹರಿಸಲಾಗುತ್ತಿದೆ.

ಇದು ಕುಶಾಲನಗರ ತಾಲೂಕಿನ ಕೂಡಿಗೆ, ಹೆಬ್ಬಾಲೆ, ತೊರೆನೂರು ಹಾಗೂ ಶಿರಂಗಾಲ ಗ್ರಾಮ ಪಂಚಾಯಿತಿಗಳ ನದಿಯಂಚಿನ ಗ್ರಾಮಗಳ ಜನ ಹಾಗೂ ಜಾನುವಾರುಗಳಿಗೆ ಪ್ರಯೋಜನವಾಗುತ್ತಿದೆ. ಆದರೆ ಉಳಿದ ಗ್ರಾಮಗಳ ಜನ ಹಾಗೂ ಜಾನುವಾರುಗಳ ಸ್ಥಿತಿ ?

ಇನ್ನು ಕಾವೇರಿ ನದಿಯಲ್ಲಿ ನೀರು ಇನ್ನು ಹತ್ತು ದಿನಗಳ ಕಾಲ ಹರಿದರೆ ಹೆಚ್ಚು. ಅಷ್ಟರ ಮಟ್ಟಿಗೆ ಕಾವೇರಿ ಕೂಡ ಬತ್ತುತ್ತಿದೆ. ಆದ್ದರಿಂದ ವರುಣದೇವ ಇನ್ನಾದರೂ ಕೃಪೆ ತೋರಬೇಕೆಂಬುದು ಕೃಷಿಕರ, ಜನಸಾಮಾನ್ಯರ ಹಾಗೂ ಜೀವಕೋಟಿಗಳ ಸಾಮೂಹಿಕ ಪ್ರಾರ್ಥನೆ.