ಮಡಿಕೇರಿ, ಏ. ೧೧: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್, (ನೀಮಾ) ಕೊಡಗು ಜಿಲ್ಲಾ ಘಟಕ ವತಿಯಿಂದ ತಾ.೧೩ ರಂದು ಜಿಲ್ಲೆಯಾದ್ಯಂತ ೩೦ಕ್ಕೂ ಹೆಚ್ಚಿನ ಆಯುರ್ವೇದ ವೈದ್ಯರು ತಮ್ಮ ಚಿಕಿತ್ಸಾಲಯಗಳಲ್ಲಿ ನೀಮಾ ದಿನಾಚರಣೆ ಆಯೋಜಿಸಿದ್ದಾರೆ.

ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ವಿವಿಧ ಆರೋಗ್ಯ ಚಿಕಿತ್ಸಾ ಕಾರ್ಯಕ್ರಮಗಳು ಉಚಿತವಾಗಿ ನಡೆಯಲಿವೆ. ಸೋಮವಾರಪೇಟೆ ತಾಲೂಕಿನ ಆಯುರ್ವೇದ ಚಿಕಿತ್ಸಾಲಯಗಳಲ್ಲಿ ಮಕ್ಕಳ ಆರೋಗ್ಯಕ್ಕೆ ಸಂಬAಧಿಸಿದAತೆ ಚಿಕಿತ್ಸೆ, ಮಾಹಿತಿ, ಕುಶಾಲನಗರ ತಾಲೂಕಿನ ಆಯುರ್ವೇದ ಚಿಕಿತ್ಸಾಲಯಗಳಲ್ಲಿ ವಿಶೇಷ ಚೇತನರಿಗೆ ಚಿಕಿತ್ಸೆ, ಮಾಹಿತಿ, ಮಡಿಕೇರಿ ತಾಲೂಕಿನ ಆಯುರ್ವೇದ ಚಿಕಿತ್ಸಾಲಯಗಳಲ್ಲಿ ಮಹಿಳೆಯರಿಗೆ ಚಿಕಿತ್ಸೆ, ಮಾಹಿತಿ, ವೀರಾಜಪೇಟೆ ತಾಲೂಕಿನ ಆಯುರ್ವೇದ ಚಿಕಿತ್ಸಾಲಯಗಳಲ್ಲಿ ಯುವಕ, ಯುವತಿಯರಿಗೆ ಆರೋಗ್ಯ ಸಂರಕ್ಷಣೆಯ ಮಾಹಿತಿ, ಚಿಕಿತ್ಸೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ,

ಅಲ್ಲದೇ ಹಲವರಿಗೆ ಕಾಡುತ್ತಿರುವ ಥೈರಾಯ್ಡ್, ಬೊಜ್ಜುತನ, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಪಿ.ಸಿ.ಓ.ಡಿ ಸಮಸ್ಯೆಗಳಿಗೆ ಮನೆಯಲ್ಲೇ ಮಾಡಬಹುದಾದ ಯೋಗಾಸನಗಳ ಮಾಹಿತಿಯನ್ನು ಎಲ್ಲರ ಉಪಯೋಗಕ್ಕಾಗಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುವುದೆಂದು ನೀಮಾ ಜಿಲ್ಲಾಧ್ಯಕ್ಷ ಡಾ. ರಾಜಾರಾಮ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.