ಮಡಿಕೇರಿ, ಏ. ೧೧: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಹೊದ್ದೂರು ಗ್ರಾಮದ ವಾಟೆಕಾಡುವಿನ ಸ್ಮಶಾನ ಜಾಗದ ಪಕ್ಕದಲ್ಲಿರುವ ಕಾವೇರಿ ಹೊಳೆಯಲ್ಲಿ ಗಂಡಸಿನ ಮೃತದೇಹವು ಪತ್ತೆಯಾಗಿದೆ.

ಪ್ರಾಯ ಅಂದಾಜು ೪೦ ವರ್ಷವಾಗಿದ್ದು, ವ್ಯಕ್ತಿಯು ನೀರಿಗೆ ಬಿದ್ದು ಮೃತಪಟ್ಟಿರುವುದರಿಂದ ಇವರ ಗುರುತಿನ ಬಗ್ಗೆ ಯಾವುದೇ ಮಾಹಿತಿ ಕಂಡು ಬಾರದೆ ಇದ್ದು, ಮೃತದೇಹವನ್ನು ಮಡಿಕೇರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಆ್ಯಂಬುಲೆನ್ಸ್ನಲ್ಲಿ ಸಾಗಿಸಲಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂಬರ್ ೧೫/೨೦೨೩ ಕಲಂ ೧೭೪ ಸಿ.ಆರ್.ಪಿ.ಸಿ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ.

ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಪಿ.ಐ. ಮಡಿಕೇರಿ ಗ್ರಾಮಾಂತರ ಠಾಣೆ ದೂರವಾಣಿ ಸಂಖ್ಯೆ : ೯೪೮೦೮೦೪೯೪೬ ಅಥವಾ ಪಿ.ಎಸ್.ಐ. ಮಡಿಕೇರಿ ಗ್ರಾಮಾಂತರ ಠಾಣೆ ದೂರವಾಣಿ ಸಂಖ್ಯೆ : ೦೮೨೭೨- ೨೨೮೭೭೭ ಗೆ ಕರೆ ಮಾಡಿ ಮಾಹಿತಿ ನೀಡಲು ಪ್ರಕಟಣೆ ತಿಳಿಸಿದೆ.