ಚೆಟ್ಟಳ್ಳಿ, ಏ. ೧೧ : ಚೆಟ್ಟಳ್ಳಿಯ ಶ್ರೀಮಂಗಲ ಭಗವತಿ ಉತ್ಸವವು ತಾ. ೧೪ ಹಾಗೂ ೧೫ ರಂದು ನಡೆಯಲಿದೆ.

ತಾ. ೧೧ ರ ರಾತ್ರಿ ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ಶುದ್ಧಕಳಸ ಪೂಜೆ ಸಲ್ಲಿಸಿ ಬೊಳಕ್ ಮರವನ್ನಿಟ್ಟು ಹಬ್ಬಕಟ್ಟು ಹಾಕಲಾಯಿತು. ತಾ. ೧೪ರ ಪಟ್ಟಣಿ ಹಬ್ಬ. ಮಧ್ಯಾಹ್ನ ೨ ಗಂಟೆಗೆ ದೇವಾಲಯ ತಕ್ಕರಾದ ಮುಳ್ಳಂಡ ಐನ್‌ಮನೆಯಿಂದ ಎತ್ತುಪೋರಾಟ ದೊಂದಿಗೆ ದೇವರ ಭಂಡಾರವನ್ನು ತರುವುದು. ತಾ. ೧೫ ರಂದು ದೊಡ್ಡ ಹಬ್ಬವಾಗಿದ್ದು, ದೇವರ ಭಂಡಾರವನ್ನು ದೇವಾಲಯಕ್ಕೆ ತರುವುದು, ವಿಶೇಷ ಪೂಜೆ, ತೆಂಗಿನಕಾಯಿ ಎಳೆಯುವುದು, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಬೊಳಕ್ ಮರವನ್ನು ದೇವಾಲಯಕ್ಕೆ ಇಡಲಾಗುವುದು. ನಂತರ ಪ್ರಸಾದ ವಿತರಣೆ ನೆರವೇರಲಿದೆ. ತಾ. ೧೬ ರಂದು ಪೂರ್ವಾಹ್ನ ೭ ಗಂಟೆಗೆ ಶುದ್ಧಕಳಸ ಪೂಜೆ ನೆರವೇರಿಸಿ ದೇವರ ಭಂಡಾರವನ್ನು ತಕ್ಕರಾದ ಮುಳ್ಳಂಡ ಐನ್‌ಮನೆಯಲ್ಲಿ ಒಪ್ಪಿಸಲಾಗುವುದು.