ಸೋಮವಾರಪೇಟೆ, ಏ. ೧೧: ಶನಿವಾರಸಂತೆ ಪಟ್ಟಣದಲ್ಲಿರುವ ಶ್ರೀ ಚಾಮುಂಡೇಶ್ವರಿ-ಗುಳಿಗ ದೈವದ ಕ್ಷೇತ್ರದಲ್ಲಿ ತಾ.೧೪ ಹಾಗೂ ೧೫ರಂದು ವಾರ್ಷಿಕೋತ್ಸವದ ವಿಶೇಷ ಪೂಜಾ ಕಾರ್ಯಗಳು ನಡೆಯಲಿದೆ ಎಂದು ಆಡಳಿತ ಮಂಡಳಿಯ ಮುಖ್ಯಸ್ಥರಾದ ನಯನತಾರಾ ತಿಳಿಸಿದ್ದಾರೆ.
ತಾ.೧೪ ರಂದು ಬೆಳಿಗ್ಗೆ ೯ ಗಂಟೆಯಿAದ ಗಣಪತಿ ಹೋಮ, ದುರ್ಗಾ ಹೋಮ, ನವ ಕಲಶ ಪೂಜೆ ನಡೆಯಲಿದೆ. ತಾ.೧೫ ರಂದು ಹರಕೆ ಬಲಿಪೂಜೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.