ಮಡಿಕೇರಿ, ಏ. ೧೧: ಕೇಂದ್ರ, ರಾಜ್ಯ ಸರಕಾರಗಳು ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ಕಸ ವಿಲೇವಾರಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರೂ, ಕೆಲ ಸಾರ್ವಜನಿಕರ ಅಸಹಾಕಾರ ಸ್ವಚ್ಛ ದೇಶ, ನಗರಗಳ ಕನಸ್ಸಿಗೆ ಅಡ್ಡಿಯಾಗಿದೆ. ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ದಂಡ ವಿಧಿಸಲು ಪ್ರಾರಂಭಿಸಿದರೂ ಪೂರ್ಣ ಪ್ರಮಾಣದಲ್ಲಿ ತ್ಯಾಜ್ಯ ಮುಕ್ತ ನಗರ ಎಂದು ಇಂದಿಗೂ ಕೂಡ ದೇಶದ ಯಾವುದೇ ನಗರಿ ಕಿರೀಟ ಹೊತ್ತಿಲ್ಲ. ಕೊಡಗು ಜಿಲ್ಲೆಯೂ ಇದಕ್ಕೆ ಸಾಕ್ಷಿಯಾಗಿದೆ.

ಆದರೆ, ಇವೆಲ್ಲದರ ನಡುವೆ, ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಎಂಬ ಜಿಲ್ಲೆಯ ಸಾದಿವಾರ ಗ್ರಾಮದಲ್ಲಿ ಗ್ರಾಮದ ಪ್ರಮುಖರೊಬ್ಬರ ವಿನೂತನ ಪ್ರಯತ್ನದಿಂದ ಗ್ರಾಮವು ಪ್ಸಾಸ್ಟಿಕ್ ಮುಕ್ತ ಎನಿಸಿಕೊಂಡಿದೆ. ಇವರು ಸರಕಾರಿ ಯೋಜನೆಗಳ ರೀತಿ ಯಾವುದೇ ವಿಲೇವಾರಿ ಘಟಕ ತೆರೆದಿಲ್ಲ. ಯಾವುದೇ ಅತ್ಯಾಧುನಿಕ ಕಸದ ಬುಟ್ಟಿಗಳನ್ನೂ ಅಳವಡಿಸಿಲ್ಲ. ಬದಲಿಗೆ, ಪ್ಲಾಸ್ಟಿಕ್ ತ್ಯಾಜ್ಯ ನೀಡುವವರಿಗೆ ಕೃತಜ್ಞತಾ ರೂಪವಾಗಿ ೧೦ ಗಾಂ ಚಿನ್ನದ ನಾಣ್ಯ ನೀಡಿ ಪ್ರೋತ್ಸಾಹಿಸಲು ಮುಂದಾಗಿ ಯಶಸ್ವಿಯಾಗಿದ್ದಾರೆ. ಯೋಜನೆ ಜಾರಿಗೆ ತಂದು ಕೇವಲ ೧೫ ದಿನಗಳಲ್ಲಿ ಗ್ರಾಮವು ಪ್ಲಾಸ್ಟಿಕ್ ಮುಕ್ತ ಎನಿಸಿಕೊಂಡಿದೆ.

ಅನAತ್‌ನಾಗ್ ಜಿಲ್ಲೆಯ ಸಾದಿವಾರ ಗ್ರಾಮ ಪಂಚಾಯಿತಿಯ ಸರ್‌ಪಾಂಚ್(ಗ್ರಾಮದ ಮುಖ್ಯಸ್ಥ), ವೃತ್ತಿಯಲ್ಲಿ ವಕೀಲರಾಗಿರುವ ಫರೂಕ್ ಅಹ್ಮದ್ ಘನಾಯ್ ಅವರ ಚಿಂತನೆಯಿAದ ಇದೀಗ ಗ್ರಾಮದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯ ಬಹುತೇಕ ಮಾಯವಾಗಿದೆ. ೨,೦೦೦ ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿದರೆ ೧೦ ಗ್ರಾಂ ಚಿನ್ನದ ನಾಣ್ಯ ನೀಡುವುದಾಗಿ ಘನಾಯ್ ಅವರು ಘೋಷಿಸಿದ ಬಳಿಕ ಸಾರ್ವಜನಿಕರು, ಸಂಘ-ಸAಸ್ಥೆಗಳು, ಸ್ವಯಂ ಸೇವಕರಾದಿ ರಸ್ತೆಗಿಳಿದು ತ್ಯಾಜ್ಯ ಸಂಗ್ರಹಾತಿಯಲ್ಲಿ ತೊಡಗಿಸಿಕೊಂಡರು. ರಸ್ತೆ ಮಾತ್ರವಲ್ಲದೆ ನೀರಿನ ಮೂಲಗಳಿಂದಲೂ ಕೂಡ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಜನರು ಮುಂದಾಗಿದ್ದು, ಇದೀಗ ನದಿ, ಕೆರೆಗಳೂ ಕಸ ಮುಕ್ತವಾಗಿವೆ.

ಅನಂತ್‌ನಾಗ್ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ಬಷಾರತ್ ಕಾಯಂ ಅವರೊಂದಿಗೆ ಚರ್ಚಿಸಿ ಪ್ರಸಕ್ತ ವರ್ಷದ ಜನವರಿಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಪ್ಲಾಸ್ಟಿಕ್ ಸಂಗ್ರಹಾತಿ ಕೇಂದ್ರಗಳನ್ನು ಗುರುತಿಸಲಾಗಿದೆ. ಘನಾಯ್ ಅವರು ೩೦ ಸ್ವಯಂ ಸೇವಕರನ್ನು ನೇಮಿಸಿದ್ದಾರೆ. ಸಂಗ್ರಹಣೆಗೊAಡ ಪ್ಲಾಸ್ಟಿಕ್‌ಅನ್ನು ಘನಾಯಿ ಅವರು ಸ್ವೀಕರಿಸಿ ಸಂಗ್ರಹಾತಿ ಮಾಡಿದವರಿಗೆ ೧೦ ಗ್ರಾಂ ಚಿನ್ನ ನೀಡುತ್ತಾರೆ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪಂಚಾಯಿತಿ ಸದಸ್ಯರಿಗೆ ಸೂಕ್ತ ವಿಲೇವಾರಿ ಮಾಡಲು ವಿತರಿಸುತ್ತಾರೆ.